ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೯೦
ಮನಮಂಥನ

ಆಡಿಸುತ್ತದೆ ಎಂದರೂ ಅದೇ ಅರ್ಥವು ಬರುತ್ತದೆ. ಪಿಶಾಚಿಯು ಅವರ ಮನಸ್ಸಿನ ಹಗೇವುಗಳಿಂದ ಮೇಲಕ್ಕೆ ಬಂದು ಹೀಗೆ ಕಾಡುತ್ತದೆ ಎಂದೂ ವರ್ಣಿಸಬಹುದು.

ಕಡೆಯುವ ಕೋಲು ಅಥವಾ ಅದರ ಮಂತು ದೃಢವಾಗಿಲ್ಲ ಎನ್ನಿ, Ego ಕಲ್ಪನೆಯು ದೃಢವಾಗಿ ಬೆಳೆದು ಬಂದಿಲ್ಲ ಎಂದಂತಾಯಿತು. ಇಂತಹವರಲ್ಲಿ Ego-Drive ಬಹಳ ದುರ್ಬಲವಾಗಿರುತ್ತದೆ. ಅಂದರೆ ರಜೋಗುಣವು, ಕಾರ್ಯಗತ ಮಾಡುವ ಶಕ್ತಿಯು ಕ್ಷೀಣವಾಗಿರುತ್ತದೆ.

ಮನ ಮಂಥನವನ್ನು ಇಂತಹವರು ಮಾಡುವಾಗ, ಹೆದರಿಕೊಂಡು ಬೆದರಿಕೊಂಡು ಮನಸ್ಸು ಕಡೆಯಬೇಕು. ಏನು ಮಾಡಿದರೆ ಮತ್ತೇನು ಆಗುತ್ತದೆಯೋ ಎಂಬ ಸಂಶಯವು ಸದಾ ಕಾಡುತ್ತದೆ. ಇಂತಹವರು ಬೆಪ್ಪರಂತಾಗುತ್ತಾರೆ. ಹಲವುತೆರನ “Depressions " ಈ ರೀತಿಯವು, ಇದ್ದೇನು ಪ್ರಯೋಜನ ? ಎಲ್ಲರಂತೆ ಧಿಂಗ ಅಂತ ಮೆರೆಯುವುದಕ್ಕಾಗುವುದಿಲ್ಲ' ಎಂಬ ಹೀನ ಮನೋಭಾವನೆಯು ಉಂಟಾಗುತ್ತದೆ. ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಲ್ಲಿ ಸುಮಾರು ಮಂದಿ ಈ ಮಾನಸಿಕ ಪರಿಸ್ಥಿತಿಯಿಂದ ನರಳುವವರು.

ಕಡೆಗೋಲು ಸರಿಯಾಗಿದೆ. Id ಮತ್ತು Super-Ego ಗಳು ಸಮಸಮ Ego ದ ಸುತ್ತಲೂ, ಆಯಕಟ್ಟಾದ ಸ್ಥಳದಲ್ಲಿ ಬಿಗಿದುಕೊಂಡಿವೆ. ಹಗ್ಗದ ಎಳೆಗಳೂ ಸರಿಯಾಗಿವೆ. ಮಡಕೆಯೂ ಲಕ್ಷಣವಾಗಿದೆ. ಆದರೆ......ಆದರೆ ಮೊಸರು ಚೆನ್ನಾಗಿ ಹೆಪ್ಪಿಡದೆ ಇದ್ದರೆ, ಕೇವಲ ಹಾಲಾಗಿಯೇ ಇದ್ದರೆ ?ಕಡೆದರೆ ಬೆಣ್ಣೆ ಸಿಗುತ್ತದೆಯೇ?

ವಿಚಾರಪರ ಮನಸ್ಸು ; ಅನುಭವ, ಕಲಿಕೆ ಮತ್ತು ಸ್ಮರಣೆಗಳು, ಎಲ್ಲವೂ ಕೂಡಿ 'ಮೊಸರು' ಎಂದೆವು. ಕಲಿಕೆಯು ಸಾಕಷ್ಟು ಇಲ್ಲದಿದ್ದರೆ ; ಅನುಭವವು ಅಲ್ಪವಾಗಿದ್ದರೆ, ಆಗ ಹಾಲು ಹೆಪ್ಪುಗಟ್ಟಿ ಮೊಸರಾಗಿರುವುದಿಲ್ಲ. Immature personality ಅಥವಾ Psycho-pathic Personality ಎನ್ನುತ್ತಾರೆ, ಇಂತಹ ವರನ್ನು ಸಾಕಷ್ಟು ಜಾಣರಾಗಿರುವ ಹಲವಾರು ವೇಳೆ ಅತಿ ಜಾಣರಾಗಿಯೂ ಇರುವ ಯುವಕ ಯುವತಿಯರು ಮಾನಸಿಕ ಬೇನೆಗಳಿಗೆ ತುತ್ತಾಗುವುದು ಈ ಕಾರಣದಿಂದ, ಅನುಭವದಿಂದ ಅವರುಗಳ ಧೈಯವಾದೀ ಮನಸ್ಸು ಪಕ್ವವಾಗದೇ ಇರುವುದರಿಂದ.