ಮನಮಂಥನ
ಕನಸಿನ ಲೋಕದಲ್ಲಿ ಅಪ್ಸರೆಯರು ಮತ್ತು ಗಂಧರ್ವರು ನಮಗಿಂತ ಸ್ವಲ್ಪ ಕಳಪೆ ಎಂದುಕೊಳ್ಳುವವರೇ ! ನನ್ನ ಮನಸ್ಸಿನಲ್ಲಿ 'ನನಗಿಂತ ಸುಂದರವಾದುದು ಇಲ್ಲವೇ ಇಲ್ಲ. ವಾಸ್ತವಿಕ ಪ್ರಪಂಚದಲ್ಲಿ ಇದಕ್ಕೆ ಸಾಕ್ಷ್ಯವು ಸಿಗುವುದಿಲ್ಲ. ಆದರೆ ಮನಸ್ಸಿನ ನಿದ್ರಾವಸ್ಥೆಯಲ್ಲಿ ಮೂಡಿಬರುವ ಕನಸ್ಸಿನ ಪ್ರಪಂಚದಲ್ಲಿ 'ನನಗಿಂತ ಸುಂದರವಾದುದು ಇಲ್ಲ ಎಂಬುದು ಖಚಿತವಾಗಿರುತ್ತದೆ. ಈ ನಂಬಿಕೆಯನ್ನು ತಪ್ಪಿಸುವುದಾವುದೂ ಇರುವುದಿಲ್ಲ.
೧೩. ಆನಂತರ ಪುರಾಣದ ಕತೆಯಲ್ಲಿ 'ವಪುಷ್ಮಾನ್ ಉಪತಿಷ್ಠತ' ನಾಗಿದ್ದ ಧನ್ವಂತರಿಯು ತೇಲಿ ಬಂದನಂತೆ.
ಮನಸ್ಸಿನ ಮಥನದಲ್ಲಿ, ಚತುರ್ದಂತಿಯಂತಹ ಮಹಾಶಕ್ತಿಯುಳ್ಳ ಮನಸ್ಸು ದೃಢವಾಯಿತು. ಆನಂತರ ಮನಸ್ಸು ನಿದ್ರಾವಸ್ಥೆಯಲ್ಲಿ, ಎಚ್ಚರವಾಗಿರುವಾಗ ಅನುಭವಿಸಲಾಗದ ಕಾವ್ಯಗಳನ್ನು, ಅನುಭವಿಸಲು ಸಾಧ್ಯವಾಯಿತು. ಕನಸಿನ ಅನುಭವಗಳಿಂದ ಸಂಪೂರ್ಣ ತೃಪ್ತಿಯನ್ನು ಪಡೆಯಲು ಅಸಾಧ್ಯ. ಆದುದರಿಂದ ಮನಸ್ಸಿನ ಗರ್ಭದಲ್ಲಿ ಯಾವುದೋ ಇದೆ. ಅದನ್ನು ಪಡೆದರೆ ಸಂಪೂರ್ಣವಾದ, ಸದಾ ಕಾಲವೂ ಇರುವ ತೃಪ್ತಿಯು ಲಭ್ಯವಾಗುತ್ತದೆ. ಎನ್ನುವ ಅನುಮಾನವು ಉಂಟಾಗುತ್ತದೆ. ಅದನ್ನು ಪ್ರತ್ಯಕ್ಷ ಮಾಡಿಕೊಳ್ಳಬೇಕು ಎಂಬ ಹೆಬ್ಬಯಕೆಯೆಯು ಮೂಡುತ್ತದೆ. ಇಂತಹ ಹಿರಿ ಹಂಬಲವು ಮನಸ್ಸನ್ನು ಪೂರ್ತಿ ಮುತ್ತಿಕೊಂಡಾಗ ಇತರ ಕಾಮನೆಗಳು ಯಾವುವೂ ಮನಸ್ಸನ್ನು ಕಾಡುವುದಿಲ್ಲ. ಮನಸ್ಸಿನ ಇಂತಹ ಸ್ಥಿತಿಯನ್ನು Meditation ಅಥವಾ ಧ್ಯಾನ ಎನ್ನುತ್ತಾರೆ. ಅಂಬಿನಂತೆ ನೇರವಾಗಿ, ಮನಸ್ಸು ಚಂಚಲತೆಯನ್ನು ಕಳೆದುಕೊಂಡು, ಮುನ್ನಡದರೆ, ಧನ್ವಂತರಿ ಎಂಬ ಹೆಸರಿನ ದೇವನು ಪ್ರತ್ಯಕ್ಷವಾಗುತ್ತಾನೆ. ಮನಸ್ಸಿನ ಆರೋಗ್ಯವನ್ನೂ ತನ್ಮೂಲಕ ದೇಹದ ಆರೋಗ್ಯವನ್ನೂ ಧನ್ವಂತರಿಯು ರಕ್ಷಿಸುತ್ತಾನೆ. ಏಕೆಂದರೆ ಧನ್ವಂತರಿಯು ಪ್ರತ್ಯಕ್ಷವಾಗಿ ಮನಸ್ಸಿಗೆ ಗೋಚರವಾದಾಗ, ಮನಸ್ಸು Id, Ego, ಮತ್ತು Super- Ego.. ತಮೋ, ರಜಸ್ ಮತ್ತು ಸತ್-ಚೈತನ್ಯಾಂಶಗಳ ದಾಯಾದಿ ಕಲಹವು ನಿಂತು ಹೋಗುತ್ತದೆ. ತ್ರಿಗುಣಾತೀತವಾದ ಮನಸ್ಸಿನ ಅವಸ್ಥೆಯೇ, ಧನ್ವಂತರಿಯ ಅರಿವನ್ನು ಸಾಧಿಸಿ ಕೊಡುವುದು.
೧೪. ಧನ್ವಂತರಿಯು ಕತೆಯಲ್ಲಿ “ಶ್ವೇತಂ ಕಮಂಡಲುಂ ಭೀಭತ್' 'ಅಮೃತಂ' ಯತ್ರ ತಿಷ್ಠತೆ” ಅಮೃತವು ತುಂಬಿದ್ದ, ಬೆಳ್ಳನೆ ಕಮಂಡಲುವನ್ನು ಹಿಡಿದುಕೊಂಡಿದ್ದನಂತೆ. ಅಮೃತವನ್ನು ಕುಡಿದವರು ಸಾಯುವುದೇ ಇಲ್ಲವಂತೆ. ಹೆಸರೇ ಈ ಅರ್ಥವನ್ನು ಸೂಚಿಸುತ್ತದೆ.