ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೮೮
ಮನಮಂಥನ

Super-Ego ಹಿಡಿದೆಳೆಯುತ್ತದೆ. ಕಡೆಗೋಲು ಮೊಸರು ತುಂಬಿರುವ ಮಡಕೆಯಲ್ಲಿ ಕಡೆಯಬೇಕು. ವಿಚಾರಪರ ಮನಸ್ಸು : ಸ್ಮರಣೆಗಳು, ಪರಿಸರದಿಂದ ಪಂಚೇಂದ್ರಿಯಗಳ ಮೂಲಕ ಸಂಗ್ರಹಿಸಿದ ವಿಷಯಗಳು, ಇತ್ಯಾದಿಗಳೆಲ್ಲವೂ ಸೇರಿದುದನ್ನು ಮೊಸರಿಗೆ ಹೋಲಿಸಬಹುದು. ಪರಿಸರದ ವಾಸ್ತವಿಕತೆಯ ಅರಿವು, ಮಡಕೆ. ಅದರೊಳಗೆ ಮನ ಮಥನವಾಗಬೇಕು.

ಹದವಾಗಿ ಕಡೆಗೋಲನ್ನು, ಮಡಕೆಗೆ ಅಪಾಯವಿಲ್ಲದಂತೆ ಕಡೆದರೆ, ಬೆಣ್ಣೆಯು ಸ್ವಲ್ಪಕಾಲಾನಂತರ ತೇಲಿ ಬರುತ್ತದೆ. ಅದರಂತೆಯೇ ಮನಸ್ಸನ್ನು ಹದವಾಗಿ ಮಥಿಸಿದರೆ, ನಿರ್ಣಯವೆಂಬ ಬೆಣ್ಣೆಯು ಲಭಿಸುತ್ತದೆ. ಬೆಣ್ಣೆಯನ್ನು ತಿಂದು ಸುಖಪಡುವಂತೆ, ನಿರ್ಣಯವನ್ನು ಬಾಳಿನಲ್ಲಿ ಕಾರ್ಯಗತಮಾಡಿ ಸುಖ ಪಡಬಹುದು.

ಹದವಾಗಿ ಕಡೆಗೋಲನ್ನು, ಮೊಸರು ಮಡಕೆಯಿಂದ ಚೆಲ್ಲಿ ಹೋಗದಂತೆ ಕಡೆದರೆ, ಬೆಣ್ಣೆಯನ್ನು ಪಡೆಯಬಹುದು. ಹದವಾಗಿ ಕಡೆಯದೆ ಇದ್ದರೆ ? ಕಡೆಯಲು ಆಗದೆ ಇದ್ದರೆ?

ಹಗ್ಗವನ್ನು ಕಡೆಗೋಲ ಸುತ್ತ ಬಿಗಿದು ಕಡೆಯುತ್ತೇವೆ. ಹದವಾಗಿ ಕಡೆಯದೆ ಇದ್ದರೆ ಅಂದರೆ ರಭಸದಿಂದ ಕಡೆದರೆ, ಕಡೆಗೋಲಿನ ಆಯವು ತಪ್ಪಿ ಕಡೆಗೋಲಿನ ಮಂತು ಮಡಕೆಗೆ ಬಡಿಯಬಹುದು. ಮಡಕೆಯು ಒಡೆದು ಅಥವಾ ಬಿರುಕು ಬಿಟ್ಟು ಮೊಸರು ಚೆಲ್ಲಬಹುದು, ಅಥವಾ ಸೋರಬಹುದು.

Id ಅಥವಾ Super-Ego ಶಕ್ತಿಗಳ ಉಲ್ಬಣವಾಗಿ ಸೆಳೆದಾಡತೊಡಗಿದರೆ, ಹಾಗೂ Ego ದ ಸುತ್ತಲೂ ಬಿಗಿದ ಆಯವು ಸಮತೋಲನವಾಗದಿದ್ದರೆ, Ego ಆಯತಪ್ಪಿ ರಭಸದಿಂದ ಮಡಕೆಯನ್ನು ಬಡಿಯಬಹುದು. ಅಂತಹವನಲ್ಲಿ ವಾಸ್ತವಿಕತೆಯ ಅರಿವು ಏರುಪೇರಾಗುತ್ತದೆ. ಅಥವಾ ಇಲ್ಲವಾಗುತ್ತದೆ. In- Sight into Reality ಇಲ್ಲ. ಅಂತಹವರ ಮಾನಸಿಕ ಬೇನೆಗಳಲ್ಲಿ ಇದು ಮುಖ್ಯವಾದ ಚಿಹ್ನೆ.

ವಿಚಾರಪರ ಮನಸ್ಸು, ಅನುಭವ, ಕಲಿಕೆ ಮತ್ತು ಸ್ಮರಣೆ ಇವುಗಳೆಲ್ಲವೂ ಬಳಸಲ್ಪಟ್ಟರೆ ನಿರ್ಣಯವು ವಾಸ್ತವಿಕವಾಗಿರುತ್ತದೆ. ಬಾಳಿನಲ್ಲಿ ಯಶಸ್ಸನ್ನು ಮತ್ತು ಫಲವನ್ನು ನೀಡುತ್ತದೆ. ಆದರೆ ಕೆಲವು ಭಾಗಗಳು, ಸೋರಿ ಹೋದ ಮೊಸರಿನಂತಾಗಿ, ಮಂಥನಕ್ಕೆ ಬಳಸಲಾಗದಿದ್ದರೆ ನಿರ್ಣಯವು ವಾಸ್ತವಿಕತೆಯಿಂದ