೪೧೯
ವಾದಮೇಲೆ ಸ್ಮರಣೆಯಲ್ಲಿರುವುದಿಲ್ಲ.
ಆದರೆ ಯೋಗಸೂತ್ರಗಳ ಪ್ರಕಾರ, ಸಮಾಧಿಸ್ಥಿತಿಯನ್ನು ಪಡೆದುಕೊಂಡ ಮೇಲೆ, ಅಂತಹ ಸ್ಥಿತಿಯನ್ನು ಮುಂದುವರೆಸಿದರೆ, ಮನಸ್ಸಿನ ಅಂತರ್ಲೋಕದಲ್ಲಿ ಅನುಭವಿಸಿದುದು, ಎಚ್ಚರಗೊಂಡ ಮೇಲೆ ಸ್ಪುಟವಾಗಿ ಸ್ಮರಣೆಯಲ್ಲಿರುತ್ತದೆ.
ಯೋಗಸೂತ್ರಗಳಲ್ಲಿ ಈ ವಿಷಯವನ್ನು ಹೇಳಿರುವುದರ ಜತೆಗೆ, ಹಲವಾರು ಮನನಿಗರು ಮನಸ್ಸಿನ ಅಂತರ್ಲೋಕದಲ್ಲಿ, ಬಹಿರ್ಲೋಕದ ಪ್ರಜ್ಞೆಯಿಲ್ಲದಿರುವಾಗ, ತಾವು ಅನುಭವಿಸಿದುದನ್ನು ಎಚ್ಚರಗೊಂಡ ಮೇಲೆ ವರ್ಣಿಸಿದ್ದಾರೆ. ಇಂತಹ ಮನನಿಗರು ಪ್ರಪಂಚದ ಎಲ್ಲ ಕಡೆಗಳಲ್ಲೂ ಎಲ್ಲ ಕಾಲದಲ್ಲೂ, ವಿರಳವಾಗಿಯಾದರೂ, ಅವತರಿಸಿದ್ದಾರೆ. ಇವರೆಲ್ಲರ ಅನುಭವವೂ ಮೂಲಭೂತವಾಗಿ ಒಂದೇ ಆಗಿದೆ. ಪ್ಲಾಟಿನಸ್, ಮೈಸ್ಟರ್ ಎಕ್‌ಹಾರ್ಟ್, ರಾಮಕೃಷ್ಣ ಪರಮಹಂಸ, ಯೋಗಿ ಅರಬಿಂದೊ, ಪ್ರವಾದಿ ಪೈಗಂಬರ್, ಯೇಸುಸ್ವಾಮೀ ; ಇತ್ಯಾದಿ, ಇತ್ಯಾದಿ.
ಅಂದ ಮೇಲೆ ಸಮಾಧಿ ಸ್ಥಿತಿಯನ್ನು ಮತ್ತು ಅದರ ಮುಂದುವರಿದ ಸ್ಥಿತಿಗಳನ್ನೂ, ವಿಶ್ಲೇಷಿಸಿದ ಯೋಗಸೂತ್ರಗಳು, ಮನೋಶಾಸ್ತ್ರವನ್ನು ಅಭ್ಯಸಿಸುವ ಮತ್ತು ಆ ಶಾಸ್ತ್ರದಲ್ಲಿ ಸಂಶೋಧಿಸುವ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗ ಬಹುದು. ಅಂತಹ ಜ್ಞಾನಾಭ್ಯರ್ಥಿಗಳು ಯೋಗ ಸೂತ್ರಗಳನ್ನು ವ್ಯಾಸಂಗ ಮಾಡಬೇಕು. ಖಂಡಿತವಾಗಿ ಸಂಶೋಧನಾ ಮಾರ್ಗದರ್ಶನಗಳೂ ದೊರೆಯುತ್ತವೆ.
ಪರಿಣಾಮ ತಯ ಸಂಯಮಾತ್ ಅತೀತಾನ್ ಆಗತ ಜ್ಞಾನಂ
ನಿರೋಧ ಪರಿಣಾಮ ; ಸಮಾಧಿ ಪರಿಣಾಮ ; ಏಕಾಗ್ರತಾ ಪರಿಣಾಮ; ಇವು ಮೂರೂ ಪರಿಣಾಮಗಳೆಂದು ವಿಶ್ಲೇಷಿಸಲ್ಪಟ್ಟಿದೆ. ಮೂರೂ ಪರಿಣಾಮಗಳಿಗೆ ಮತ್ತೂ ಮೂರು ವಿಭಾಗಗಳಿವೆ. ಭೌತಿಕವಾದ ವಸ್ತುವು ವ್ಯತ್ಯಾಸವಾದಾಗ ಧರ್ಮ ಪರಿಣಾಮ ; ಅಂತಹ ವಸ್ತುವು ಕಾಲಗತಿಯಲ್ಲಿ ವ್ಯತ್ಯಾಸವಾಗುವುದು ಲಕ್ಷಣ ಪರಿಣಾಮ : ಇದಕ್ಕೂ ಆನಂತರ ಪರಿಪಕ್ವವಾಗಲೀ ಅಥವಾ ಪರಿಣಾಮ ಹೊಂದಲಿ, ಅಂತಹುದು ಅವಸ್ಥಾ ಪರಿಣಾಮ :
ನಿರೋಧ, ಸಮಾಧಿ, ಏಕಾಗ್ರತಾ ಪರಿಣಾಮಗಳಲ್ಲಿ ; ಸಂಯಮವನ್ನು (ಅಂದರೆ ಧಾರಣ, ಧ್ಯಾನ ಸಮಾಧಿಗಳ ಒಕ್ಕೂಟವನ್ನು ಸಾಧಿಸಿಕೊಂಡರೆ, ಭೂತಕಾಲದ ಮತ್ತು ಭವಿಷ್ಯಕಾಲದಲ್ಲಾಗುವುದನ್ನು ಅರಿಯಬಹುದು. ವರ್ತಮಾನ ಕಾಲವಂತೂ ತಿಳಿದೇ ಇದೆ.
ಅಂದರೆ ಮನಸ್ಸನ್ನು ಏಕಾಗ್ರವಾಗಿ ಕ್ರೋಡೀಕರಿಸಿ, ಮನಸ್ಸಿನ ಎಳೆಗಳನ್ನೆಲ್ಲಾ