ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೮೨
ಮನಮಂಥನ

ಮನಸ್ಸನ್ನು ಮಥಿಸುವಾಗ, ಜೇಷ್ಠಾಳ ದಾರಿದ್ರವು ತೋರಿದಾಗ, ಇದಕ್ಕಿಂತ ಕೆಟ್ಟದ್ದು ಇನ್ನೇನು ತಾನೆ ಆಗಲು ಸಾಧ್ಯ ? ಎಂದೆನ್ನುವ ಭಾವನೆಯು ಬರುತ್ತದೆ. ಮುಂದೆ ಏನೇ ಆಗಲಿ ಈಗಿರುವ ಪರಿಸ್ಥಿತಿಗಿಂತ ಉತ್ತಮವಾಗಿಯೇ ಇರಬೇಕು ಎನ್ನುವ ಸಮಾಧಾನವೂ ಆಗುತ್ತದೆ. ಇದೂ ಒಂದು ರೀತಿಯ ತಂಪೆರೆಯುವ ಸಾಧನವೇ.

೪. ಸೋಮದ ನಂತರ ತೇಲಿ ಬಂದುದು ಶ್ರೀಭಾಗ್ಯಲಕ್ಷ್ಮಿ, ದರಿದ್ರಲಕ್ಷ್ಮಿಯ ತಂಗಿ ಈಕೆ, ಈಕೆಯ ಜತೆಯಲ್ಲಿದ್ದರೆ, ಶ್ರೀಮನ್ನಾರಾಯಣ ಎಂಬ ಪ್ರಸಿದ್ಧಿಯು ಭಗವಂತನಿಗೆ ಬರುವುದು ! ಈಕೆಯ ಜತೆಯಲ್ಲಿರದಿದ್ದರೆ ಆತ ಅಪೂರ್ಣ. ಭಕ್ತರೊಂದಿಗೆ ಸಂಪರ್ಕವನ್ನು ಹೊಂದಲಾರ.

ಮನಸ್ಸು ಮಥಿಸುವಾಗ, ತಂಪೆರೆಯುವ ಸೋಮವು ಹರಡಿದಾಗ, ಸಾಂತ್ವನ ದಿಂದ ಮನಸ್ಸು ಕೆಲಸ ಮಾಡುತ್ತದೆ. ನಿರಾತಂಕವಾಗಿ ಕೆಲಸವನ್ನು ಮಾಡಲು ಸಾಧ್ಯ. ಆಗ ಭಾಗ್ಯವು ದೊರೆಯುವ ಅವಕಾಶವು ಹೆಚ್ಚು. ಶ್ರೀಯು ಕರುಣಿಸುತ್ತಾಳೆ.

೫, ೬ ೭. ಶ್ರೀಯ ನಂತರ ಪುರಾಣದ ಕತೆಯಲ್ಲಿ ಸುರಾದೇವೀ, ತುರಗ, ಕೌಸ್ತುಭವೆಂಬ ದಿವ್ಯ ಮಣಿಯು ಉತ್ಪನ್ನವಾದುವಂತೆ.

ಮನಸ್ಸು ಮಥಿಸಿದಾಗ ಭಾಗ್ಯವು ನನ್ನದಾಯಿತು ಎಂದು ನಂಬಿದಾಗ, ಸುರಾದೇವಿಯು ತುಟಿಯತ್ತ ನೊರೆ ನೊರೆಯಾಗಿ ಚಿಮ್ಮುತ್ತ ಬರುತ್ತಾಳೆ. ವಾಹನ ಮತ್ತು ವಜ್ರ ವೈಢರಗಳೂ ಮನಸ್ಸನ್ನು ಆಕರ್ಷಿಸುತ್ತವೆ.

೮. ಅನಂತರ ಪಾರಿಜಾತವು ಉತ್ಪನ್ನವಾಯಿತಂತೆ. ಹೂ ಹಗುರವೆಂಬುದು ಪಾರಿಜಾತದಿಂದ ಪ್ರೇರಿತವಾಗಿರಬಹುದು. ಎಂತೆಂತಹ ಒಡವೆಗಳನ್ನೂ ಧರಿಸಿದರೂ ಹೂವನ್ನು ಮುಡಿದುಕೊಳ್ಳದಿದ್ದರೆ ಶೃಂಗಾರವು ಪೂರ್ಣವಾಗುವುದಿಲ್ಲ. ಹೂವಿನ ಮಾಲೆಯು ಪವಿತ್ರದ ನಿರ್ಮಲ ಸಂಕೇತ.

೯. 'ಸುರಭಿ'ಯು ನಂತರ ಉತ್ಪನ್ನವಾಯಿತಂತೆ ; ಬ್ರಹ್ಮಾಂಡದ ಆದಿಮೂಲವಾದ ಬ್ರಹ್ಮವನ್ನು ಕುರಿತು ಜಿಜ್ಞಾಸೆ ಮಾಡುವ ಮಹಾಮುನಿಗಳು ಇಚ್ಛಿಸುವದನ್ನೆಲ್ಲಾ ಸುರಭಿಯು ನೀಡುವುದಂತೆ. ಸರ್ವ ಕಾಮ ಫಲ ಪ್ರದವಂತೆ.

ಮನಸ್ಸು ಮಥಿಸಿ, ಭಾಗ್ಯಲಕ್ಷ್ಮಿಯು ಲೌಕಿಕ ಕಾವ್ಯಗಳನ್ನು ನೀಡಿದ ಮೇಲೆ, ಯಾವುದೋ ಒಂದು ಕೊರತೆಯು ಮನಸ್ಸಿನಲ್ಲಿ ಉಳಿದಿರುತ್ತದೆ. The sweetest songs are those that tell of saddest thought. ಅತ್ಯಂತ ದುಃಖಕರವಾದ ಯೋಚನೆಯು ಅತ್ಯಂತ ಹಿತವಾಗಿಯೂ ಇರುತ್ತದೆ. ಅಂತಹ ಯೋಚನೆಯು ಯಾವುದು? ಆದಿಮೂಲದಿಂದ ಬೇರ್ಪಟ್ಟು ಬಂದು ತೌರನ್ನು ಪುನಃ ಕಾಣದೆ,