ಮನಮಂಥನ
ಆದರೆ ಯಾವುದಾದರೂ ಒಂದು ಇಷ್ಟವಾದ ವಿಷಯದಲ್ಲಿ, ಮನಸ್ಸನ್ನು ಸಂಪೂರ್ಣ ತೊಡಗಿಸಿದರೆ ಆಗಲೂ ಒಂದು ತೆರನ ನೆಮ್ಮದಿ ಅಥವಾ ಆನಂದವನ್ನು ಅನುಭವಿಸಬಹುದು. ಸಂಶೋಧಕ ವಿಜ್ಞಾನಿಗಳು, ಉದಾತ್ತ ಕಲಾರಾಧಕರು, ಇಂತಹ ಆನಂದವನ್ನು ತುಸು ಕಾಲವಾದರೂ ಅನುಭವಿಸುತ್ತಾರೆ. ಇವರುಗಳ ಮನಸ್ಸು ಆ ಸ್ಥಿತಿಗಳಲ್ಲಿ 'ಏಕಾಗ್ರ ಚಿತ್ತ'ವಾಗಿರುತ್ತದೆ.
ಅನುಕಂಪದಿಂದ ಜಾಗೃತರಾದ ಕೆಲವರು, ಏಕಾಗ್ರ ಚಿತ್ತತೆಯಿಂದ, ಮಾನವ ನೆಮ್ಮದಿಗಾಗಿ ವಿಧಾನಗಳನ್ನು ಕಂಡುಹಿಡಿಯುವ ಆತುರದಲ್ಲಿರುತ್ತಾರೆ. ಇಂತಹ ಯುಗ ಪುರುಷರು, ಮನಸ್ಸಿನ ತೀವ್ರ ಹಂಬಲದಿಂದ, ಆನಂದದ ಕೇಂದ್ರಗಳನ್ನು ಪ್ರಚೋದಿಸುತ್ತಾರೆ. ಅತಿ ವಿರಳರಾದ ಇಂತಹವರ ಮನಸ್ಸು- 'ನಿರುದ್ಧ'ದ ಸ್ಥಿತಿಯನ್ನು ಪಡೆದಿದೆ ಎನ್ನಬಹುದು.
ಮನಸ್ಸಿನಲ್ಲಿ ಏಕಾಗ್ರ ಚಿತ್ತತೆಯು ಇರುವ ಸ್ಥಿತಿಯನ್ನು, ಪ್ರಯೋಗಾ ಪರೀಕ್ಷೆಗಳಿಂದ, ಇಂದಿನ ಮನಃಶಾಸ್ತ್ರ ಪಂಡಿತರು ತಿಳಿಯಲು ಅಥವಾ ವಿಶ್ಲೇಷಿಸಲು ಸಾಧ್ಯವಾಗಿಲ್ಲ. ಅಂದಮೇಲೆ ವಿರುದ್ಧದ ಸ್ಥಿತಿಯನ್ನು ಪ್ರಯೋಗಾ ಪರೀಕ್ಷೆಗಳಿಂದ, ಅರಿಯಲು ಅಸಾಧ್ಯ. ಅನುಭವದಿಂದ ಮಾತ್ರ ಅರಿಯಬೇಕು.
ಕ್ಲೇಶಗಳಿಂದ ನರಳದೆ ಇರುವ, ಲೌಕಿಕ ಆಸೆಗಳಿಂದ ಬಿಡುಗಡೆಯನ್ನು
ಹೊಂದಿದ ನಿರ್ಮಲವಾದ, ಅಂತಃಕರಣವೇ ಚಿತ್ತ ಸತ್ವಗುಣಾಧಿಕ್ಯದ ಪರಿಣಾಮವು
ಚಿತ್ತವೇ ಅಂತಃಕರಣ ಎಂಬುದನ್ನು ಸಿದ್ಧಾಂತ ಮಾಡುತ್ತದೆ.
“ಯೋಗಃ ಚಿತ್ತ ವೃತ್ತಿ ನಿರೋಧಃ"
ಎಂಬ ಸೂತ್ರವನ್ನು ಪತಂಜಲಿ ಮಹರ್ಷಿಗಳು ರಚಿಸಿದರು.
ಚಿತ್ತದ ಐದೂ ಅವಸ್ಥೆಗಳನ್ನು ತಿಳಿದೆವು. ಅಂತಃಕರಣದ ನಾಲ್ಕೂ ಭಾಗಗಳಲ್ಲಿ ಚಿತ್ತದ ಪಾತ್ರವನ್ನು ತಿಳಿದೆವು. ಸತ್ವಗುಣದಿಂದ ಪೂರ್ಣವಾದ, ಅಂದರೆ ನಿಸ್ವಾರ್ಥಿಯಾದ ಚಿತ್ತವೇ ಅಂತಃಕರಣ ಎಂಬುದನ್ನೂ ತಿಳಿದೆವು. ಈ ಕಾರಣದಿಂದ 'ಚಿತ್ತ' ಎನ್ನುವ ಪದವನ್ನು ಉಪಯೋಗಿಸಿದರು.
ವೃತ್ತಿ ಎಂದರೆ ಕಾರ್ಯ ಮತ್ತು ಕ್ರಮ. ಮರಗೆಲಸವನ್ನು ಮಾಡುವ ವೃತ್ತಿಯು, ಬಡಗಿಯದು. ಪಾಠಗಳನ್ನು ಕಲಿಸುವ ವೃತ್ತಿಯು ವಾಸ್ತರದು. ಅದರಂತೆಯೇ ಚಿತ್ತವು ಕೆಲಸವನ್ನು ಮಾಡುವಾಗ, ವೃತ್ತಿಯನ್ನು ಕೈಗೊಂಡಿರುತ್ತದೆ. ಕ್ಷಣಕ್ಷಣಕ್ಕೂ ಚಿತ್ತವು ಒಂದಲ್ಲ ಮತ್ತೊಂದು ವಿಷಯದಲ್ಲಿ ತೊಡಗುತ್ತಿರುತ್ತದೆ. ಅಂದರೆ ಚಿತ್ತದ ವೃತ್ತಿಗಳೂ ಅಪರಿಮಿತ. ಚಿತ್ತದ ಸಹಸ್ರಾರು ವೃತ್ತಿಗಳನ್ನು