೩೮೭
೯. ಮನ ಮಂಥನವು ಹಳಿ ತಪ್ಪಿದಾಗ
ಲೌಕಿಕ ಬಾಳಿನಲ್ಲಿ ಮನ ಮಂಥನವನ್ನು ಅಂದರೆ ಆಲೋಚನೆಯನ್ನು ಎಲ್ಲರೂ ಮಾಡಲೇಬೇಕು. ಒಬ್ಬರಿಗಿಂತ ಇನ್ನೊಬ್ಬರು, ಹೆಚ್ಚು ಸರಳವಾಗಿ, ಬಹಳ ಚುರುಕಾಗಿ ಯೋಚನೆಗಳನ್ನು ಹೂಡಬಹುದು. ಯೋಚನೆಗಳ ಗುಣದಲ್ಲಿ ಪ್ರಮಾಣದಲ್ಲಿ, ವೇಗದಲ್ಲಿ ಮತ್ತು ತೀಕ್ಷ್ಯತೆಯಲ್ಲಿ, ವ್ಯಕ್ತಿ ವ್ಯಕ್ತಿಗೂ ತುಂಬಾ ವ್ಯತ್ಯಾಸವಿರುತ್ತದೆ.
ಯೋಚಿಸುವಾಗ ದೇಹ ಮತ್ತು ಅದಕ್ಕೆ ನಿಕಟವಾಗಿ ಸಂಬಂಧಿಸಿದ Id ಶಕ್ತಿಯು ಒಂದು ಕಡೆಗೆ ಸೆಳೆಯುತ್ತದೆ. ತಾನು, ತನ್ನ ಅಗತ್ಯ ಎಂಬ ಮಮಕಾರದ, Ego ಕಲ್ಪನೆಯು, ಮನಸ್ಸಿನ ಕೇಂದ್ರವಾಗಿರುತ್ತದೆ. ಸಮಾಜದ ಅಂದರೆ ಸುತ್ತಲಿರುವವರ ಹಿತ ಸಾಧನೆಯನ್ನು Super-Ego, ಅಥವಾ ಸತ್-ಚೈತನ್ಯಾಂಶವು ಬೆದರಿ ಸುತ್ತ, ಹಾಗೂ ಹೊಗಳುತ್ತ, ಮನಸ್ಸಿನಿಂದ ಮೂಡಿಸುತ್ತದೆ.
ಯೋಚನೆಯನ್ನು ಮಾಡುವಾಗ, ಪರಿಸರದ ವಾಸ್ತವಿಕತೆಯು ದೃಢವಾದ ಆಧಾರವಾಗಿರುತ್ತದೆ. ತಾನು ; ತನ್ನ ಕಲಿಕೆ ಮತ್ತು ಅನುಭವ ; ತಾನಿರುವ ಮನೆಯಲ್ಲಿನ ಹತ್ತಿರದ ನೆಂಟರಿಷ್ಟರು ; ಬೇರೆ ಬೇರೆ ಊರು ದೇಶಗಳಲ್ಲಿದ್ದರೂ, ತನ್ನ ನೆಂಟರು ಇಷ್ಟರು ; ತಾನು ವಾಸಿಸುತ್ತಿರುವ ಸಮಾಜ ; ಇವೆಲ್ಲದರ ಸ್ಪಷ್ಟವಾದ ಅರಿವು ಮನಸ್ಸಿನಲ್ಲಿರುತ್ತದೆ. ಮನ ಮಂಥನವನ್ನು ಅಂದರೆ ಯೋಚನೆಯನ್ನು ಮಾಡುವಾಗ, ವಾಸ್ತವಿಕವಾದ ಈ ಚೌಕಟ್ಟಿನಲ್ಲಿರಬೇಕು. ಹಾಗಿದ್ದರೆ,ಯೋಚಿಸಿದ ಮೇಲೆ ನಿರ್ಣಯವನ್ನು ಕೈಗೊಂಡು ಕಾರ್ಯಗತಮಾಡಿದರೆ ಆಶಿಸಿದ ಕಾರ್ಯವು ನೆರವೇರುತ್ತದೆ.
ಮನ ಮಂಥನಕ್ಕೂ, ಸಮುದ್ರ ಮಥನದ ಪುರಾಣದ ಕತೆಗೂ ಬಹಳಷ್ಟು ಸಾಮ್ಯವಿದೆ ಎಂಬುದನ್ನು ಅರಿತೆವು. ಆದರೆ ಮನೆಗಳಲ್ಲಿ ಸಾಮಾನ್ಯವಾಗಿ ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವ ಸಾಮತಿಯು ಮನ ಮಂಥನದ ಅರಿವಿಗೆ ಸಹಾಯಕವಾಗುತ್ತದೆ.
Ego ಎನ್ನುವ ಕಲ್ಪನೆಯು ಕಡೆಗೋಲು ಇದ್ದ ಹಾಗೆ ಕಾಲವೆಂಬ ಹಗ್ಗದಿಂದ ಕಡೆಗೋಲನ್ನು ಕಟ್ಟಿ, ಒಂದು ಕಡೆ Id ಹಿಡಿದೆಳೆಯುತ್ತದೆ. ಇನ್ನೊಂದು ಕಡೆ -