ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೯೨
ಮನ ಮಂಥನ

೧೦. ದೇಹದ ರೋಗಗಳಿಂದ ಮಾನಸಿಕ ಭಯ-ಅಸ್ವಾಸ್ಥ್ಯ

ದೇಹವೆಂಬ ದೊಡ್ಡ ಘಟದಲ್ಲಿ ಬೇನೆಗಳು ಕಾಣಿಸಿಕೊಂಡರೆ, ಆಗ ಮನಸ್ಸಿನ ಸ್ವಾಸ್ಥ್ಯವೂ ಅಲ್ಪ ಸ್ವಲ್ಪ ಅಥವಾ ಹೆಚ್ಚಾಗಿ ಕೆಡಬಹುದು. ದೇಹಕ್ಕೆ ಬಡಿದ ಬೇನೆಗಳು ಮನಸ್ಸನ್ನು ಅಷ್ಟಾಗಿ ಶೋಭಿಸುವುದಿಲ್ಲ. ಆದರೆ ಅಂತಹ ಬೇನೆಗಳು ತಾಕಿವೆ ಅಥವಾ ತಾಕಬಹುದು ಎಂದು ತಿಳಿದಾಗ, ಅವ ನರಳಲು ಆರಂಭಿಸುತ್ತಾನೆ. ರಕ್ತದ ಒತ್ತಡವು ಹೆಚ್ಚಾಯಿತು; ಸಕ್ಕರೆ ಬೇನೆಯು ಬಂದಿತು; ಕ್ಯಾನ್ಸರ್ ಏನಾದರೂ ಶುರುವಾಗಿದೆಯೋ; ಎಂದು ಹೆದರಿ ಹೆದರಿ ಆತಂಕದಿಂದ ನರಳುವವರ ಸಂಖ್ಯೆಯು, ಬೇನೆಯಿಂದ ನರಳುವವರ ಸಂಖ್ಯೆಗಿಂತ, ಶತಸಹಸ್ರ ಪಾಲು ಹೆಚ್ಚಾಗಿರುತ್ತದೆ.