ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ

೪೦೭

ನಿದ್ರಾವೃತ್ತಿಯು ಪಲ್ಲಟವಾಗುವುದರಿಂದ ಸ್ವಪ್ನಾವಸ್ಥೆಯ ಅವಧಿಯು ಹೆಚ್ಚಾಗಿ ಸುಷುಪ್ತ ಅಥವಾ 'ಡೆಲ್ಪ ಕ್ಲೀಷ್' ಇನ ಅವಧಿಯು ಕಡಿಮೆಯಾಗುತ್ತದೆ. ಎಚ್ಚರವಾದ ನಂತರ ಅಲಸಿಕೆಯು ಹೆಚ್ಚಾಗಿರುವುದೇ, ನಿದ್ರಾವೃತ್ತಿಯ ಪಲ್ಲಟದ ಸೂಚನೆ. ತೀವ್ರ ಆತಂಕ, ತಳಮಳ ಇತ್ಯಾದಿ ಮಾನಸಿಕ ಪಲ್ಲಟಗಳಲ್ಲಿ ನಿದ್ರಾವೃತ್ತಿಯು ಏರುಪೇರಾಗುವುದು ಸಾಮಾನ್ಯ ಮುಪ್ಪಿನಲ್ಲಿ ಮಾನಸಿಕ ಸ್ವಾಸ್ಥ್ಯವು ಪಲ್ಲಟವಾದರೆ ನಿದ್ರಾವೃತ್ತಿಯೂ ಅವ್ಯವಸ್ಥಿತವಾಗುತ್ತದೆ.

ಸ್ಮೃತಿ ವೃತ್ತಿಯೂ ಮಾನಸಿಕ ಬೇನೆಗಳಲ್ಲಿ ವ್ಯತ್ಯಾಸವಾಗುತ್ತದೆ. ಸ್ಮೃತಿಯೂ ವಿಪರ್ಯವೂ ಜತೆಗೂಡಿ ಚಿತ್ರವಿಚಿತ್ರವಾಗುತ್ತದೆ. ಭ್ರಮೆಯು ಮೂಡುತ್ತದೆ.

ಆರನೆಯ ಸೂತ್ರದ ಚಿತ್ತವೃತ್ತಿಗಳನ್ನು ಆಧರಿಸಿಕೊಂಡು ಮಾನಸಿಕ ಬೇನೆಗಳನ್ನು ವಿಂಗಡಿಸಿ ಅಧ್ಯಯನವನ್ನು ಮಾಡಬಹುದು. ಆದರೆ ವೃತ್ತಿಗಳೆರಡು ಮೂರು ಕಲೆಯುವುದನ್ನು ಮರೆಯಬಾರದು.

ಚಿತ್ತವೃತ್ತಿಗಳನ್ನು ನಿರೋಧಿಸುವುದು ಹೇಗೆ ? ನಿರಂತರ ಅಭ್ಯಾಸ ಮತ್ತು ವೈರಾಗ್ಯ, ಅಭ್ಯಾಸ ಎನ್ನುವ ಪದವು ಸುಲಭವಾಗಿ ಅರ್ಥವಾಗುತ್ತದೆ. ವೈರಾಗ್ಯ ಎನ್ನುವ ಪದವು ವಿರಾಗ ಎಂಬುದನ್ನು ನೆನಪಿಗೆ ತಂದರೂ, ರಾಗಗಳಲ್ಲಿ ಅನಾಸಕ್ತಿ ಎಂಬ ಅರ್ಥವು ಹೆಚ್ಚು ಉಚಿತ. ನಿರಂತರವಾಗಿ ಬಿಡುವಿಲ್ಲದೆ ಅಭ್ಯಾಸವನ್ನು ಮಾಡಬೇಕು. ವೈರಾಗ್ಯವು, ದೃಷ್ಟವಾದ ಲೌಕಿಕದಲ್ಲಿ ಅನುಭವಿಸುವ ಕಾವ್ಯಗಳಲ್ಲಿ ಅನಾಸಕ್ತಿಯನ್ನು ಹೊಂದುವುದಲ್ಲದೆ ; ಊಹಾಪೋಹಾದಿ ಸ್ವರ್ಗ ಮತ್ತು ಅಂತಹ ಕಾವ್ಯಗಳನ್ನೂ ಅನಾಸಕ್ತಿಯಿಂದ ಕಾಣಬೇಕು.

ಅಭ್ಯಾಸ ಮತ್ತು ವೈರಾಗ್ಯದಿಂದ ಚಿತ್ತವೃತ್ತಿಗಳು ಏಕಾಗ್ರಚಿತ್ತ ಸ್ಥಿತಿಯನ್ನು ಹೊಂದಲು ಸುಲಭ, ಅನಂತರ ನಿರುದ್ಧವು ಲಭಿಸುತ್ತದೆ. ಆಗ ಸಮಾಧಿ ಸ್ಥಿತಿಯು ಅಥವಾ ಆನಂದದ ಕೇಂದ್ರಗಳ ಪ್ರಚೋದನೆಯು ಸುಲಭ ಸಾಧ್ಯವಾಗುತ್ತದೆ. ಚಿತ್ತ ವೃತ್ತಿಗಳನ್ನು ಬಂಧಿಸಿ ಏಕಾಗ್ರಚಿತ್ತರಾಗಿ, ನಿರುದ್ಧವನ್ನು ಪಡೆದ ಮೇಲೆ, ಸಮಾಧಿಯ ಸ್ಥಿತಿಯು ಲಭಿಸಿದಾಗ ಯೋಗದ ಪ್ರಯತ್ನವು ಫಲಿಸಿತು ಎನ್ನಬಹುದು.

ಆನಂತರ ಪತಂಜಲಿ ಮಹರ್ಷಿಗಳು ಸಮಾಧಿಯಲ್ಲಿರುವ, ಅಥವಾ ಇರಬಹುದಾದ ಮುಖ್ಯ ವಿಭಾಗಗಳನ್ನು ವಿವರಿಸುತ್ತಾರೆ.

ಸಂ-ಪ್ರಜ್ಞಾತ ಸಮಾಧಿ-ಅಸಂಪ್ರಜ್ಞಾತ ಸಮಾಧಿ : ವಿದೇಹಿಗಳು ಪ್ರಕೃತಿ ಲಯರು ಇತ್ಯಾದಿಗಳನ್ನು ವಿವರಿಸುತ್ತಾರೆ. ಇವೆಲ್ಲವೂ ಮನಃಶಾಸ್ತ್ರ ಪಂಡಿತರಿಗೆ