ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ

೪೦೯

ಇವುಗಳನ್ನು Congenital Defects ಎನ್ನಬಹುದು. ಉದಾ. Moron etc. ಪ್ರಮಾದ=ಅಜಾಗರೂಕತೆ. ಆಲಸ್ಯ ಜಡತ್ವ Inertia ಅವಿರತಿ=ಲೌಕಿಕ ಕಾವ್ಯಗಳಲ್ಲಿ ತೃಪ್ತಿಯನ್ನು ಹೊಂದದೆ ಇರುವ Dissatisfied ಸ್ಥಿತಿ.

ದರ್ಶನಾಲಬ್ಧ ಭೂಮಿಕತ್ವ ಹಂಬಲಿಸಿದ ದರ್ಶನವು ದೊರೆಯಲಿಲ್ಲವೆಂಬ ಕೊರಗು. . ಅನವಸ್ಥಿತತ್ವ=ಏಕಾಗ್ರ ಚಿತ್ತತೆಯನ್ನು ಸಾಧಿಸಲಾರದೆ, ಚಂಚಲವಾಗಿರುವ ಸ್ಥಿತಿ.

ದುಃಖ ; ದೌರ್ಮನಸ್ಸು ; ಅಂಗಮೇಜಯತ್ವ ; ಶ್ವಾಸ ಪ್ರಶ್ವಾಸಾ ; ವಿಕ್ಷೇಪ, ಸಹಭುವಃ.

ದುಃಖವು ಆಧ್ಯಾತ್ಮಿಕ, ಅಧಿಭೌತಿಕ, ಆದಿದೈವಿಕಗಳೆಂಬ ಮೂರು ತೆರನಾದವು. ಆಧ್ಯಾತ್ಮಿಕವು, ಶರೀರ ಮತ್ತು ಮಾನಸಿಕ-ಆದಿಭೌತಿಕವು, ಪ್ರಕೃತಿಯಿಂದ, ಸಿಡಿಲು ಹುಲಿ ಇತ್ಯಾದಿಗಳಿಂದ ಉಂಟಾದವು. ಆದಿ ದೈವಿಕವು, ರಾಕ್ಷಸ, ಪಿಶಾಚಿ ಎಂಬುವುಗಳ ನಂಬಿಕೆಯಿಂದ ಉಂಟಾದ ದುಃಖಗಳು,

ದೌರ್ಮನಸ್ಯ=ಚಂಚಲವಾದ ಮನಸ್ಸು, ದುರ್ಬಲವಾದ ಮನಸ್ಸು. ಅಂಗಮೇ ಜಯತ್ವ=ಆಸನ ಇತ್ಯಾದಿಗಳಿಂದ ದೇಹವನ್ನು ಸ್ಥಿರಪಡಿಸಿ, ಮನಸ್ಸನ್ನೂ ಸ್ಥಿರಪಡಿಸುವುದು. ಶ್ವಾಸಪ್ರಶ್ವಾಸವು=ಉಸಿರಾಡುವಿಕೆ=ನಿಯಂತ್ರಿಸಿದ ಉಸಿರಾಡುವಿಕೆಯನ್ನು ಪ್ರಾಣಾಯಾಮ ಎಂದುರ.

ವಿಕ್ಷೇಪ= ಕೇವಲ ಶಬ್ದದಿಂದಲೇ- “Bare Slogans ಗಳಿಂದಲೇ ವಾಸ್ತವಿಕವಾಗಿ ಇಲ್ಲದ ಸಲ್ಲದ, ವಿಷಯವನ್ನು ; ಇದೆ, ಲಭ್ಯವಾಗುತ್ತದೆ ಎಂದು ನಂಬಿಕೆಯನ್ನು ಮೂಡಿಸುವ, ಮನಸ್ಸಿನ ಮಾಟ, ಒಂದು ತೆರನ ಚಿತ್ತವೃತ್ತಿ. ಮಾಯಾಪೂರಿತ ಚಿತ್ತದ ಪ್ರವೃತ್ತಿ. ಗುಂಪುಗುಳಿತನದ ಪ್ರವೃತ್ತಿ. ಇವೆಲ್ಲವೂ 'ಚಿತ್ತವೃತ್ತಿನಿರೋಧ' ಕೈ ಲೌಕಿಕವಾದ ಅಂತರಾಯಗಳು, ವಿಘ್ನಗಳು, ಅಡೆತಡೆಗಳು.

ತತ್ ಪರಿಷೇಧಾರಂ, ಏಕತತ್ವ ಅಭ್ಯಾಸಃ

ಅಂತರಾಯಗಳನ್ನು ನಿವಾರಿಸಲು, ತನಗೆ ಇಷ್ಟವಾದ ರುಚಿಸುವ, ಏಕತತ್ವವನ್ನು ಅಂದರೆ ಯೋಚಿಸಿದ 'ತನ್ನ' ನಿರ್ಣಯವನ್ನು ಅಭ್ಯಾಸ ಮಾಡಬೇಕು. ಅಂದರೆ 'ತನ್ನ' ನಿರ್ಣಯವು ಸರಿಯಾದುದು ಎಂದು ದೃಢವಾಗಿ ನಂಬಿ,