ಮನಮಂಥನ
ಮಾನಸಿಕವಾಗಿ ಮುನ್ನುಗ್ಗಬೇಕು.
ಮಾನಸಿಕ ಬೇನೆಗಳಿಂದ ನರಳುತ್ತಿರುವವರನ್ನು ಅರ್ಥಮಾಡಿಕೊಳ್ಳಲು ಈ ಸೂತ್ರವು ಅಮೂಲ್ಯ. ಮಾನಸಿಕ ರೋಗಿಗಳಿಗೆ ಪಿಶಾಚಿ ಹಿಡಿದಂತೆ ಯಾವುದಾದರೂ ಒಂದು ಗೀಳು ಹಿಡಿಯುತ್ತದೆ. ಅದನ್ನು ತಡೆ ಹಿಡಿಯಲು ಇತರರು ಪ್ರಯತ್ನಿಸಿದರೆ, ರೋಗಿಗಳ ಮನಸ್ಸು ಮೊಂಡುಹಿಡಿಯುತ್ತದೆ. ಅಸಾಧ್ಯ ಕೋಪವು ಬರುತ್ತದೆ. ಆದುದರಿಂದ ಹಿಡಿದ ಪೀಳಿಗೆ ಉತ್ತೇಜನವನ್ನು ಕೊಡದೆ ಇದ್ದರೂ, ಅಡ್ಡಿ ಬರಬಾರದು.
ಏಕಾಗ್ರಚಿತ್ತತೆಯನ್ನು ಪಡೆಯಲು ನೆರವಾಗುವ ಇತರ ಸ್ಥಿತಿಗಳನ್ನೂ ಹೇಳುತ್ತಾರೆ.
ಮೈತ್ರಿ ಕರುಣಾ ಮುದಿತಃ ಉಪೇಕ್ಷಾಣಾಂ, ಸುಖ ದುಃಖ, ಪುಣ್ಯ, ಅಪುಣ್ಯ ವಿಷಯಾಕಾಂ ಭಾವನಾತ್ ತತ್ ಚಿತ್ತ ಪ್ರಸಾದನು
ಸುಖ ದುಃಖ; ಪುಣ್ಯ ಅಪುಣ್ಯ ; ಇವುಗಳ ಬಗ್ಗೆ ಮೈತ್ರಿ ಕರುಣೆ, ಸಂತೋಷ, ಮತ್ತು ಉಪೇಕ್ಷೆ ಇವುಗಳನ್ನು ಕ್ರಮವಾಗಿ ಅಭ್ಯಾಸವನ್ನು ಮಾಡಿದರೆ, ಚಿತ್ತವು ಏಕಾಗ್ರವಾಗಲು ಸಹಾಯವಾಗುತ್ತದೆ.
ಇದಲ್ಲದೆ ಪ್ರಾಣಾಯಾಮದಿಂದಲೂ ಚಿತ್ತವನ್ನು ಏಕಾಗ್ರದತ್ತ ನಡೆಸಬಹುದಂತೆ
ಪಚ್ಚರ್ದನ ವಿಧಾರಣಾಭ್ಯಾಂ ವಾ ಪ್ರಾಣಸ್ಯ
ಮುಂದಿನ ಶ್ಲೋಕಗಳಲ್ಲಿ ಸಮಾಧಿಯ ವಿವಿಧ ಸ್ವರೂಪಗಳನ್ನು ವಿವರಿಸುತ್ತಾರೆ ಸವಿತರ್ಕ ಮತ್ತು ನಿರ್ವಿತರ್ಕ ಎಂಬ ಎರಡು ಪ್ರಮುಖವಾದ ಸಮಾಧಿ ಸ್ಥಿತಿಗಳು. ಹಾಗೂ ಸ-ವಿಚಾರ ಮತ್ತು ನಿರ್ವಿಚಾರ ಎಂಬ ಭೇದಗಳೂ ಇವೆ. ನಾಲ್ಕೂ ತೆರನ ಇವು ಸ-ಬೀಜ ಸಮಾಧಿಗಳು. ಅಂದರೆ ಯಾವುದಾದರೂ ಒಂದನ್ನು ಆಲಂಬಿಸುವುದು, ಅಥವಾ ಸಂ-ಪ್ರಜ್ಞಾತ. ಈ ಸ್ಥಿತಿಯಲ್ಲಿ ಋತಂಭರಾ ತತ್ರಪಜ್ಞಾ-ಸದಾ ಸತ್ವದಲ್ಲಿರುವ, ಸತ್ಯವಾಗಿರುವ ಪ್ರಜ್ಞೆಯು ಲಭಿಸುತ್ತದೆ. ಸಂಪ್ರಜ್ಞಾತ ಋತಂಭರಾ ಇವೆರಡೂ ನಿರೋಧಿಸಲ್ಪಟ್ಟಾಗ ನಿರ್ಬೀಜ ಸಮಾಧಿ ಅಥವಾ ಯಾವುದರ ಆಲಂಬನವೂ ಇಲ್ಲದ ಸಮಾಧಿ ಸ್ಥಿತಿಯು ದೊರಕುತ್ತದೆ.
ಮನಸ್ಸು ತನ್ನ ವೃತ್ತಿಗಳನ್ನು ನಿಲ್ಲಿಸಿದ ಮೇಲೆ ಯಾವ ತೆರನ ಸಮಾಧಿಯ ಅನುಭವವಾಗುತ್ತದೆಯೋ ಅದನ್ನು ಇಂದಿನ ಹಂತದ ಮನೋವಿಜ್ಞಾನದಲ್ಲಿ, ಪರೀಕ್ಷಾ ಪ್ರಯೋಗಗಳಿಂದ ಕಂಡುಹಿಡಿಯಲು ಅಸಾಧ್ಯ. ಆದಕಾರಣ ಇವುಗಳನ್ನು ಸೂಕ್ಷ್ಮವಾಗಿ ಹೆಸರಿಸಲಾಗಿದೆ.