ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ

೪೧೫

ಯಮ, ನಿಯಮ ಮೊದಲಾದ ಐದು ಅಂಗಗಳಿಗಿಂತಲೂ, ಧಾರಣ ಧ್ಯಾನ ಸಮಾಧಿಗಳು, ಅಂತರಂಗಂ, ಅಂದರೆ ಮನಸ್ಸಿನ ಆಂತರ್ಯದಲ್ಲಿರುತ್ತದೆ.

ತದಪಿ ಬಹಿರಂಗಂ ನಿರ್ಬೀಜಸ್ಯ

ಹಾಗೂ, ಈ ಮೂರೂ, ನಿರ್ಬಿಜ ಸಮಾಧಿಗೆ, ಹೊರತಾದುವು, ಅಂದರೆ ಬಾಹ್ಯದಲ್ಲಿರುವುವು.

ಎಂಟು ಸೂತ್ರಗಳನ್ನು ಈಗಿನ ಮನೋವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸುವ. ಕುತೂಹಲಕಾರಿಯಾದ ಕತೆಯನ್ನೋ, ಕಾದಂಬರಿಯನ್ನೋ ಓದುತ್ತಿರುವಾಗ ಮುಂದೇನಾಗುತ್ತೆ ಎಂಬ ಕುತೂಹಲವು ಓದುಗನ ಮನಸ್ಸನ್ನು ಸೆರೆಹಿಡಿಯುತ್ತದೆ. ಹತ್ತು ಹನ್ನೆರಡು ವರ್ಷದ ಹುಡುಗರೂ ಕೂಡ 'ತಡೀಮ್ಮಾ, ಈ ಕತೆಯನ್ನು ಮುಗಿಸಿಬಿಟ್ಟು ಆಮೇಲೆ ಊಟಕ್ಕೆ ಬಡ್ತಿನಿ' ಎನ್ನುತ್ತಾರೆ. ಅಂದರೆ ಕತೆಯ ಪಾತ್ರಗಳು ಅವರ ಮನಸ್ಸಿನಲ್ಲಿ ಅವರೇ ಆಗಿಬಿಡುತ್ತಾರೆ. ಪಾತ್ರಗಳು ಅವತರಿಸಿದಂತೆಲ್ಲಾ ಇವರೂ ಹೊಸ ಪಾತ್ರಗಳಾಗುತ್ತಾರೆ. ಅಂದರೆ ಪಾತ್ರಗಳು ಬೇರೆ, ಓದುವವನು ಬೇರೆ ಎಂಬ ವ್ಯತ್ಯಾಸವು ಓದುವ ಕಾಲದಲ್ಲಿ ಉಳಿದಿರುವುದಿಲ್ಲ. ಹೀಗಾಗುವುದು ಮನಸ್ಸಿನ ಮೇಲ್ಪದರಗಳಲ್ಲಿ ಮಾತ್ರ Superficial layers of the conscious mind ಎನ್ನಬಹುದು. ಸೊಳ್ಳೆಯು ಆಗ ಕಚ್ಚಿದರೆ, ಗಮನಕ್ಕೆ ಬರದೆ ಇರಬಹುದು. ಆದರೆ ಕಷ್ಟ ಕಟ್ಟಿರುವೆಯು ಕಟುಕಿದರೆ, ಪುಸ್ತಕವನ್ನು ಬದಿಗಿಟ್ಟು, ಇರುವೆಯನ್ನು ಅಪ್ಪಚ್ಚಿಮಾಡತೊಡಗುತ್ತಾನೆ. ಆದ ಕಾರಣ ಮನಸ್ಸಿನ ಮೇಲ್ಪದರಗಳಲ್ಲಿ ತಾತ್ಕಾಲಿಕವಾಗಿ ಏಕಾಗ್ರಚಿತ್ತತೆಯು ಇತ್ತು ಎನ್ನಬೇಕು.


ಕತೆ ಕಾದಂಬರಿಗಳಲ್ಲಿ ಮಗ್ನವಾಗುವುದು ಏಕಾಗ್ರಚಿತ್ತತೆಯ ಒಂದು ಲಘು ರೂಪ.

ಮಧ್ಯಮ ವರ್ಗದ ನನ್ನ ಸ್ನೇಹಿತನೊಬ್ಬ ಬಹಳಷ್ಟು ವರ್ಷಗಳು ಹೊಟ್ಟೆಕಟ್ಟಿ ಹಣವನ್ನು ಕೂಡಿಡುತ್ತಿದ್ದ. ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಹಿರಿಯ ಹಂಬಲ. ಕಡೆಗೊಂದು ಸೈಟ್‌ಕೊಂಡ. ಆನಂತರ ಆರೇಳು ತಿಂಗಳು ಮನೆಯನ್ನು ಕಟ್ಟಿಸುವುದೊಂದೇ ಅವನ ಮನಸ್ಸಿನ ತುಂಬಾ ಇದ್ದುದು. ಚರಿತ್ರೆಯನ್ನು ಓದಿ ಪ್ಯಾಸುಮಾಡಿದ ಪದವೀಧರ. ಆದರೆ ಅವನೇ ಮನೆಯ ಪ್ಲಾನನ್ನು ಹತ್ತಾರು ಬಾರಿ ಬರೆದ. ಏನೇನೂ ಅರಿಯದ ಹಳ್ಳಿಯಿಂದ ಬಂದಿದ್ದ ಹೆಣ್ಣು ಬಲು ಉತ್ಸಾಹದಿಂದ ಸಲಹೆಗಳನ್ನು ನೀಡುತ್ತಿದ್ದಳು. ಕಚೇರಿಗೇನೋ ಕೆಲಸಕ್ಕೆ ಹೋಗಿ ಬರುತ್ತಿದ್ದ. ಸರಕಾರೀ ಕಚೇರಿಯಾದ್ದರಿಂದ ಹೇಗೋ ತಳ್ಳಿಕೊಂಡು ಹೋಗುತ್ತಿದ್ದ. ಏಕೆಂದರೆ ಕಚೇರಿಯಲ್ಲಿ ಅವ ಮಾಡುತ್ತಿದ್ದ ಕೆಲಸವೆಂದರೆ, ಎಲ್ಲಿ ಇಟ್ಟಿಗೆ ಕಮ್ಮಿದರದಲ್ಲಿ