ವಿಚಾರ ಪೂರ್ವಕವಾಗಿ, ಆದಷ್ಟು ಸರಳವಾಗಿ ಅರಿಯಲು, ವಿಶ್ಲೇಷಿಸಲು ಪ್ರಯತ್ನವನ್ನು ಮಾಡಲಾಗಿದೆ.
ಈಗ ಪತಂಜಲಿ ಮಹರ್ಷಿಗಳು ಮನಸ್ಸಿನ ವಿಶ್ಲೇಷಣೆಯನ್ನು ಹೇಗೆ ಮಾಡಿದರು ಎಂಬುದನ್ನು ತಿಳಿಯುವ. ಸುಮಾರು ಎರಡು ಸಹಸ್ರ ವರ್ಷಗಳ ಹಿಂದೆ, ಪತಂಜಲಿಯೆಂಬ ಮಹರ್ಷಿಗಳು ನಮ್ಮ ನಾಡಿನಲ್ಲಿದ್ದರು. ಅವರು ಬಾಳಿ ಬದುಕಿದ್ದ ಕಾಲದಲ್ಲಿ, ನಮ್ಮ ನಾಡಿನ ಮನನಿಗರ ಜ್ಞಾನ ಭಾಂಡಾರವು ಏನೇನಿದ್ದುವೋ ಅದನ್ನು ಅವರು ಕಲಿತು, ಸ್ವಂತ ವಿವೇಚನೆಯಿಂದ, ಜನ್ಮ ಜನ್ಮಾಂತರಗಳ ಸ್ಮೃತಿಯಿಂದ, ವಿಶ್ಲೇಷಿಸಿ, ಹಿರಿಯರ ತೋಳುಗಳ ಮೇಲೆ ನಿಂತು, ಹಿರಿಯರಿಗಿಂತಲೂ ಸ್ವಲ್ಪ ಹೆಚ್ಚಾದ ಅರಿವನ್ನು ಪಡೆದರು. ಜ್ಞಾನ ಋಣವನ್ನು ಈ ರೀತಿ ಪಡೆದ ಪತಂಜಲಿ ಮಹರ್ಷಿಗಳು, ಮನಸ್ಸೇ ಎಲ್ಲಕ್ಕೂ ಕಾರಣ ಎಂದು ಅರಿತರು. ಮನಸ್ಸು ಮನುಷ್ಯರಂತೆ ಸಹಸ್ರ ಅಂಶಗಳನ್ನು ಹೊಂದಿದೆ. ಅವನ್ನು ಪ್ರಮುಖವಾದ ಭಾಗಗಳನ್ನಾಗಿ ಕಲಿಯತೊಡಗಿದರೆ ನೆಮ್ಮದಿಯು ದೊರಕುತ್ತದೆ ಎಂದು ತಿಳಿದರು. ಆದಕಾರಣ ತಾವು ಸಂಪಾದಿಸಿದ ಜ್ಞಾನದ ಋಣವನ್ನು, ಜ್ಞಾನ ಪ್ರಸಾರದ ಮೂಲಕ ತೀರಿಸಿಕೊಂಡರು. ಋಣ ಸಂದನೆಯನ್ನು ಮಾಡುವಾಗ, ನಿರ್ಬಂಧವಾಗಬಯಸಿದಾಗ, ಆ ಬಯಕೆಯು ಹೆಬ್ಬಯಕೆಯಾಗಿ ಮನಸ್ಸನ್ನು ಸಂಪೂರ್ಣವಾಗಿ ತುಂಬಿಕೊಂಡಾಗ, ವಿವರವಾಗಿ, ವಿಶದವಾಗಿ, ಇತರರೊಂದಿಗೆ ಸಾವಧಾನ ಸಂಪರ್ಕವಾಗಿ ತುಂಬಿಕೊಂಡಾಗ, ವಿವರವಾಗಿ, ವಿಶದವಾಗಿ, ಇತರರೊಂದಿಗೆ ಸಾವಧಾನ ಸಂಪರ್ಕವನ್ನು ಪಡೆಯುವುದು ಅಸಾಧ್ಯ. ಋಣ ಸಂದನೆಗೆ ಆತುರವು ಅಗತ್ಯ. ಆದಕಾರಣ ಜ್ಞಾನ ಋಣವನ್ನು 'ಸೂತ್ರಗಳ ಪ್ರಕಾರದಲ್ಲಿ ಬಲು ಹಸ್ಟವಾಗಿ ತೀರಿಸಿಕೊಳ್ಳಲೇಬೇಕಾಯಿತು. ಮಹರ್ಷಿಗಳಿಗಿದ್ದ ಆತುರವು, ಅವಸರವು, ಕಲಿಯಲೆತ್ನಿಸುವ ಮಗುವಿಗೂ ಇರುತ್ತದೆ. ಅರಿವನ್ನು ಪೂರ್ಣವಾಗಿ ಪಡೆದ ಮಹರ್ಷಿಗಳ ಮನಸ್ಸು ಮಗುವಿನ ಮನಸ್ಸಿನಂತೆ ನಿರಲವಾಗಿರುತ್ತದೆ. ಆದಕಾರಣ ಕಲಿಸಲಾಗಲಿ ಕಲಿಯಲಾಗಲೀ ಆತುರವು మిగిలు.
ಅಂತಹವರು ರಚಿಸಿದ ಸೂತ್ರಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಅವುಗಳನ್ನು ಅರಿತು ವಿವರಿಸುವ ವಿದ್ವಾಂಸರ ನೆರವು ಅಗತ್ಯ. ಪತಂಜಲಿ ಋಷಿಗಳ ಯೋಗ ಸೂತ್ರಗಳಿಗೆ ವಿಜ್ಞಾನ ಭಿಕ್ಷು ಎಂಬುವರು 'ಯೋಗ-ಸಾರ- ಸಂಗ್ರಹ' ಎಂಬ ಟೀಕೆಯನ್ನು ಸಾಕಷ್ಟು ವಿವರವಾಗಿ ಬರೆದಿದ್ದಾರೆ. ಆನಂತರ ಹಲವಾರು ಪಂಡಿತರು ಆಯಾಕಾಲದ ಅರಿವಿಗೆ ಸಮನ್ವಯ ಮಾಡಿಕೊಂಡು, ಟೀಕೆಗಳನ್ನು ಬರೆದಿದ್ದಾರೆ.