೫
ವಾಸ್ತವಿಕತೆಯ ಅರಿವು ಮಡಕೆಯಂತೆ. ಇದರಲ್ಲಿ ಮೊಸರು, ಕಡೆಗೋಲು, ಅದನ್ನು ಕಡೆಯುವ Id ಮತ್ತು Super-Ego ಸೆಳೆತಗಳು, ಇವೆಲ್ಲವೂ ಕೂಡಿ ಮನಸ್ಸು ಎಂದೆವು.
ದೇಹವೆಂಬ ಪ್ರತ್ಯಕ್ಷವಾಗಿರುವ ದೊಡ್ಡ ಮಡಕೆಯಲ್ಲಿ, ಮನಸ್ಸೆಂಬುದು, ಒಂದು ಚಿಕ್ಕ ಮಡಕೆ. ದೇಹವು ವಸ್ತು ಪ್ರಧಾನವಾದುದು. ಅದರಲ್ಲಿರುವ ಚಿಕ್ಕ ಮಡಕೆಯು ಶಕ್ತಿ ಪ್ರಧಾನವಾದುದು. ಮನ ಮಂಥನವಾದಾಗ, ವಾಸ್ತವಿಕ ಅರಿವು ಎಂಬ ಮನಸ್ಸಿನ ಮಡಕೆಯು ತುಳುಕಾಡಿದರೆ, ಉಕ್ಕಿದರೆ, ಅದರ ಪ್ರಭಾವವು ದೇಹವೆಂಬ ದೊಡ್ಡ ಘಟಕ್ಕೆ ಅಥವಾ ಮಡಕೆಗೆ ವಕ್ರಿಸುತ್ತದೆ.
ಮೆದುಳು ಮತ್ತು ಸ್ಟೈನಲ್ ಕಾರ್ಡ್, ಈ ನರ ಸಮೂಹಗಳ ಮೂಲಕ, ಮನಸ್ಸಿನ ಮಂಥನದಿಂದ ಉಕ್ಕಿ ಬಂದು ಪ್ರವಹಿಸಿದರೆ, ಆಗ ಚಿಕ್ಕ ಮಡಕೆಯಲ್ಲಿ ತಳಮಳವು ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ದೊಡ್ಡ ಮಡಕೆಯಾದ ದೇಹದಲ್ಲಿ ಯಾವುದಾದರೂ ಒಂದು ಅಂಗಕ್ಕೆ, ಉಕ್ಕಿ ಬಂದ ತಳಮಳವು ವಕ್ರಿಸುತ್ತದೆ. ಇಂತಹ ಬೇನೆಗಳಲ್ಲಿ ಹಿಸ್ಟಿರಿಯಾ ತೆರನಾದವು ಪ್ರಾಮುಖ್ಯವಾದುವು.
ಸ್ವೇಚ್ಛಾ ಅಥವಾ ಸ್ವತಂತ್ರವಾಗಿ ಕೆಲಸ ಮಾಡುವ ನರ ಸಮೂಹಗಳ ಮೇಲೆ, ಅಂದರೆ Autornornic Nervous system ಇನ ಮೂಲಕ ಮನ ಮಂಥನದಿಂದ ಉಕ್ಕಿ ಬಂದುದು ಪ್ರವಹಿಸಿದರೆ, ಮನೋದೈಹಿಕ ಬೇನೆಗಳು ಉಂಟಾಗುತ್ತವೆ, 'ಮನೋನಂದನ'ದಲ್ಲಿ ಇವನ್ನು ವಿವರಿಸಲಾಗಿದೆ.