ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ

೪೨೧

ವರ್ಷಗಳ ಹಿಂದೆ ಸಸ್ತನಿಗಳ ಜಾತಿಯ ಪ್ರಾಣಿಯಾಗಿದ್ದ. ಅದಕ್ಕೂ ಲಕ್ಷಾಂತರ ವರ್ಷಗಳ ಹಿಂದೆ ಖಗ ಮತ್ತು ಉರಗಗಳಾಗಿದ್ದ. ಅದಕ್ಕೂ ಮೊದಲು ಕ್ರಿಮಿಕೀಟಗಳಾಗಿದ್ದ. ಎಲ್ಲದಕ್ಕೂ ಮೊದಲು ಜೀವವು ಪ್ರಾರಂಭವಾದಾಗ, ಜಂಗಮವಾಗಿದ್ದಾಗ, ಅಮೀಬಾ ಇತ್ಯಾದಿ ಒಂದು ಸೆಲ್ಲಿನ ಪುಟಾಣಿ ಜೀವಿಯಾಗಿದ್ದ. ಅದಕ್ಕೂ ಹಿಂದೆ ನಿರ್ಜಿವಿಯಾಗಿರುವ ವಸ್ತುವಾಗಿದ್ದ. ಇವೆಲ್ಲ ಅವಸ್ಥೆಗಳ ಸ್ಮರಣೆಯು ಮನಸ್ಸಿನ ಯಾವದೋ ಹಗೇವಿನಲ್ಲಿ ಕಣ್ಮರೆಯಾಗಿವೆ. ಮಾನವನ ಇಂದಿನ ಬಾಳಿಗೆ ಆ ಅವಸ್ಥೆಗಳ ಸ್ಮರಣೆಯು ಅನಗತ್ಯ. ಅಷ್ಟೇ ಅಲ್ಲ, ತೊಡಕೂ ಆಗುತ್ತದೆ. ಆದಕಾರಣ ಪ್ರಕೃತಿಯ ಪ್ರಗತಿಯು, Natural Evolution ಕೋಟ್ಯಂತರ ವರ್ಷಗಳ ನೆನಪನ್ನು, ಮಾನವನ ಸ್ಮರಣೆಯ ಆಳ ಆಳದಲ್ಲಿರುವ ಹಗೇವುಗಳಲ್ಲಿ ಹುದುಗಿಸಿಟ್ಟಿದೆ. ಭದ್ರವಾಗಿ ಬೀಗವನ್ನು ಹಾಕಿಟ್ಟಿದೆ.

'ಸಂಯಮ'ದಿಂದ, ಧಾರಣ, ಧ್ಯಾನ, ಸಮಾಧಿಗಳ ಒಕ್ಕೂಟವು ಲಬ್ಧವಾದಾಗ ಮಾನವನ ಮನಸ್ಸು ನಿರ್ಮಲವಾಗಿರುತ್ತದೆ. ಲೌಕಿಕವಾಗಿ ನಿರ್ಮಲವಾಗಿರುತ್ತದೆ. ಅಂತಹ ಸತ್-ಪರಿಸ್ಥಿತಿಯಲ್ಲಿ, ಹಗೇವುಗಳಲ್ಲಿ ಶೇಖರಿಸಿಡಲ್ಪಟ್ಟ ಪುರಾತನ ಸನಾತನ ಸ್ಮರಣೆಗಳು, ಹುದುಗಿರಬೇಕಾಗಿಲ್ಲ. 'ಸಂಯಮ'ವನ್ನು ಗಳಿಸಿದ ಮಾನವನಿಗೆ ಅವಾವುದೂ ತೊಡಕುಗಳಾಗುವುದಿಲ್ಲ. ಆದುದರಿಂದ ಅವುಗಳ ಸ್ಮರಣೆಯನ್ನು ಸಂಯಮಿಯು ಉಪದ್ರವವಾಗದೆ ಪಡೆಯಬಲ್ಲ. ನಿರ್ಜಿವಿಯಾದ ಅವಸ್ಥೆಯ ಮೂಲಭೂತವಾದುದನ್ನು ಅರಿಯಬಲ್ಲ. ಜೀವಿಯಾದ ಮೇಲೆ ಪ್ರಗತಿಯು, ಮುಂದು ಮುಂದು ನಡೆದಾಗ, ಹಂತಹಂತದಲ್ಲೂ ತಾನು ಏನು, ಯಾವಾಗ, ಆಗಿದ್ದ. ಯಾವ ಪ್ರಾಣಿಯಾಗಿದ್ದ ಎಂಬುದನ್ನೂ ತಿಳಿಯಬಲ್ಲ. ಇಂತಹ ಬ್ರಹ್ಮಾಂಡದ ಜ್ಞಾನ ಸಂಪಾದನೆಯಿಂದ ಲೌಕಿಕವಾದ ಈ ಮಾನವ ಬಾಳಿಗೆ ಅಡಚಣೆಯೂ ಇಲ್ಲ. ತೊಡಕೂ ಆಗುವುದಿಲ್ಲ. ಆದರೆ ತಾನು, ತನ್ನದು ಎಂಬ ದೃಢವಾದ ಲೌಕಿಕ ಕಲ್ಪನೆಯು ನಿರ್ಮೂಲವಾಗುತ್ತದೆ. ಬ್ರಹ್ಮಾಂಡವೇ ನಾನು ಎನ್ನುವ ವಿಶ್ವಕುಟುಂಬಿಯ ಅರಿವು ಬ್ರಹ್ಮಾಂಡದಲ್ಲೆಲ್ಲಾ ಹರಡುತ್ತದೆ. ಹರಡಿ ಅದರೊಡನೆ ಒಂದಾಗುತ್ತದೆ. ಅ-ದ್ವಿತೀಯವಾಗುತ್ತದೆ.

ಪೂರ್ವಜನ್ಮದ ಸ್ಮರಣೆಯು ಸ್ಪುಟವಾಗಿ, ೭-೮ ವಯಸ್ಸಿನ ಬಾಲಕ ಬಾಲಕಿಯರು. ಸ್ಮರಣೆಯನ್ನು ವಿವರಿಸಿದಾಗ, ಸಂಶೋಧನೆಯಿಂದ ಆ ಹುಡುಗರಂದುದು ಚಾರಿತ್ರಿಕವಾಗಿ ನಿಜ ಎಂದು ತಿಳಿದಾಗ, ಆಶ್ಚರ್ಯವು ಉಂಟಾಗುತ್ತವೆ. ಏಕೆ ? ಹೀಗಾಗುವುದು ಹೇಗೆ ಸಾಧ್ಯ ? ಎಂದು ಅನಿಸುವುದರಿಂದ, ಆದರೆ 'ಸಂಯಮಿ'ಯ ಅನುಭವ ವಾಕ್ಯಗಳನ್ನು, Natural Evolution ಜತೆಗೆ