ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೦೬

ಮನಮಂಥನ

ಅರಿವಿಗೆ ಪ್ರಮಾಣಗಳು : ಸಾಧನಗಳು, Direct experience : Indirect but conclusive evidence; and knowledge expounded by thinkers. All these contribute to our knowledge.

೨. ವಿಪರ್ಯಯ ವೃತ್ತಿ : ಮಿಥ್ಯಾಜ್ಞಾನವನ್ನು ಮೂಡಿಸುವ ವೃತ್ತಿ ಮಸುಗತ್ತಲಲ್ಲಿ ಕಂಬವನ್ನು ಕಂಡಾಗ, ಅದನ್ನು ಮನುಷ್ಯ ಎಂದು ತಿಳಿಯುವುದು.

೩. ವಿಕಲ್ಪವೃತ್ತಿ : ಕೇವಲ ಶಬ್ದಗಳಿಂದ ಇಂತಹ ವಸ್ತುವು ಇದೆ ಎಂದು ತಿಳಿಯುವುದು. ನಿಜವಾಗಿ ಅಂತಹ ವಸ್ತುವು ಇರುವುದೇ ಇಲ್ಲ. ಚಿತ್ತದ ಇಂತಹ ವೃತ್ತಿಯನ್ನು ವಿಕಲ್ಪ ಎನ್ನುತ್ತಾರೆ ಸೂರ್ಯೋದಯ, ಸೂರ್ಯಾಸ್ತಮ ; ಕುದುರೆಯ ಕೊಂಬು : ರಾಹುವಿನ ಶಿರಸ್ಸು ಇತ್ಯಾದಿಗಳು ವಿಕಲ್ಪವೃತ್ತಿ.

೪. ನಿದ್ರಾವೃತ್ತಿ : ಸ್ವಪ್ನಗಳಿಲ್ಲದೆ ಇರುವ, ಗಾಢನಿದ್ರೆಯನ್ನು ಸುಶುಪ್ತ ಎನ್ನುತ್ತಾರೆ. ತಮೋಗುಣಪ್ರಧಾನವಾದ ಇಂತಹ ನಿದ್ರಾವೃತ್ತಿಯಲ್ಲೂ, ಸುಖವಾಗಿ ನಿದ್ರಿಸಿದೆ ಎನ್ನುವ ಸ್ಮರಣೆಯು, ಎಚ್ಚರವಾದ ನಂತರ ಉಳಿಯುತ್ತದೆ. ಆದಕಾರಣ ಈ ವೃತ್ತಿಯಲ್ಲಿ ಕೂಡ ಚಿತ್ ವಿಹರಿಸುತ್ತದೆ, 'ಡೆಲ್ಪ ಕ್ಲೀಪ್' ಎನ್ನುವ ಹಂತದ ನಿದ್ರೆ.

೫. ಸ್ಮೃತಿವೃತ್ತಿ : ಪ್ರಮಾಣಗಳಿಂದ ಅನುಭವಿಸಿದ ವಿಷಯಗಳನ್ನು ಸ್ಮರಿಸಿಕೊಳ್ಳುವುದನ್ನು ಸ್ಮೃತಿವೃತ್ತಿ ಎಂದನ್ನುತ್ತಾರೆ,

“ಪ್ರಮಾಣ ವಿಪರ್ಯಯ ವಿಕಲ್ಪ ನಿದ್ರಾ ಸ್ಮೃತಯಃ” ಎಂದು ೬ನೆಯ ಸೂತ್ತ

ಮಾನಸಿಕ ಆರೋಗ್ಯವನ್ನು ಹೊಂದಿರುವ ಸಾಮಾನ್ಯ ಮನುಷ್ಯರಲ್ಲಿ ಈ ಐದೂ ತೆರನ ಚಿತ್ತ ವೃತ್ತಿಗಳು, ಅಥವಾ ಮನಸ್ಸಿನ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಪ್ರಮಾಣ, ನಿದ್ರಾ ಮತ್ತು ಸ್ಮೃತಿ ವೃತ್ತಿಗಳು, ಬಹಳ ಪಾಲು, ವಿಪರ್ಯಯ ಮತ್ತು ವಿಕಲ್ಪಗಳು ಕೆಲವು ಸಲ ನಡೆಯುತ್ತವೆ.

ಆದರೆ ಮಾನಸಿಕ ಬೇನೆಗಳು ನರಳಿಸುವಾಗ, ವಿಪರ್ಯಯ ಮತ್ತು ವಿಕಲ್ಪ ವೃತ್ತಿಗಳು ಸರ್ವೆ ಸಾಮಾನ್ಯವಾಗಿ ಇರುತ್ತವೆ. ನಿದ್ರಾ ಮತ್ತು ಸ್ಮೃತಿ ವೃತ್ತಿಗಳು ಪಲ್ಲಟವಾಗುತ್ತವೆ.

ವಿಪರ್ಯಯ ವೃತ್ತಿಯ ಸ್ಕಿಜೋಫ್ರೆನಿಯಾ, ಮತ್ತು ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್‌ ಬೇನೆಗಳಲ್ಲಿ ಬಹಳಷ್ಟು ಇರುತ್ತದೆ. ಮಿಥ್ಯಾಜ್ಞಾನವೇ ನಿಜವಾದುದು ಎಂದು ಆ ರೋಗಿಗಳು ದೃಢವಾಗಿ ನಂಬಿರುತ್ತಾರೆ. Loss of Insight into Reality ಎಂಬುದು ವಿಪರ್ಯಯ ವೃತ್ತಿಯ ಪರಮಾವಧಿ ಸ್ಥಿತಿ.