ಮನಮಂಥನ
ಸಮನ್ವಯಿಸಿದರೆ, ಆಶ್ಚರ್ಯವಾಗುವುದಿಲ್ಲ. ಅರಿವು ವಿಶಾಲವಾಗುತ್ತದೆ. ಹಿರಿಯರ ಭಾಷೆಯಲ್ಲಿ ಬ್ರಹ್ಮಾಂಡ ಮತ್ತು ಪಿಂಡಾಂಡಗಳು, ಐಕ್ಯವಾಗುತ್ತವೆ.
Conscious; Sub-conscious; Personal unconcious and total unconsious ಎಲ್ಲವೂ ಮನಸ್ಸಿನ ಸ್ಥಿತಿಗತಿಗಳೂ, ಮನಸ್ಸನ್ನು ಮೆಟ್ಟಿನಿಂತು ವೀಕ್ಷಿಸಿದರೆ, ಅಂದರೆ ಅರಿಯತೊಡಗಿದರೆ, ಇವೆಲ್ಲಾ ಮನಸ್ಸಿನ ಸ್ಥಿತಿಗಳೂ, ಅವಸ್ಥೆಗಳೂ, ಒಂದೇ ಎಂಬ ಅರಿವು ಲಭಿಸುತ್ತದೆ.
ಸಂಯಮಿಯ ಸಾಧನೆಯು, ಈ ಕಡೆ, ಜನ್ಮ ಜನ್ಮಾಂತರದತ್ತ, Focus ಮಾಡಿದಾಗ, ಜನ್ಮ ಜನ್ಮಾಂತರದ ನೆನಪುಗಳು ಸಹಜವಾಗಿ ಎಚ್ಚರಗೊಂಡು, ಅರಿವು ವಿಶಾಲವಾಗುತ್ತದೆ. ಸೀಮಾತೀತ, ಕಾಲಾತೀತವಾದ 'ಅರಿವು' ದೇವರು ಎಂದು ಹೆಸರನ್ನಿಡಿಸಿಕೊಳ್ಳುವುದು, ಸಂಯಮಿಯಾಗಲಾರದ ಕೋಟ್ಯಂತರ ಮಂದಿಗೆ, ನೆಮ್ಮದಿಯನ್ನೂ ಸಮಾಧಾನವನ್ನೂ ತುಸು ಮಟ್ಟಿಗಾದರೂ ನೀಡುತ್ತದೆ. ಈ ತೆರನ ಅರಿವು ಹಂತ ಹಂತವಾಗಿ ಉಂಟಾಗುವುದರಿಂದ, ಹಂತ ಹಂತದ 'ದೇವರ ಕಲ್ಪನೆಯೂ ಸಹಜವಾದುದು. ಮೂವತ್ತು ಮೂರು ಕೋಟಿ ದೇವರುಗಳೂ ನೈಜವಾದುವು. ಸತ್ಯವಾದವು ಆಯಾ ಹಂತದವರಿಗೆ ಅಗತ್ಯವಾದುದು.
ಪ್ರತ್ಯಯಸ್ಯ ಪರಚಿತ್ತ ಜ್ಞಾನ ನತತ್ ಸಾಲಂಬನ ತಸ್ಯ ವಿಷಯೇ ಭೂತತ್ವಾತ್
'ಸಂಯಮಿ'ಯು ಪರರನ್ನು ನೋಡಿದಾಗ, ಅವರುಗಳ ಮನಸ್ಸನ್ನು ಅರಿಯುವನು. ಆದರೆ, ಅವರುಗಳ ಮನಸ್ಸಿನೊಳಗೆ ಇರುವ ಆಲೋಚನೆಗಳನ್ನು ತಿಳಿಯಲಾರ. “Face is the index of the mind" ಎಂಬ ಅರಿವಿನ ನಾಡ ನುಡಿಯು ಪ್ರಸಿದ್ಧವಾದುದು.
ರಾಗದ ಆಕಾರಗಳು ಮತ್ತು ವಿಕಾರಗಳು, ರಾಗ ಪ್ರಚೋದಿತನಾದ ಮಾನವನ ಮುಖದಲ್ಲಿ ಕಾಣಿಸುತ್ತವೆ. ಇದು Obvious, ರೇಗಿರುವ ಗಂಡನ ಮುಖವು ಧುಮುಗುಟ್ಟುತ್ತಿರುತ್ತದೆ. ಅಜ್ಞಾನದಿಂದಾಗಿ, ರೇಗಿಸಿದ ಹೆಂಡತಿಯ ಮುಖವೂ ಧುಮು ಧುಮು ಆಗಿರುತ್ತದೆ. ಆದರೆ ಇಬ್ಬರೂ ಲೌಕಿಕ ಬಾಳನ್ನು ನಡೆಸಬೇಕು. ನಡೆಸಲೇಬೇಕು ! ನನಗೆ ಹಸಿವಿಲ್ಲ. ಒಂದು ಬಟ್ಟಲು ಮೊಸರನ್ನು ಕೊಡು ಸಾಕು' ಎಂದನ್ನುತ್ತಾನೆ ಗಂಡ, ಸರ್ವ೦ ಭಕ್ಷಯಾಮಿ ಎನ್ನುವಂತೆ ಅವನ ಹೊಟ್ಟೆಯು ಉರಿಯುತ್ತಿರುತ್ತದೆ. ಮುಖವನ್ನು ಸಿಂಡರಿಸಿಕೊಂಡು ಬಟ್ಟಲು