೨೧
ಗುಟ್ಟಾಗಿ ನಡೆಸುವುದನ್ನು ಕಂಡು ಉಮಾಕುಮಾರಿಗೆ, ಒಂದೆಡೆ ಅತಿಮತ್ಸರ, ಇನ್ನೊಂದೆಡೆ ಅತಿ ಬೇಸರ, ಜುಗುಪ್ಸೆ.
ಕಾಲೇಜಿನ ಓದು ಮುಗಿಸುವಾಗ ಪ್ರೌಢ ವಯಸ್ಸು ಬಂದಿದ್ದುದರಿಂದ, ವಿಷಯದ ಪರಿಚಯವು ಸಾಕಷ್ಟು ಇದ್ದುದರಿಂದ, ಆಸೆ ಆಚಾರ-ಬಯಕೆ ಬಂಧನ- ಇಷ್ಟ ಅನಿಷ್ಟ-ಇವೆಲ್ಲ ದ್ವಂದ್ವಗಳೂ ಕಾಡಲಾರಂಭಿಸಿದ್ದುವು. ಆದರೆ ಓದು, ಡಿಗ್ರಿ ಪಡೆಯಬೇಕು, ಕ್ಲಾಸ್ ಗಿಟ್ಟಸಬೇಕು ಎನ್ನುವ ಧೈಯಗಳೂ ಮನಸ್ಸನ್ನು ಹಿಡಿದಿದ್ದುವು. ಆದಕಾರಣ ದ್ವಂದ್ವವಾದ ಆಸೆ ಆಚಾರ ಇತ್ಯಾದಿಗಳು ಮನಸ್ಸಿನ ಹಗೇವುಗಳಲ್ಲಿ ದೂಡಲ್ಪಟ್ಟಿದ್ದುವು.
B.Sc., ಆಯಿತು. ಸಂಗೀತದ ಪ್ರಯತ್ನವೂ ಆಯಿತು. B. Ed. ಕೂಡ ಆಯಿತು. ಮಕ್ಕಳಿಗೆ ಪಾಠವನ್ನು ಕಲಿಸುವ ಕೆಲಸವು ಬರಬರುತ್ತ ಇಷ್ಟವಾಗಿದ್ದಿದ್ದರೂ, ಮನಸ್ಸನ್ನು ಸೆರೆಹಿಡಿಯುವಂತಹ ಧೈಯವಾಗಿರಲಿಲ್ಲ. ಇಂತಹ ಉಮಾಕುಮಾರಿಯ ಮನಸ್ಸಿನಲ್ಲಿ, ಆತನಕ ಮನಸ್ಸಿನ ಹಗೇವುಗಳಲ್ಲಿ ಮರೆಮಾಚಲ್ಪಟ್ಟಿದ್ದ ದ್ವಂದ್ವ ಆಸೆ-ಆಚಾರ ಇತ್ಯಾದಿಗಳು ಎದ್ದು ಬಂದು ಬುದ್ಧಿಯನ್ನು ಒಡೆಯಲಾರಂಭಿಸಿದುವು. ಈ ವಯಸ್ಸಿನ ತರುಣಿಯರಿಗೆ ಆ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಇರುವ ಆತಂಕವು, ಉಗ್ರವಾಯಿತು; ತಳಮಳವಾಯಿತು.
ಸೋದರತ್ತೆಯು ಆತ್ಮದಿಂದ ನರಳುತ್ತಿರುವುದನ್ನು ಚಿಕ್ಕಂದಿನಿಂದಲೂ ಕಂಡಿದ್ದಳು. ಬೆನ್ನು ಬಾಗಿಸಿ ಮೂಲೆ ಹಿಡಿದು ಅಸಹಾಯಳಾಗಿ ಘೋರಲು ಕೆಮ್ಮುತ್ತಿದ್ದ ಮುದುಕಿಯು, ಉಮಾಕುಮಾರಿಯ ಮನಸ್ಸಿನಲ್ಲಿ ನಾಟಿ, ಭಯ ಮತ್ತು ಬೇಸರವನ್ನು ಹುಟ್ಟಿಸಿರಲೇಬೇಕು. ಬಾಲ್ಯದ ಆ ನೆನಪು ಹಸಿರಾಗಿಯೇ ಉಳಿದಿದ್ದು, ಮನಸ್ಸಿನ ಆತಂಕವು ದೇಹದ ಅಂಗಗಳಿಗೆ ವಕ್ತಿಸುವಾಗ, ಶ್ವಾಸಕೋಶವನ್ನು ಆರಿಸಿರಲು ಸಾಧ್ಯ. ಆಗ ಮನಸ್ಸಿನ ಆತಂಕವು ಮೂಲ ಕಾರಣಗಳನ್ನು ಬದಿಗಿಟ್ಟು, ಶ್ವಾಸಕೋಶವನ್ನು ಭದ್ರವಾಗಿ ಪಟ್ಟು ಹಿಡಿದವು. ಮೂಲ ಕಾರಣದಿಂದ ಉಂಟಾದ ಆತಂಕಕ್ಕೆ ಶಮನ ಮಾಡುವ ಮಾರ್ಗವು ಇರಲಿಲ್ಲ. ಆದರೆ ಶ್ವಾಸಕೋಶಕ್ಕೆ ಆತಂಕವು ತಗುಲಿಕೊಂಡು ಕಾಡಿದರೆ, ಇದರಿಂದ ಹೀಗಾಗಿದೆ ಎನ್ನುವುದು ತಿಳಿಯುತ್ತದೆ. ಶ್ವಾಸಕೋಶದ ಏರುಪೇರು ಕಾರ್ಯವು ಆತಂಕವನ್ನು ಹಗುರು ಮಾಡುತ್ತದೆ. ಏಕೆಂದರೆ ತಿಳಿಯದೆ ಇದ್ದಾಗ, ಹಗ್ಗವೋ ಹಾವೋ ಎಂಬ ಭಯ. ತಿಳಿದರೆ, ಶ್ವಾಸಕೋಶ ಆಸ್ತ್ರ ಎನ್ನುವ ಒಂದು ರೀತಿಯ ಧೈರ್ಯ.
ಓದಿದ ತರುಣಿ, ಜಾಣೆ. ಆದರೂ ಉಸಿರಾಡುವುದು ನಿಂತೇ ಹೋಯಿತು