ಮನಮಂಥನ
೨. ವಿಚಾರವನ್ನು ಮಾಡಲಾಗದೆ, ದುಡುಕಿ, ರೇಗಿ, ಮದೋನ್ಮತ್ತತೆಯಿಂದ, ಚಿತ್ತವು ಪ್ರವರ್ತಿಸುವ ಅವಸ್ಥೆಯನ್ನು 'ಮೂಢ' ಎನ್ನುತ್ತಾರೆ. ಇದು ತಮೋಗುಣ ಪ್ರೇರಿತವಾದುದು.
೩. ಭೋಗ ಸಾಧನೆಗಳಲ್ಲಿ ಹಿತವನ್ನು ಮರೆಯದೆ, ಪ್ರವರ್ತಿಸುವ ಚಿತ್ರಕ್ಕೆ 'ವಿಕ್ಷಿಪ್ತ' ಎನ್ನುತ್ತಾರೆ. ಹಿತವೆಂದಾಗ ಮುಂದಾಗಬಹುದಾದ ದುಷ್ಪರಿಣಾಮಗಳನ್ನು ಗಮನಕ್ಕೆ ತಂದುಕೊಳ್ಳುವುದು ಎಂಬ ಅರ್ಥ, ಸತ್ವಗುಣ ಪ್ರೇರಿತವಾದುದು
೪. ಹೊರಗಿನ ಪ್ರಪಂಚದಲ್ಲಿ ಪರಸರಿಸದೆ, ಅಂತರ್ಮುಖಿಯಾದ ಚಿತ್ತದ ಅವಸ್ಥೆಯನ್ನು 'ಏಕಾಗ್ರ' ಎನ್ನುತ್ತಾರೆ.
೫. ಹೊರಗಿನ ಪ್ರಪಂಚದಲ್ಲಾಗಲೀ, ಅಂತರವಾದ ಪ್ರಪಂಚದಲ್ಲಿಯಾಗಲೀ ತೊಡಗದೇ ಇರುವ ಚಿತ್ತಾವಸ್ಥೆಗೆ 'ನಿರುದ್ಧ' ಎಂದನ್ನುತ್ತಾರೆ.
ಪತಂಜಲಿ ಮಹರ್ಷಿಗಳ ಕಾಲದಲ್ಲಿ ನಾವೀಗ ಸ್ಕೂಲವಾಗಿ ಕರೆಯುವ 'ಮನಸ್ಸು' ಎಂಬುದನ್ನು ಈ ರೀತಿ ವಿಶ್ಲೇಷಣೆ ಮಾಡಿದ್ದರು.
ಆದರೆ ನಮ್ಮ ಈ ಕಾಲದಲ್ಲಿ ಅಂತಃಕರಣ ಎಂದರೆ ಅನುಕಂಪ, ಹೆಂಗರುಳು, ಕರುಣೆ ಎಂಬ ಅರ್ಥವು ಬರುತ್ತದೆ. ಕಾಲಕಾಲದಲ್ಲಿ ಪದಗಳ ಅರ್ಥವು ಬಹಳಷ್ಟು ಬದಲಾಯಿಸುತ್ತದೆ ಎನ್ನುವುದಕ್ಕೆ ಅಂತಃಕರಣವೂ ಒಂದು ನಿದರ್ಶನ.
ಇಂದಿನ ಮನೋವೈಜ್ಞಾನಿಕ ಭಾಷೆಯಲ್ಲಿ ಅಂತಃಕರಣದ ನಾಲ್ಕು ಭಾಗಗಳನ್ನು ತಿಳಿಯಲೆತ್ನಿಸುವ, ಸಮನ್ವಯವು ಸರಿಯಾಗದಿದ್ದಾಗ, ಅದನ್ನೂ ತಿಳಿದುಕೊಳ್ಳೋಣ. ಸರಿಹೊಂದದೆ ಇರುವ, ಋಷಿಗಳು ನುಡಿದ ವಾಕ್ಯಗಳು, ವೈಜ್ಞಾನಿಕ ಸಂಶೋಧನೆಗೆ ಪ್ರೇರಕವಾಗಬಹುದು. ಅಂತಹ ಹಂಬಲದಿಂದ ಈ ಪ್ರಯತ್ನವನ್ನು ಮಾಡಲಾಗಿದೆ.
ಮನಸ್ಸನ್ನು Id;Ego ; ಮತ್ತು Super-Ego ಎಂಬ ಮೂರು ಶಕ್ತಿಗಳನ್ನಾಗಿ ವಿಭಾಗಿಸಿದ್ದಾರೆ. ತಮೋಗುಣ ಪ್ರಧಾನವಾದ Id ಪುರಾತನವೂ ಆದುದು. ದೇಹದ ಕಾಮ್ಯಗಳನ್ನು ಪೂರೈಸು, ಹಾಗೂ ದೇಹದೊಂದಿಗೆ ಒಕ್ಕೂಡಿದ ಮನಸ್ಸಿನ ಆಸೆಗಳನ್ನೂ ತೀರಿಸು ಎಂದು ಬಲವಾಗಿ ಸೆಳೆಯುವ ಶಕ್ತಿ. ಸ್ವಾರ್ಥವೇ ಇದರ ಹಿರಿಯ ಗುರಿ.
'ಮೂಢ' ಎಂಬ ಚಿತ್ತಾವಸ್ಥೆಯನ್ನು Id ಇಗೆ ಹೋಲಿಸಬಹುದು.
Ego ಎನ್ನುವುದು ಮನಸ್ಸಿನಲ್ಲಿರುವ ಬೆಳೆದಂತೆಲ್ಲಾ ದೃಢವಾಗುತ್ತ ಬರುವ ಕಲ್ಪನೆ. ಬಾಳಿನಲ್ಲಿ ಸ್ವಾವಲಂಬಿಯಾಗುವ ಪ್ರಚೋದನೆಗೆ, Ego ಕಲ್ಪನೆಯು