ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ

೩೯೯

ಎಂಬ ಅರ್ಥವನ್ನು ಹೊಂದಿದೆ. ಯೋಗ ಎನ್ನುವುದು ಒಂದು ವಿಧಾನ, ಇಂತಹ ಸಂಪರ್ಕವನ್ನು ಕಲ್ಪಿಸುವ ವಿಧಾನ, ಯಾವ ಎರಡು ವಿಷಯಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ?

ಭೋಗ ಎನ್ನುವ ಪದವು ಎಲ್ಲರಿಗೂ ತಿಳಿದಿದೆ. ಅದರ ಅರ್ಥವೂ ಎಲ್ಲರಿಗೂ ಆಗಿದೆ. ನಮಗೆ ಇಷ್ಟವಾದವುಗಳನ್ನು ಅನುಭವಿಸಿ ಸುಖಿಸುವುದು ಭೋಗ, ರುಚಿಯಾದ ಊಟವನ್ನು ಪಟ್ಟಾಗಿ ಹೊಡೆಯುವುದು ಭೋಗ, ಇತರರು ಕರುಬುವಂತೆ ಶೃಂಗಾರವನ್ನು ಮಾಡಿಕೊಂಡು ಮೆರೆಯುವುದು ಭೋಗ. ಮನ್ಮಥನಂತಹ ಸುಂದರನನ್ನು ಬುಟ್ಟಿಗೆ ಹಾಕಿಕೊಂಡ ಹೆಂಗಸು, ಭೋಗಿ ಭೋಗಕ್ಕೆ ಇತಿಯುಂಟೆ? ಮಿತಿಯುಂಟೆ? ವೈವಿಧ್ಯಕ್ಕೆ ಕೊರತೆಯೇ? ಇವೆಲ್ಲವೂ ಲೌಕಿಕದ ಅನುಭವಗಳು. ಸ್ವಲ್ಪ ಕಾಲ ಮಾತ್ರ ನಡೆಯುವಂತಹವು. ಲೌಕಿಕದ ಬಾಳೇ ಶಾಶ್ವತವಲ್ಲದಿರುವಾಗ ಭೋಗವು ಕೂಡ ಶಾಶ್ವತವಾಗಲಾರದು. ಲೌಕಿಕದ ಬಾಳೂ ಮತ್ತು ಭೋಗ, ಇವೆರಡಕ್ಕೂ ಅಷ್ಟು ನಿಕಟವಾದ ಸಂಬಂಧವಿದೆ.

ಯೋಗವು ಭೋಗವನ್ನು ಮತ್ತಾವುದೋ ವಿಷಯವೊಂದಕ್ಕೆ ಸಂಪರ್ಕವನ್ನು ಕಲ್ಪಿಸುವ ವಿಧಾನವಾಗಿರಬೇಕು. ಅಂತಹ ಮತ್ತೆ ಯಾವುದೋ ವಿಷಯವು ಯಾವುದು?

ಭೋಗವು ನಶ್ವರವಾದರೆ, ಆ ಮತ್ತೊಂದು ಶಾಶ್ವತವಾಗಿರಬಹುದು. ಸುಖವನ್ನು ನೀಡುವ ಭೋಗವು, ದುಃಖವನ್ನು ನೆರಳಿನಂತೆ ಹೊಂದಿರುತ್ತದೆ. ಭೋಗಿಸಲು ಆಗದಿದ್ದಾಗ ದುಃಖವು ಉಂಟಾಗಲೇಬೇಕು. ಸಾಧ್ಯವಾಗಿ ಭೋಗಿಸುವಾಗ ಸುಖ. ಸಾಧ್ಯವಾಗದೆ ಇದ್ದಾಗ ದುಃಖ. ಹೀಗೆ ಭೋಗ ದ್ವಂದ್ವ ರೂಪಿನದು.

ಆದರೆ ಶಾಶ್ವತವಾದ ಮತ್ತೊಂದು, ಏಕರೂಪವಾದುದು. ಆದುದರಿಂದಲೇ ಶಾಶ್ವತವೂ ಆದುದು. ಏಕರೂಪವಾದುದು ಕೇವಲ ಒಂದೇ ಆಗಿರಬೇಕು, ಏಕರೂಪ ಎಂದಾಗ ಕೇವಲ ಒಂದೇ ಎನ್ನುವ ಅರ್ಥವೂ ಬರುತ್ತದೆ. ಕೇವಲ ಒಂದೇ ಆದುದರಿಂದ ಪತಂಜಲಿ ಮಹರ್ಷಿಗಳೂ ಕೈವಲ್ಯ ಎಂದರು. ಕೈವಲ್ಯದ ಮನೋಸ್ಥಿತಿಯು ಶಾಶ್ವತವಾದುದು, ದ್ವಂದ್ವಾತೀತವಾದುದು, ಎಂದರು.

ಲೌಕಿಕ ಬಾಳಿನ ಭೋಗಗಳನ್ನು ಅನುಭವಿಸುವ ; ಮನುಷ್ಯನು, ಭೋಗದ ಸುಖಗಳನ್ನು ಮನಸ್ಸಿನ ಯಾವುದೋ ಅಂಶದಲ್ಲಿ ಅಥವಾ ಸ್ಥಿತಿಯಲ್ಲಿ ಅನುಭವಿಸುತ್ತಾನೆ. ಸುಖದ ಅನುಭವಕ್ಕಾಗಿ ದೇಹದ ಅಂಗಾಂಗಗಳನ್ನು