೪೦೦
ಬಳಸಿಕೊಳ್ಳುತ್ತಾನೆ. ಸುಂದರವಾದ ಚಿತ್ರವನ್ನು ಕಂಡ ಕಣ್ಣುಗಳು ಸುಖವನ್ನು ತಾವೇ ಅನುಭವಿಸಲಸಾಧ್ಯ ಕಂಡವನ ಮನಸ್ಸು ಸೌಂದರ್ಯಾನುಭವವನ್ನು ಪಡೆಯುತ್ತದೆ. ಅದರ ಪ್ರತಿಕ್ರಿಯೆಯಾಗಿ ಕಣ್ಣುಗಳು ಹೊಳೆಯತೊಡಗಬಹುದು. ಅಷ್ಟೇ ವಿನಹಾ, ಅನುಭವಿಸಿ ಸುಖಿಸುವ ಮನಸ್ಸು ಇಲ್ಲದಿದ್ದರೆ, ಕಣ್ಣುಗಳು ಹೊಳೆಯುವುದಿಲ್ಲ. ಸ್ಮಶಾನಕ್ಕೆ ಇಷ್ಟನ ಹೆಣವನ್ನು ಸಾಗಿಸುತ್ತಿರುವಾಗ, ಸಂಧ್ಯಾರಾಗವು ಕ್ಷಿತಿಜದಲ್ಲಿ ಕಾಣಿಸುತ್ತವೆ. ಆದರೆ ಸುಖಾನುಭವವನ್ನು ಕೊಡುವುದಿಲ್ಲ. ಮೊದಲ ದೀಪಾವಳಿಗೆ ಅತ್ತೆಯ ಮನೆಗೆ ಹೋಗುವಾಗ, ಆಕಾಶದಲ್ಲಿ ತುಂಬಿರುವ ಕಾರ್ಮೋಡಗಳೂ ಚೆಂದ ಕಾಣಿಸಿ ಸುಖವನ್ನು ನೀಡುತ್ತವೆ. ಆದರೆ ದೇಹದ ಅಂಗಾಂಗಗಳು ಸುಖಾನುಭವಕ್ಕೆ ಅಗತ್ಯವಾದ ಪ್ರೇರಕಗಳು, ದಿಟ. ಆದರೆ ಸುಖಾನುಭವವು ಮನಸ್ಸಿನ ಯಾವುದೋ ಅಂಶದಲ್ಲಿ ಲಬ್ಧವಾಗುತ್ತದೆ.
ಮನಸ್ಸಿನ ಮತ್ತೆ ಯಾವುದೋ ಒಂದು ಅಂಶವು, ಎಚ್ಚರಗೊಂಡಾಗ, ಚೇತನಗೊಂಡಾಗ, ದ್ವಂದ್ವಗಳಿಲ್ಲದ ಸುಖವು, ಅಂದರೆ ಆನಂದದ ಅನುಭವವು ಉಂಟಾಗುತ್ತದೆ, ಇದನ್ನು ಕೈವಲ್ಯ ಸ್ಥಿತಿ ಎನ್ನಬಹುದು.
ನಶ್ವರವಾದ ಲೌಕಿಕ ಸುಖ ದುಃಖಾನುಭವವನ್ನು; ಶಾಶ್ವತವಾದ, ದ್ವಂದ್ವಾತೀತವಾದ ಆನಂದದ ಅನುಭವವನ್ನೂ ಕೂಡಿಸುವುದೇ ಯೋಗ. ಅವುಗಳೆರಡರ ಮಧ್ಯೆ ಸೇತುವೆಯನ್ನು ಕಟ್ಟಿ ಸಂಪರ್ಕವನ್ನು ನೇರವಾಗಿ ಕಲ್ಪಿಸುವುದೇ ಯೋಗ.
ಯೋಗವನ್ನು ವಿವರಿಸುವುದು ; ಅದನ್ನು ಸಾಧಿಸುವಾಗ ಮನಸ್ಸಿನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ವಿಶ್ಲೇಷಿಸಿ ತಿಳಿಸುವುದು, ಇವು 'ಯೋಗವಾದ ಮೊದಲ ಭಾಗ, ಪತಂಜಲಿಗಳ ಪುಸ್ತಕದಲ್ಲಿ ಹೇಗೆ ಯೋಗವನ್ನು ಸಾಧಿಸುವುದು; ಮನಸ್ಸು ಹೇಗೆ ವರ್ತಿಸಬೇಕು ಎಂಬುವುಗಳನ್ನು ವಿವರಿಸುವುದು ಸಾಧನವಾದ ಎರಡನೆಯ ಭಾಗ, ಸಾಧನೆಯು ಯಶಸ್ವಿಯಾಗತೊಡಗಿದಾಗ ದೊರಕುವ ಫಲಿತಾಂಶಗಳು ಮೂರನೆಯ ಭಾಗವಾದ ವಿಭೂತಿ ಪಾದದಲ್ಲಿ ವಿವರಿಸಲ್ಪಟ್ಟಿವೆ. ಯೋಗದ ಸಾಧನೆಯು ಸಂಪೂರ್ಣಗೊಂಡಾಗ, ಕೇವಲ ಒಂದೇ ಎಂಬ ಅನುಭವವಾದಾಗ ಯಾವ ರೀತಿ ಮನಸ್ಸು ಇರುತ್ತದೆಯೋ ಅದನ್ನು ಕೈವಲ್ಯ- ಪದವು ವಿವರಿಸುತ್ತದೆ.
ಯೋಗ ಪಾದ ದೇಹದ ವಿವಿಧ ಅಂಗಗಳ ಕೆಲಸವನ್ನು ಸಮನ್ವಯಗೊಳಿಸುವ ವ್ಯವಸ್ಥೆಯನ್ನು ಅಂತಃಕರಣ ಎಂದು ಕರೆಯುತ್ತಿದ್ದರು. ಯೋಚನೆಯನ್ನು ಮಾಡುವ, ಆಲೋಚಿಸುವ