ಇದೊಂದೇ ಅಲ್ಲದೆ, ಸಮಾಜದಲ್ಲಿ ತಲೆಯೆತ್ತಿ ನಿಂತು, ಮನ್ನಣೆಯನ್ನು ಗಳಿಸಬೇಕು, ಎನ್ನುವ Ambition ಅಥವಾ ಹೆಬ್ಬಯಕೆಯೂ, ಮುಖ್ಯ ಪ್ರೇರಕವಾಗಬಹುದು. ಸುಮಾರು ಜನರಲ್ಲಿ Ambition ಹಿರಿಯ ಪ್ರಚೋದನೆಯಾಗುತ್ತದೆ. ಕಾಮಕ್ಕಿಂತಲೂ ಹಿರಿದಾಗಬಹುದು.
ಸಮಾಜದ ಹಲವು ಮುಪ್ಪಿಗರಲ್ಲಿ ವಾಸ್ತವಿಕ ಲೋಕದ ಬಗ್ಗೆ ಜುಗುಪ್ಪೆಯು ಉಂಟಾಗುತ್ತದೆ. ಪ್ರಬಲವಾಗತೊಡಗುವ ಜುಗುಪ್ಪೆಯು, ಮನಸ್ಸನ್ನು ತೀವ್ರವಾಗಿ ಪ್ರಚೋದಿಸಿ, ಈ ಲೋಕವಲ್ಲದೆ ಇತರವು ಯಾವುದಾದರೂ ಇದೆಯೇ ? ಎಂಬುದನ್ನು ತಿಳಿಯುವ ಪ್ರಯತ್ನವನ್ನು ಮಾಡಿಸುತ್ತದೆ. ಹಾಗೂ ಜುಗುಪ್ಪೆಯು ಯೌವನ ಮತ್ತು ಪ್ರೌಢರಲ್ಲಿ, ಒಬ್ಬೆಷನಲ್ ಬೇನೆಗಳ ಮೂಲ ಪ್ರೇರಕವಾಗಬಹುದು. Straus ಎಂಬ ಮನೋವೈದ್ಯನು ೧೯೪೮ರಲ್ಲಿ ಈ ಸಲಹೆಯನ್ನು ಮಾಡಿದ ಸಿದ್ಧಾಂತವನ್ನಾಗಿ ಮಾಡಲು ಪ್ರಯತ್ನಿಸಿದ.
ಮೂಲಭೂತವಾಗಿ ಮನಸ್ಸಿನಲ್ಲಿ Id ಎಂಬ ಶಕ್ತಿಯು ಆಳ ಪದರಗಳಲ್ಲಿ ದೃಢವಾಗಿದ್ದು, Ego ವನ್ನು ತನ್ನತ್ತ ಬರಸೆಳೆದು ಅಪ್ಪುತ್ತದೆ. Ego ಒಂದು ಅಂಶವು Id ನೊಂದಿಗೆ ಮನಸ್ಸಿನ ಆಳ ಪದರಗಳಲ್ಲಿ ತಳಪಾಯವಾಗಿರುತ್ತದೆ. Ego ವಿನ ಇನ್ನೊಂದು ಅಂಶವು ತೋರ ಅಥವಾ ವ್ಯಕ್ತವಾಗಿರುವ Conscious Mind ನಲ್ಲಿರುತ್ತದೆ. Ego ವಿನ ಇವೆರಡೂ ಸ್ವಾರ್ಥಿ ಹಾಗೂ ಸಾಮಾಜಿಕ ಸುಖ ಮತ್ತು ಹಿತವನ್ನು ಸಾಧಿಸುತ್ತವೆ. Ego ಎಂಬ ಶಕ್ತಿಯು ಸಮಾಜದ ಹಿತವನ್ನು ರಕ್ಷಿಸುತ್ತದೆ. ಈ ಶಕ್ತಿಯೂ ಮನಸ್ಸಿನ ಆಳ ಪದರಗಳಲ್ಲಿರುತ್ತದೆ, ಹಾಗೂ ತೋರ ಮನಸ್ಸಿನಲ್ಲೂ ಪಸರಿಸಿರುತ್ತದೆ.
ಹುಟ್ಟು ಗುಣ, ಮತ್ತು ಬೆಳೆದ ಆವರಣಗಳು, Id-Ego-Super-Ego ಗಳ ಸಮತೋಲನವನ್ನು ನಿಷ್ಕರ್ಷಿಸುತ್ತದೆ. ಲೌಕಿಕ ಬಾಳನ್ನು, ನಡವಳಿಕೆಯನ್ನು ನಿರ್ಧರಿಸುತ್ತದೆ. Nature & Nurture; Heredity and Envirorment; ಸ್ವಭಾವ ಮತ್ತು ಕಲಿಕೆ ಇವೆಲ್ಲ ವಾಕ್ಯಗಳೂ, ಮೇಲೆ ಹೇಳಿದುದನ್ನು ವಿವರಿಸುತ್ತವೆ.
Id-Ego-Super-Ego Heredity and Environment, ಇವುಗಳು ಸಮ ಸಮ ಅನ್ವಯಿಸಿಕೊಂಡು ನಡೆಯದಿದ್ದರೆ, ಮಾನಸಿಕ ಪಲ್ಲಟವು, ಮಾನಸಿಕ ಬೇನೆಗಳು ಉಂಟಾಗುತ್ತವೆ. ಅಂತಹವರ ನಡವಳಿಕೆಯು ಲೌಕಿಕವಾದ, ಸಾಮಾಜಿಕವೂ ಆದ, ಬದುಕಿನಲ್ಲಿ, ಅವ್ಯವಸ್ಥೆಗೊಂಡು Disturbed-Easeಅಥವಾ ಮಾನಸಿಕ Disease ಆಗುತ್ತದೆ. ಹೀಗಾಗುವ ಹಲವಾರು ವಿಧಗಳನ್ನು ಈ ಪುಸ್ತಕದ ಮೊದಲ ಭಾಗದಲ್ಲಿ ಉದಾಹರಣೆಗಳೊಂದಿಗೆ ; ಎರಡನೆಯ ಭಾಗದಲ್ಲಿ