೪೨೩
ಮೊಸರನ್ನು ಹೆಂಡತಿಯು ತಂದಿಡುತ್ತಾಳೆ. ಅದನ್ನು ಕುಡಿದು ಹೋದಾಗ ಕಲ್ಲಿನ ಹರಳು ಸಿಗುತ್ತದೆ. ಆದುದರಿಂದಲೇ ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಸಿಕ್ಕಿತು ಎನ್ನುವುದು.
ಅಂತಹವರ ಮುಖವನ್ನು ನೋಡಿದರೆ ಸಾಮಾನ್ಯರಿಗೂ ಅವರುಗಳ ಮನಸ್ಸು ರೇಗು ಉದ್ವೇಗಗಳಿಂದ ಕೂಡಿದೆ ಎನ್ನುವುದು ಸ್ಪಷ್ಟವಾಗುತ್ತದೆ. 'ಸಂಯಮಿ'ಗಾದರೋ, ಮುಖವನ್ನು ನೋಡಿದಾಗ ಕಾಣಬರುವ ಕಿಂಚಿತ್ ವ್ಯತ್ಯಾಸಗಳಿಂದಲೂ, ಅವರುಗಳ ಮನಸ್ಸಿನಲ್ಲಿ ಯಾವ ರೀತಿಯ ರಾಗವಿದೆ ಎನ್ನುವುದು ತಿಳಿಯುತ್ತದೆ. ಆದರೆ ಆ ರಾಗ ಭಾವನೆಗೆ ಕಾರಣವಾದ ಮನಸ್ಸಿನಲ್ಲಿರುವ ಒಳ್ಳೆಯದು ಅಥವಾ ಕೆಟ್ಟುದು ಆದ ಆಲೋಚನೆಯು 'ಸಂಯಮಿ'ಗೂ ತಿಳಿಯುವುದಿಲ್ಲ.
ಕಾಯ ರೂಪ ಸಂಯಮಾತ್ ತತ್ ಗ್ರಾಹ್ಯ ಶಕ್ತಿ ಸಂಭೇ ಚಕ್ಷುಃ ಪ್ರಕಾಶ ಸಂಯೋಗ, ಅಂತರ್ಧಾನ
ಸಂಯಮವನ್ನು ತನ್ನ ಕಾಯರೂಪದಲ್ಲಿ ಕೇಂದ್ರೀಕರಿಸಿದಾಗ, ಕಣ್ಣುಗಳ ಪ್ರಕಾಶವು ಮತ್ತು ಅದನ್ನು ಗ್ರಹಿಸುವ ಶಕ್ತಿಯು ಇವೆರಡೂ ಒಂದಾಗುವುದರಿಂದ, ಕಾಯರೂಪವು ಇತರರಿಗೆ ಕಾಣಿಸುವುದಿಲ್ಲ. ಅಂದರೆ ಸಂಯಮಿಯು ಅದೃಶ್ಯನಾಗುತ್ತಾನೆ.
ಸಾಧು ಸಂತರ ಜೀವನದಲ್ಲಿ ಹೀಗಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಆದರೆ ವೈಜ್ಞಾನಿಕವಾಗಿ ಇಂದು ಇದನ್ನು ಊಹಿಸಲು ಅಥವಾ ವಿವರಿಸಲು ಆಗುವುದಿಲ್ಲ.
ಶರೀರದ ಮೇಲೆ ಬೆಳಕು ಬಿದ್ದಾಗ, ಶರೀರದ ಹೊರಪದರದಿಂದ ಹೊರ ಚೆಲ್ಲಿದ ಬೆಳಕು ಇತರರ ಕಣ್ಣಿಗೆ ಬಿದ್ದಾಗ, ನಮ್ಮ ಶರೀರದ ಸ್ವರೂಪವು, ಇತರರಿಗೆ ಕಾಣಿಸುತ್ತದೆ. ಆದರೆ ಶರೀರದ ಹೊರ ಪದರವು ಮೇಲೆ ಬಿದ್ದ ಬೆಳಕನ್ನು ಹೊರ ಚೆಲ್ಲದೆ ಇದ್ದರೆ, ಆಗ ಇತರರಿಗೆ ಕಾಣಿಸುವುದಿಲ್ಲ. ಕಗ್ಗತ್ತಲಲ್ಲಿ ಶರೀರವು ಕಾಣಿಸುವುದಿಲ್ಲ. ಅಂತಹ ಸ್ಥಿತಿಯನ್ನು ನಮ್ಮ ಶರೀರವು 'ಸಂಯಮ'ದ ಕೇಂದ್ರೀಕರಣದಿಂದ ಪಡೆಯುತ್ತದೆ ಎನ್ನುತ್ತಾರೆ, ಋಷಿಗಳು.
ಏತೇನ ಶಬ್ದಾದಿ ಅಂತರ್ಧಾನ ಮುಕ್ತಂ
ಮೇಲೆ ಹೇಳಿದ ರೀತಿಯಲ್ಲಿ, 'ಸಂಯಮಿ'ಯು ಶಬ್ದಾದಿಗಳು ಇತರರಿಗೆ ತಿಳಿಯದಂತೆ ಮಾಡಬಹುದು.
ಬೆಳಕಿನಂತೆಯೇ, ಶಬ್ದ, ರಸ, ಗಂಧ ಇತ್ಯಾದಿಗಳನ್ನೂ ಇತರರಿಗೆ