ಮನಮಂಥನ
ತಪ್ಪು ಮಾಡಿದರೆ ಕ್ರೂರವಾಗಿ ಶಿಕ್ಷಿಸುತ್ತದೆ. ಆ ದೇವಿಗೆ ಸಂತುಷ್ಟಿಯಾದರೆ ಅನುಗ್ರಹಿಸುತ್ತಾಳೆ ಎಂದು ಹಲವರು ನಂಬಿರುತ್ತಾರೆ. ವಿಚಾರಪರರು ಎಂದವರನ್ನು ಹೇಳುವಂತಿಲ್ಲ. ಆದರೆ ಅವರನ್ನೂ ಅವರ ಮಸನ್ನು ನಡೆಸುತ್ತದೆ. ಅಂತಹವರು ಪೂರ್ಣ ನಂಬುಗೆಯಿಂದ ಮಾರಿಯಮ್ಮನಿಗೆ ತಾವು ತಿಳಿದ ರೀತಿಯಲ್ಲಿ ಪೂಜೆಯನ್ನು ಹಾಕುತ್ತಾರೆ. ಅವರ ಪೂಜಾ ವಿಧಾನಗಳಲ್ಲಿ ವಿಗ್ರಹದ ಮುಂದೆ ತಮಟೆಯ ತಾಳಕ್ಕೆ ಸರಿಯಾಗಿ ಕುಣಿಯುವುದೂ ಒಂದು. ಹೀಗೆ ಕುಣಿಯುವಾಗ ಅವರ ಮನಸ್ಸು, ತಮ್ಮ ಇಷ್ಟದೇವತೆಯಲ್ಲಿ ಧಾರಣ, ಧ್ಯಾನವನ್ನು ಮಾಡಿರುತ್ತದೆ. ಆ ರೀತಿ ಪೂಜಾ ಕುಣಿತವನ್ನು ಮಾಡದಿದ್ದರೆ, ಕ್ರೂರ ಶಿಕ್ಷೆಯನ್ನು ಅನುಭವಿಸಬೇಕಾಗಬಹುದು ಎಂಬ ಮೂಲಭೂತ ಭಯವು, ಧಾರಣ, ಧ್ಯಾನಗಳನ್ನು ಪ್ರಚೋದಿಸಿರಬಹುದು. ಪ್ರಚೋದನೆಯು ಯಾವುದೇ ಆಗಿರಲಿ, ಧಾರಣ ಧ್ಯಾನಗಳು ಅಲ್ಪಮಟ್ಟದ್ದೇ ಆಗಿರಲಿ, ಅವರುಗಳೂ, ಒಂದು ಹಂತದಲ್ಲಿ ಒಮ್ಮೊಮ್ಮೆ, ಆವೇಶ ಬಂದವರಂತೆ ಕುಣಿದು, ಸ್ವಲ್ಪಕಾಲ ಪ್ರಜ್ಞಾಹೀನರಾಗಿ ಬಿದ್ದು ಬಿಡುತ್ತಾರೆ. ಆ ಅವಧಿಯಲ್ಲಿ ಅವರು ಸಮಾಧಿಸ್ಥಿತಿಯಲ್ಲಿರುತ್ತಾರೆಯೋ ಇಲ್ಲವೋ ಅದನ್ನು ಯೋಗಸೂತ್ರಗಳಲ್ಲಿ ಹೇಳಿಲ್ಲ. ದೇಹಾಟೋಪವಿಲ್ಲದೆ, ಸ್ಥಿರವಾದ ಆಸನದಲ್ಲಿ ಕುಳಿತು, ಉಸಿರಾಡುವುದನ್ನು ಹತೋಟಿಯಲ್ಲಿಟ್ಟುಕೊಂಡು, ಸ್ವಪ್ರಯತ್ನದಿಂದ, ಧಾರಣ, ಧ್ಯಾನವನ್ನು ಅಭ್ಯಾಸ ಮಾಡಿದರೆ, ಸೂಕ್ತ ಕಾಲದಲ್ಲಿ ಸಮಾಧಿಸ್ಥಿತಿಯು ದೊರೆಯುತ್ತದೆ, ಎನ್ನುತ್ತದೆ ಯೋಗಸೂತ್ರಗಳು. ತದ್ವಿರುದ್ಧವಾದುದು ಮಾರೀ ಕುಣಿತ. ಆದರೆ ಫಲಿತಾಂಶದಲ್ಲಿ, ಬಹಿರ್ಲೋಕ ಪ್ರಜ್ಞೆಯು ಎರಡೂ ಸಾಧನೆಗಳಿಂದ ಸ್ವಲ್ಪಕಾಲ ತಪ್ಪಿಹೋಗಿರುತ್ತದೆ.
ಮೂರ್ಛ್ಹೆಯ ರೋಗದಲ್ಲಿ ಕೂಡ ದೇಹದ ಅಟಾಟೋಪವಿರುತ್ತದೆ. ನಂತರ ಪ್ರಜ್ಞೆಯು ತಪ್ಪಿಹೋಗಿರುತ್ತದೆ. ಬಹಿರ್ಲೋಕದ ಅರಿವು ಇರುವುದಿಲ್ಲ. ಮನಸ್ಸಿನ ಅಂತರ್ಲೋಕದಲ್ಲಿ ಆಗ ಏನು ನಡೆಯುತ್ತಿರುವುದೋ ಅದು ಯಾರಿಗೂ ತಿಳಿಯವುದಿಲ್ಲ. ಎಚ್ಚರಗೊಂಡ ಮೇಲೆ ರೋಗಿಗಳಿಗೂ ಮನಸ್ಸಿನ ಅಂತರ್ಲೋಕದಲ್ಲಿ ಏನು ಆಯಿತು ಎಂಬುದರ ನೆನಪು ಉಳಿದಿರುವುದಿಲ್ಲ.
ಶಸ್ತ್ರಚಿಕಿತ್ಸೆಯ ಮೊದಲು ಜ್ಞಾನವನ್ನು ತಪ್ಪಿಸಲು ಹಲವಾರು ಔಷಧಿಗಳನ್ನು ಬಳಸುತ್ತಾರೆ. ಜ್ಞಾನವು ತಪ್ಪಿಹೋದಾಗ, ಅವರ ಮನಸ್ಸಿನ ಅಂತರ್ಲೋಕದಲ್ಲಿ ಏನಾಗುತ್ತೋ, ಅದರ ನೆನಪು ಉಳಿದಿರುವುದಿಲ್ಲ.
ಗಾಢನಿದ್ರೆಯಲ್ಲಿ, Delta Sleep ಸ್ಥಿತಿಯಲ್ಲಿ, ಸುಷುಪ್ತ ಎನ್ನುವ ನಿದ್ರೆಯಲ್ಲಿ ಮನಸ್ಸಿನ ಅಂತರ್ಲೋಕದಲ್ಲಿ ಯಾವ ಅನುಭವವಾಗುತ್ತದೋ ಅದು ಎಚ್ಚರ