ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನ ಮಂಥನವು ಹಳಿ ತಪ್ಪಿದಾಗ
೩೮೯

ದೂರವಾಗಿರುತ್ತದೆ. ಹಾಗೂ ವಾಸ್ತವಿಕ ಪ್ರಪಂಚದಿಂದ ಹೊರಗಿದ್ದು, ಊಹಾ ಲೋಕದಲ್ಲಿ ವೃಥಾ ಮಥಿಸಬಹುದು.

ಸ್ಕಿಜೋಫ್ರೆನಿಯಾ; ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ;ಮುಂತಾದ ರೋಗ ಸಮೂಹಗಳಲ್ಲಿ In Sight into reality ಇಲ್ಲದೆ, ಊಹಾ ಲೋಕದಲ್ಲಿ ಮನಸ್ಸಿನ ಒಂದು ಭಾಗವು ಮಥಿಸುತ್ತದೆ. ಸೀಬೆ ಮರಕ್ಕೆ ಕಲ್ಲೆಸೆಯುವುದು ವಾಸ್ತವಿಕತೆಯ ಅರಿವಿನಿಂದ. ಸೀಬೇಕಾಯಿ ಬೀಳಲಿ ಎಂಬ ಆಸೆಯಿಂದ, ಮನಸ್ಸಿನ ಆರೋಗ್ಯವು ಸರಿಯಾಗಿದ್ದವರು ಮಾಡುವ ಕೆಲಸ. ಎಸೆದ ಕಲ್ಲು ಗೋಡೆಯ ಆಚೆ ಕೆಲಸ ಮಾಡುತ್ತಿರುವವನ ಮೇಲೆ ಬಿದ್ದು ಗಾಯವಾಗಬಹುದು. ಹಾಗಾದಾಗ ಅದು ಆಕಸ್ಮಿಕ.

ಆದರೆ ರಸ್ತೆಯಲ್ಲಿ ನಡೆಯುತ್ತಾ, ಎಡವಿದ ಕಲ್ಲನ್ನು ತೆಗೆದುಕೊಂಡು ರಸ್ತೆಯಲ್ಲಿ ಬರುತ್ತಿರುವ ಮೋಟಾರಿನತ್ತ ಬೀರಿದರೆ, ಆಗ ವಾಸ್ತವಿಕತೆಯ ಅರಿವು ಇಲ್ಲ. ಇವ ಹುಚ್ಚ ಎಂದನ್ನಬೇಕು.

ಕಡೆಯುವ ಹಗ್ಗದ ಒಂದು ಕಡೆಯಲ್ಲಿ ಹಗ್ಗದ ಕೆಲವು ಹುರಿಗಳು ಕತ್ತರಿಸಿ ಹೋಗಬಹುದು. ಅಂತಹ ಹಗ್ಗವನ್ನು ಎಳೆಯಬೇಕಾದರೆ, ತುಂಬಾ ಎಚ್ಚರಿಕೆಯಿಂದಿರಬೇಕು. ಸ್ವಲ್ಪ ಜೋರಾಗಿ ಎಳೆದರೆ ಎಲ್ಲಿ ಹಗ್ಗವು ಹರಿದು ಹೋಗುತ್ತದೆಯೋ ಎಂಬ ಭಯವು ಇರುತ್ತದೆ. ಮೊಸರಿನ ಮಡಕೆಯು ಸರಿಯಾಗಿಯೇ ಇರುತ್ತದೆ. ಆದರೆ ಭಯದಿಂದ ಮೆಲ್ಲಗೆ ಮನ ಮಂಥನವಾಗುವುದರಿಂದ ನಿರ್ಣಯವೂ ದೃಢವಾಗಿರುವುದಿಲ್ಲ.

ಹೊರಗಿನಿಂದ ಮನೆಗೆ ಬಂದಾಗ, ಕಾಲುಗಳನ್ನು ತೊಳೆದುಕೊಳ್ಳುವುದು, ಆರೋಗ್ಯಕರ ಅಭ್ಯಾಸ. ಆದರೆ ಕಾಲುಗಳನ್ನು ಇಪ್ಪತ್ತು ಮೂವತ್ತು ಬಾರಿ, ಪುನಃ ಪುನಃ ತೊಳೆದುಕೊಂಡರೆ ; ಕಾಲುಗಳು ಶುಭ್ರವಾಗಿಲ್ಲ ಎಂಬ ಭಯ ಮತ್ತು ಆತಂಕವು ಅವನ ಮನಸ್ಸನ್ನು ಕಾಡುತ್ತಿದೆ ಎಂಬುದು ಸ್ಪಷ್ಟ, ಇಂತಹ ಮಾನಸಿಕ ರೋಗ ಸಮೂಹಗಳನ್ನು ಒಬ್ಬೆಷನಲ್ ಬೇನೆಗಳು ಎಂದನ್ನುತ್ತಾರೆ. ಪುನಃ ಪುನಃ ಪಾದಗಳನ್ನು ತೊಳೆದುಕೊಳ್ಳುವುದು ಪೆಚ್ಚುತನ ಎಂದು ಅವರಿಗೆ ತಿಳಿದಿರುತ್ತದೆ. ಆದರೆ ಮನ ಮಥಿಸುವ ಹಗ್ಗವು, ಕೆಲವು ಕಡೆ ಹರಿದು ಹೋಗಿರುವುದರಿಂದ ಆತಂಕವೂ ಭಯವೂ ಪಿಶಾಚಿಗಳಂತೆ ಅವರನ್ನು ಜಗ್ಗಿ ಆಡಿಸುತ್ತವೆ. “An irrestible force impinging on an immovable object ಎಂದು ವರ್ಣಿಸುತ್ತಾರೆ. ಪಿಶಾಚಿಯು ಅಮರಿಕೊಂಡು ಅವರನ್ನು ಈ ರೀತಿ