ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೧೪

ಮನಮಂಥನ

ಚಿತ್ತವನ್ನು ಅಥವಾ ಮನಸ್ಸನ್ನು ಯಾವುದಾದರೂ ಒಂದು ಪ್ರದೇಶದಲ್ಲಿ ಸ್ಥಿರವಾಗಿ ನಿಲ್ಲಿಸುವುದು 'ಧಾರಣ'. ಪ್ರದೇಶ ಎಂದಾಗ ದೇಹದ ಹೊರಗಿರುವ ದೇವರ ವಿಗ್ರಹವಾಗಿರಬಹುದು ; ದೇಹದಲ್ಲಿರುವ, ನಾಸಿಕಾಗ್ರ ಇತ್ಯಾದಿಯಾಗಿರಬಹುದು ; ಇಂತಹ ಪ್ರದೇಶಗಳು ಪವಿತ್ರವಾಗಿರಬೇಕು. ಋಷಿಗಳ ಕಾಲದಲ್ಲಿ ದೇಶ ಎಂದರೆ Space ಎನ್ನುವ ಅರ್ಥವಿತ್ತು. ವಿಶಾಲವಾದ Space ನಲ್ಲಿ ಸೀಮಿತವಾದ ಒಂದು ಪುಟ್ಟ ಪ್ರದೇಶದಲ್ಲಿ ಚಿತ್ತವನ್ನು ಬಂಧಿಸಿಡುವುದು, ಅಥವಾ ಮನಸ್ಸನ್ನು ಹಿಡಿದಿಡುವುದು 'ಧಾರಣ.'

ತತ್ರ ಪ್ರತ್ಯಯ್ಯಕ ತಾನತಾ ಧ್ಯಾನ

ಆ ಪ್ರದೇಶದಲ್ಲಿ ಇತರ ವಸ್ತುಗಳು ಮನಸ್ಸಿಗೆ ಬಾರದಂತೆ ಮಾಡುವುದು. ಮತ್ತು ಧಾರಣವನ್ನು ಮಾಡಿದ ವಸ್ತು ಅಥವಾ ವಿಷಯದೊಂದಿಗೆ ಒಂದಾಗುವುದು. ಇಂತ ಸ್ಥಿತಿಯನ್ನು ಧ್ಯಾನ ಎನ್ನುತ್ತಾರೆ. ಮನಸ್ಸಿನ ಈ ಅವಸ್ಥೆ ಅಥವಾ ಸ್ಥಿತಿಯಲ್ಲಿ ಧ್ಯಾನಕ್ಕೆ ಪಾತ್ರವಾದ ವಸ್ತು ಮತ್ತು ಅದನ್ನು ಅರಿಯುವ ಮನಸ್ಸು ; ಇವೆರಡರ ಹೊರತು, ಮತ್ತೆ ಯಾವುದೂ ಇರುವುದಿಲ್ಲ.

ತತ್ ಏವ ಅರ್ಥ ಮಾತ್ರ ನಿರ್ಭಾಸಂ ಸ್ವರೂಪ ಶೂನ್ಯಂ ಇವ ಸಮಾಧಿ: ಆ ತೆರನ ಧ್ಯಾನವು ಧ್ಯಾನಿಸುವ ವಸ್ತುವಿನ ಸ್ವರೂಪವಾಗಿ, ಧ್ಯಾನಿಸುತ್ತಿದ್ದೇನೆ ಎನ್ನುವುದು ಕೂಡ ಶೂನ್ಯವಾಗುವ ಮನಸ್ಸಿನ ಅವಸ್ಥೆಯನ್ನು 'ಸಮಾಧಿ' ಎನ್ನುತ್ತಾರೆ.

ತ್ರಯಂ ಏಕತ್ರ ಸಂಯಮ

ಮನಸ್ಸಿನ ಈ ಮೂರೂ ಸ್ಥಿತಿಗಳು, ಧಾರಣ, ಧ್ಯಾನ, ಸಮಾಧಿ, ಇವೆಲ್ಲವೂ ಒಂದೇ ವಿಷಯದಲ್ಲಿ ಕೂಡಿರುವಾಗ 'ಸಂಯಮ'ವು ಲಭಿಸಿದೆ. ಧಾರಣ, ಧ್ಯಾನ, ಸಮಾಧಿ ಸ್ಥಿತಿಗಳು, ಒಂದೇ ಕಾಲದಲ್ಲಿ ಒಂದೇ ವಿಷಯದಲ್ಲಿ ನಿರತವಾದಾಗ `ಸಂಯಮ' ಎನ್ನಿಸಿಕೊಳ್ಳುತ್ತದೆ.

ತತ್ ಜಯಾತ್ ಪ್ರಜ್ಞಾಲೋಕ:

ಸಂಯಮವು ಲಭಿಸಿದಾಗ ಪ್ರಜ್ಞಾಲೋಕವು ಅತ್ಯಂತ ಸ್ಪಷ್ಟವಾಗುತ್ತದೆ. ಅಂದರೆ ಅರಿಯುವ ಮನಸ್ಸಿನ ಅಂಶವು ಅತ್ಯಂತ ಚುರುಕಾಗುತ್ತದೆ. ಸೂಕ್ಷ್ಮ ಗ್ರಾಹಿಯಾಗುತ್ತದೆ.

ತಸ್ಯ ಭೂಮಿಷು ವಿನಿಯೋಗ:

ಸಂಯಮವನ್ನು ಹಂತಹಂತವಾಗಿ, ಸ್ಕೂಲವಾದ ವಿಷಯಗಳಿಂದ, ಸೂಕ್ಷ್ಮವಾದವುಗಳತ್ತ ಗುರಿ ಮಾಡಬೇಕು.

ತ್ರಯಂ ಅಂತರಂಗಂ ಪೂರ್ವೇಭ್ಯ: