ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೧೨

ಮನಮಂಥನ

ಕಾಣಿಸುತ್ತವೆ. ಸರಿಯಾದ ಹಾಗೂ ಸ್ಪಷ್ಟವಾದ ಜ್ಞಾನಾರ್ಜನೆಯಿಂದ, ಮನಸ್ಸಿನಲ್ಲಿ ಕಂಡುಬರುವ ಅಡ್ಡಿಗಳನ್ನು ನಿವಾರಿಸಿ ಆನಂದದ ಕೇಂದ್ರಗಳ ಬಳಿಗೆ ಮನಸ್ಸನ್ನು ಹರಿಸಬಹುದು.

ಮುಂದಿನ ಶ್ಲೋಕಗಳಲ್ಲಿ ಕ್ಷೇಶಗಳೆದರ ವಿವರಣೆಯನ್ನು ಕೊಡಲಾಗಿದೆ. ಅವುಗಳ ಮುಖ್ಯಸಾರಾಂಶವು : ಆನಂದದ ಕೇಂದ್ರಗಳ ಪ್ರಚೋದನೆಯಿಂದ ಉಂಟಾಗುವ ಅರಿವು ಶಾಶ್ವತವಾದುದರ ಜ್ಞಾನ. ಅಂತಹ ಅರಿವನ್ನು 'ಪುರುಷ' ಎಂದರು. ಕ್ಷೇಶಗಳಿಂದ ನಡೆಸಲ್ಪಟ್ಟ ಮನಸ್ಸು, 'ಪುರುಷನೇ' ಕ್ಷೇಶಗಳೊಂದಿಗೆ ಕೂಡಿಕೊಂಡು ಅನುಭವಿಸುತ್ತಾನೆ. ಎಂದು ಭ್ರಮಿಸುತ್ತದೆ, ಭ್ರಮೆಯು ನಿವಾರಣೆಯಾಗಬೇಕಾದರೆ, ಪುರುಷ ಮತ್ತು ಅವಿದ್ಯೆಯಿಂದಾಗಿ ಪುರುಷನು ಅನುಭವಿಸುತ್ತಾನೆ ಎಂಬ ಸಂಯೋಗವನ್ನು ಪರಿಹರಿಸಬೇಕು. ನಿರಂತರವಾಗಿ ವಿವೇಕವನ್ನು ಉಪಯೋಗಿಸುವುದರಿಂದ ಸಂಯೋಗವನ್ನು ಪರಿಹರಿಸಬಹುದು, ಹಾಗಾಗುವ ತನಕ ಯೋಗಾಂಗಾನುಷ್ಠಾನವನ್ನು ಆಚರಿಸಬೇಕು. ಆಗ ಚಿತ್ತವು ಸತ್ವಗುಣದಿಂದ ತುಂಬಿಕೊಂಡು ವಿವೇಕ ಖ್ಯಾತಿಯನ್ನು ಪಡೆಯುವ ಪರಿಪಕ್ವತೆಯನ್ನು ಪಡೆಯುತ್ತದೆ.

ಅನುಷ್ಠಾನವನ್ನು ಮಾಡಬೇಕಾದ ಯೋಗಾಂಗಗಳು ಯಾವುವು? ಎಷ್ಟು?

ಯಮ, ನಿಯಮ, ಆಸನ, ಪ್ರಾಣಾಯಾಮ : ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಯೋ ಅಷ್ಟಾವಯವಂಗಾನಿ

ಎಂಟು ಭಾಗಗಳುಳ್ಳ ಯೋಗಾಂಗಗಳಲ್ಲಿ ಐದು ಬಾಹ್ಯ ನಡವಳಿಕೆಗೆ ಸಂಬಂಧಪಟ್ಟುದು.

ಯಮ=ಅಹಿಂಸೆ, ಸತ್ಯ, ಆಸ್ತೇಯ, (ಇತರರ ಆಸ್ತಿಯನ್ನು ಅಪಹರಿಸದೆ ಇರುವುದು) ಬ್ರಹ್ಮಚರ್ಯ, ಅಪರಿಗ್ರಹ.

ನಿಯಮ=ಶುಚಿ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ.

ಆಸನ=ದೇಹವನ್ನು ತಹಬಂದಿಗೆ ತಂದು, ಚಿತ್ತಸ್ಥೆರವನ್ನು ಪಡೆಯಲು ಆರಾಮವಾಗಿ ಕೂತುಕೊಳ್ಳುವುದು.

ಪ್ರಾಣಾಯಾಮ=ಉಚ್ಚಾಸ, ನಿಶ್ವಾಸಗಳನ್ನು ಕ್ಲುಪ್ತವಾಗಿ ಸಾವಧಾನವಾಗಿ ನಡೆಸುವುದು.

ಪ್ರತ್ಯಾಹಾರ=ಲೌಕಿಕ ಸ್ವಭಾವದಿಂದ ಇಂದ್ರಿಯಗಳು ಬಹಿರ್ಮುಖ ವಾಗಿರುತ್ತವೆ. ಅದಕ್ಕೆ ಪ್ರತಿಯಾಗಿ ಅಂತರ್ಮುಖಿಯಾಗುವಂತೆ ಮಾಡುವುದು

ಮಿಕ್ಕ ಐದು ಯೋಗಾಂಗಗಳು ಮನಸ್ಸಿಗೆ ಮೀಸಲಾದುವು. ಚಿತ್ರಕ್ಕೆ