ಮನಮಂಥನ
ಒಕ್ಕೂಡಿಸಿ, ನಡಸಿದರೆ ಧಾರಣ, ಧ್ಯಾನ ಮತ್ತು ಸಮಾಧಿಗಳು ಸುಲಭವಾಗಿ ಸಾಧ್ಯವಾಗುವುದು. ಇದಾದಾಗ 'ಸಂಯಮ'ವು ಲಭ್ಯವಾಯಿತು. ಆಗ ವಸ್ತುವಿಷಯಕವಾಗಿ, ಹಿಂದೆ ಈ ರೀತಿಯಲ್ಲಿತ್ತು, ಈಗ ಹೀಗಿದೆ, ಮುಂದೆ ಹೀಗಾಗುತ್ತದೆ ಎನ್ನುವ ತ್ರಿಕಾಲಜ್ಞಾನವು ಹುಟ್ಟುತ್ತದೆ. ಅಂದರೆ ಭೂತ, ವರ್ತಮಾನ, ಭವಿಷ್ಯತ್ ಕಾಲಗಳ ಜ್ಞಾನವು ಉಂಟಾಗುತ್ತದೆ. ಉಂಟಾಗುವುದನ್ನು ವೈಜ್ಞಾನಿಕವಾಗಿಯೂ ಒಪ್ಪಬೇಕು. ಮನಸ್ಸಿನ ಕಾರ್ಯಗಳಲ್ಲಿ ಭೂತಭವಿಷ್ಯತ್ತುಗಳನ್ನು ಅರಿಯುವುದೂ ಒಂದು. ಆದರೆ ಸೂಕ್ತವಾದ ಮನಸ್ಸಿನ ಹತೋಟಿಯು ಅಗತ್ಯ.
ಶಬ್ದಾರ್ಥ ಪ್ರತ್ಯಯಾನಾಂ ಇತರೇತರ ಅಧ್ಯಾಸಾತ್ ಸಂಕರಸ್ ತತ್ ಪ್ರವಿಭಾಗ ಸಂಯಮಾತ್ ಸರ್ವಭೂತ ಋತಜ್ಞಾನಂ
ಒಂದು ವಾಕ್ ಅಥವಾ ಮಾತು, ಶಬ್ದದ ಒಂದು ರೀತಿಯ ಸಂಕಲನ. ಉದಾ; ಹಸು, ಈ ಶಬ್ದವನ್ನು ಕೇಳಿದಾಗ, ಹಾಲು ಕೊಡುವ ಸಾಧುವಾದ ಪ್ರಾಣಿ ಎಂಬ ಅರ್ಥವು ಅರಿವಾಗುತ್ತದೆ. ಅದರ ಜತೆಯಲ್ಲಿ ಹಸುವಿನ ಆಕಾರ, ರೂಪ, ದೇಹರಚನೆ, ಅದರ ನಡವಳಿಕೆ ಇತ್ಯಾದಿಗಳೆಲ್ಲವೂ ಮನಸ್ಸಿನಲ್ಲಿ ಸ್ಪುಟವಾಗಿ ತಿಳಿಯುತ್ತದೆ. ಶಬ್ದ, ಅರ್ಥ, ಅದರಿಂದುಂಟಾದ ಜ್ಞಾನವನ್ನು ಉಂಟುಮಾಡುತ್ತದೆ.
ಶಬ್ದ, ಅರ್ಥ ಮತ್ತು ಜ್ಞಾನ ಇವುಗಳನ್ನು ಚಿತ್ರದ 'ಸಂಯಮ'ದಿಂದ ಬೇರೆ ಬೇರೆ ಮಾಡಿದರೆ, ಆಗ ಯಾವ ಪ್ರಾಣಿಯು ಉಲಿದ ಶಬ್ದವನ್ನು ಅದರ ಅರ್ಥ ಮತ್ತು ಜ್ಞಾನದೊಂದಿಗೆ ವಿವರವಾಗಿ ತಿಳಿಯಲು ಸಾಧ್ಯ. ಅಂದರೆ ಇರುವೆಗಳು ಶಬ್ದದ ಮೂಲಕ ಸಂಪರ್ಕವನ್ನು ಕಲ್ಪಿಸಿಕೊಂಡರೆ, ಅಂತಹ ಶಬ್ದಗಳನ್ನು ಇರುವೆಗಳ ಭಾಷೆ ಎನ್ನಬೇಕು. ಚಿತ್ತದ 'ಸಂಯಮ'ವನ್ನು ಪಡೆದುಕೊಂಡವರು ಪ್ರಾಣಿಗಳ ಭಾಷೆಯನ್ನು ತಿಳಿಯುತ್ತಾರೆ ಎನ್ನುವುದು ವೈಜ್ಞಾನಿಕವಾಗಿ ಸಾಧ್ಯ. ಆದರೆ ಹಾಗೆ ಸಾಧಿಸಿಕೊಂಡ ಮಾನವರನ್ನು ನಾವು ಕಂಡಿಲ್ಲ. ಕಟ್ಟುಕತೆಗಳಲ್ಲಿ ಕೇಳಿದ್ದೇವೆ. ಅಂದಮಾತ್ರಕ್ಕೆ ಮನಸ್ಸು ಅಥವಾ ಅದರ ಶೂನ್ಯಸ್ಥಿತಿಯಲ್ಲಿ, ಪ್ರಾಣಿಗಳ ಭಾಷೆಯನ್ನು ತಿಳಿಯಬಹುದು ಎನ್ನುವುದನ್ನು ಒಪ್ಪಿಕೊಳ್ಳದಿದ್ದರೂ, ನಿರಾಕರಿಸುವಂತೆಯೂ ಇಲ್ಲ.
ಸಂಸ್ಕಾರ ಸಾಕ್ಷಾತ್ ಕರಣಾತ್ ಪೂರ್ವಜಾತಿ ಜ್ಞಾನಂ
'ಸಂಯಮ'ದ ಮೂರನೆಯ ಸಿದ್ಧಿ ಎಂದರೆ, ಪೂರ್ವಜನ್ಮದ ಸ್ಮರಣೆಯನ್ನು ಪಡೆಯುವುದು. ಹುಟ್ಟುಗುಣಗಳು ಎನ್ನುವುದು Hereditary Characteristics ಎನ್ನುವ ಅರ್ಥವನ್ನು ನೀಡುತ್ತದೆ. ಇಂದಿನ ಮಾನವ, ಸಹಸ್ರಾರು ವರ್ಷಗಳ ಹಿಂದೆ ಒಂದು ತೆರನ ಮರ್ಕಟ, Chimpanzee ಆಗಿದ್ದ. ಅದಕ್ಕೆ ಸಹಸ್ರಾರು