೪೦೩
ಅತ್ಯಗತ್ಯ. Id ಮತ್ತು Super-Ego ಗಳು Ego ವನ್ನು ಜಗ್ಗಿಸಿ ಕಡೆಯುತ್ತವೆ. Ego ಮಥಿಸಲ್ಪಟ್ಟಾಗ ಸ್ವಾರ್ಥಿಯಾದ Id ಅನ್ನೂ ತೃಪ್ತಿಗೊಳಿಸಬೇಕು. ಸಮಾಜದ ಹಿತವನ್ನು ಗುರಿಯಾಗಿಟ್ಟುಕೊಂಡು Super-Ego ವನ್ನೂ ಮೆಚ್ಚಿಸಬೇಕು. ಕಾರ್ಯ ನಿರತವಾಗಿರಲೇಬೇಕು, Ego; ರಜೋಗುಣವು Ego ವಿನ ಮುಖ್ಯ ಗುಣ.
Ego ವನ್ನು ಅಹಂಕಾರ ಎನ್ನುವ ಪದಕ್ಕೆ ಹೋಲಿಸಬಹುದು. ಆದರೆ ಇದರ ಕಾರ್ಯದಲ್ಲಿ ಎರಡು ತರಹ ಚಟುವಟಿಕೆಗಳಿವೆ. ಒಂದು 'ಕ್ಷಿಪ್ತ; ಎನ್ನುವ Id ಅನ್ನು ತೃಪ್ತಿಗೊಳಿಸುವ ಭಾಗ. ಇನ್ನೊಂದು ಸಮಾಜದ ಹಿತವನ್ನು ರಕ್ಷಿಸುವ, ಹಾಗೆ ಮಾಡಿ ತೃಪ್ತಿಪಡುವ 'ವಿಕ್ಷಿಪ್ತ' ಎನ್ನುವ ಭಾಗ ರಜೋಗುಣ ಪ್ರಧಾನವಾದ Ego ಚಟುವಟಿಕೆಗಳಲ್ಲಿ, ತಮೋಗುಣವು ಹೆಚ್ಚಾದರೆ ವಿಕ್ಷಿಪ್ತ' Id ತೃಪ್ತಿ ಸತ್ವಗುಣವು ತಮೋಗುಣಕ್ಕಿಂತ ಪ್ರಬಲವಾದರೆ "ವಿಕ್ಷಿಪ್ತ'. Super-Ego ಮೆಚ್ಚುಗೆ.
Super-Ego ವಿನ ಧೈಯವು, ಸಮಾಜದ ಹಿತ, ಸ್ವಾರ್ಥದ ಅಂಶವು ಸ್ವಲ್ಪ. ನಿಸ್ವಾರ್ಥದ ಅಂಶವು ಹೆಚ್ಚು. ಸತ್ವಗುಣ ಪ್ರಧಾನವಾದುದು. ಆದರೆ ಸಮಾಜದ ಹಿತವನ್ನು ಕಾರ್ಯಗತ ಮಾಡಬೇಕಾದರೆ ರಜೋಗುಣವು ಇರಲೇಬೇಕು. ಈ ಮಿಶ್ರಣವು ಸಮಸಮವಾದರೆ, "Faddists” ಆಗುತ್ತಾರೆ. ಸತ್ವಗುಣ ಪ್ರೇರಿತವಾದ ತಮ್ಮಂತೆಯೇ, ಸಮಾಜದ ಇತರರೂ ಧೈಯ ಸಾಧನೆಯನ್ನು ಮಾಡಬೇಕು, ಎಂದು ಆಶಿಸುವವರು. ಆಸೆಯನ್ನು ತೀರಿಸಿಕೊಳ್ಳಲು ರಜೋಗುಣವನ್ನು ಸಮಸಮ ಬಳಸಿಕೊಂಡು Saddists ಆಗುತ್ತಾರೆ.
ಮನಸ್ಸಿನ ಈ ಮೂರೂ ಭಾಗಗಳು, ಲೌಕಿಕ ಬಾಳನ್ನು ನಡೆಸಲು ಅಗತ್ಯ. ಅವುಗಳ ಝಂಝಾಟದಲ್ಲಿ ಮನಸ್ಸಿನ ನೆಮ್ಮದಿಯು ತಪ್ಪುತ್ತದೆ.
ಮನಸ್ಸಿನ ನೆಮ್ಮದಿಯನ್ನು ಸಾಧಿಸಲು, ಮನಸ್ಸಿನಲ್ಲಿರುವ ಒಂದು ಅಂಶವು ಹಾತೊರೆಯುತ್ತದೆ. ಎಲ್ಲರ ಅನುಭವದಲ್ಲೂ ನೆಮ್ಮದಿಯ ಹಂಬಲವು ಪ್ರತ್ಯಕ್ಷವಾಗುತ್ತದೆ. ಆಗೊಮ್ಮೆ, ಈಗೊಮ್ಮೆ, ಮನಃಶಾಸ್ತ್ರದ ವೈಜ್ಞಾನಿಕ ಸಂಶೋಧಕರು, ಇತ್ತಿಂದೀಚೆಗೆ, ಮೆದುಳಿನ ಬುಡದ ಒಂದು ಭಾಗದಲ್ಲಿ ಆನಂದದ ಕೇಂದ್ರಗಳಿರುತ್ತವೆ. ಈ ಕೇಂದ್ರಗಳನ್ನು ಜೀವ ರಾಸಾಯನಿಕ, Bio-Chernical ಅಥವ ಜೀವ ಭೌತಿಕ Bio-Physical ವಿಧಾನಗಳಿಂದ ಪ್ರಚೋದಿಸಿದರೆ, ಆನಂದವು ಮತ್ತು ನೆಮ್ಮದಿಯು ಲಭಿಸುತ್ತದೆ, ಎಂಬುದನ್ನು ಸಿದ್ಧಾಂತ ಮಾಡಿದ್ದಾರೆ. Bio-Chernical ಪ್ರೇರಕಗಳು, ಸಾರಾಯಿ ಮೆಸ್ಕಲಿನ್, ಲೈಸರ್ಜಿಕ್ ಆ್ಯಸಿಡ್,ಮೊದಲಾದ ದುಃಶ್ಚಟಗಳಾಗಿರಬಹುದು. Bio-Physical ಅಥವಾ ಎತ್ತರದ ಬೆಟ್ಟದ ಗುಹೆಗಳಲ್ಲಿ ವಾಸಿಸುವುದು, ಉಪವಾಸ ಮುಂತಾದ ವ್ರತಗಳನ್ನು ಕೈಗೊಳ್ಳುವುದು, ಇತ್ಯಾದಿಗಳಾಗಿರಬಹುದು.