ಮನಸ್ಸಿನ ಮಥನದಲ್ಲಿ, ಮನಸ್ಸನ್ನು ನೇರವಾಗಿ ಯಾವುದೋ ಗುರಿಯತ್ತ ನಡೆಸುವುದನ್ನು ಅಭ್ಯಾಸ ಮಾಡಿ, ಕಲಿತುಕೊಂಡರೆ, ಆಗ ಮನಸ್ಸನ್ನು ಅವ್ಯಕ್ತವಾಗಿ ನಡೆಸುತ್ತಿರುವ, ಮನಸ್ಸಿನ ತಿರುಳಿನಂತಿರುವ ಅಂಶವು ವ್ಯಕ್ತವಾಗುತ್ತದೆ. ಇದನ್ನು ಅಮೃತವೆನ್ನಬಹುದು. ಏಕೆಂದರೆ ಮನಸ್ಸಿನ ತಿರುಳಾದ ಈ ಅಂಶವು, ಮನಸ್ಸನ್ನು ಸಾಮಾನ್ಯವಾಗಿ ಜಗ್ಗಾಡಿಸುವ, Id ಅಥವಾ ಪಾಶವೀ ಶಕ್ತಿಗಳಿಂದಲೂ Ego ಎಂದು ಭ್ರಮಿಸಿ ಮೆರೆಯಿಸುವ ರಜೋಶಕ್ತಿಯಿಂದಲೂ, ಹಾಗೂ ಶಿಕ್ಷೆಯನ್ನು ಮಾಡಿ ಶಿಕ್ಷಣ ಕೊಡುತ್ತೇನೆ ಎನ್ನುವ ಮನಸ್ಸಿನ ಸತ್-ಚೈತನ್ಯಾಂಶದ Super- Ego ಪ್ರಭಾವವನ್ನೂ, ಇವು ಮೂರನ್ನೂ ನಡೆಸುವುದಾದರೂ, ಅವುಗಳಿಗೆ ಹೊರತಾಗಿರುತ್ತದೆ.
ಮೆದುಳಿನ ಬುಡದಲ್ಲಿ IIIrd Ventricle ಎಂಬುದರ ತಳದ ಸುತ್ತಲೂ ಇರುವ ಕೆಲವು ನರ ಸಮೂಹಗಳ ಕೇಂದ್ರಗಳು ವಿಚಿತ್ರವಾಗಿ ವರ್ತಿಸುತ್ತವೆ ; ಉದ್ರೇಕಿಸಿದಾಗ, ಪ್ರಯೋಗಾರ್ಥವಾಗಿ ಪ್ರಾಣಿಗಳ ಮೆದುಳಿನ ಈ ಭಾಗದಲ್ಲಿ, ವಿದ್ಯುತ್ ಶಕ್ತಿಯನ್ನು ಸೂಕ್ತ ಪ್ರಮಾಣದಲ್ಲಿ ಹರಿಸಿ ಉದ್ರೇಕಿಸಿದರೆ, ಅಂತಹ ಪ್ರಾಣಿಗಳು, ಅನಂತರ ತುಂಬಾ ಹಸಿವಾಗಿದ್ದರೂ, ಹತ್ತಿರವೇ ಸಿದ್ಧವಾಗಿರುವ ಆಹಾರದ ಬಳಿಗೆ ಓಡುವುದಿಲ್ಲ. ಬದಲು ವಿದ್ಯುತ್‌ಶಕ್ತಿಯನ್ನು ಹರಿಸಿ ಉದ್ರೇಕಿಸುವ ಬಳಿಗೆ ಓಡುತ್ತವೆ. ಅಲ್ಲಿರುವ ಕೈಹಿಡಿಯನ್ನು ಒತ್ತುತ್ತವೆ. ಇಂತಹ ಪ್ರಾಣಿಗಳು, ಋತು ಸಮಯದಲ್ಲಿ ಕಾಮೋದ್ರೇಕವಾಗಿದ್ದರೂ, ಹತ್ತಿರಲೇ ಸಿದ್ಧವಾಗಿರುವ ಜತೆಯು ಕಣ್ಣು ಕಣ್ಣು ಮಿಟಿಕಿಸಿದರೂ, ಕೈಹಿಡಿಯ ಬಳಿಗೆ ಓಡುತ್ತವೆ. ಹಿಡಿಯನ್ನು ಒತ್ತುತ್ತವೆ. ಇದರಿಂದ ಉಂಟಾದ ವಿದ್ಯುತ್ ಶಕ್ತಿಯು, ಮೆದುಳಿನ ವಿಶಿಷ್ಠವಾದ ಆ ಭಾಗವನ್ನು ಉದ್ರೇಕಿಸುತ್ತದೆ. ಇದರಿಂದ ಲಭಿಸುವ ಆನಂದವು, ಮಿಕ್ಕ ಸುಖಗಳಿಗಿಂತ ಮಿಗಿಲಾಗಿರಲೇ ಬೇಕು. ಇಲ್ಲವಾದರೆ ಪ್ರಾಣಿಯು ಕೈ ಹಿಡಿಯ ಹತ್ತಿರ ಓಡುತ್ತಿರಲಿಲ್ಲ.
ಈ ಕೇಂದ್ರಗಳನ್ನು 'ಆನಂದದ ಕೇಂದ್ರಗಳು' ಎಂದು ಕರೆಯುವುದು ಉಚಿತ.
ಇದೇ ತೆರನ ವ್ಯವಸ್ಥೆಯು ಮನುಷ್ಯನ ಮೆದುಳಿನಲ್ಲಿಯೂ ಇರಬೇಕು Meditation ಅಥವಾ ಧ್ಯಾನದಿಂದ, ಆ ಕೇಂದ್ರಗಳನ್ನು ಉದ್ರೇಕಿಸಿದರೆ, ಅಂತಹವನು, ದೇಹ ಮತ್ತು ಮನಸ್ಸಿನ ಕಾಮನೆಗಳಿಗೆ ಬಲಿಯಾಗುವುದಿಲ್ಲ. ಬದುಕಿರುವ ತನಕ ದೇಹಕ್ಕೆ ಆಹಾರವು ಅಗತ್ಯ. ಆದಕಾರಣ ಸಾಕಷ್ಟನ್ನು ತಿನ್ನುತ್ತಾನೆ. ಸ್ವಾದಿಸುತ್ತಾನೆ. ಆದರೆ ಆಹಾರವನ್ನು ಪರಮಗುರಿ ಎಂದು ಅದಕ್ಕೆ