ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ

೪೨೫

ಮಾಡಿದರೆ ಆ ತೆರನ ಬಲವು ಲಭಿಸುತ್ತದೆ.

ಉನ್ಮಾದಾವಸ್ಥೆಯಲ್ಲಿರುವ ಜನರು ಅಸಾಮಾನ್ಯವಾದ ಶಕ್ತಿ ಪ್ರದರ್ಶನವನ್ನು ಮಾಡುತ್ತಾರೆ. ಆವೇಶ ಬಂದವರೂ ಅತಿಬಲವನ್ನು ಪ್ರದರ್ಶಿಸುತ್ತಾರೆ. ಹುಲಿಯ ಬಾಯಿಗೆ ಸಿಕ್ಕಿದ್ದೇನೆ ಎಂದು ಹೆದರಿ ತತ್‌ಕ್ಷಣ ಜೀವವನ್ನು ಹೇಗಾದರೂ ಉಳಿಸಿ ಕೊಳ್ಳಬೇಕು ಎಂದು ಉನ್ಮಾದಾವಸ್ಥೆಗೆ ಏರಿದ ಹಲ ಕೆಲವರು, ಹುಲಿಯೊಂದಿಗೆ ಸೆಣಸಾಡಿ, ಅದನ್ನು ಕೊಂದ ನಿದರ್ಶನಗಳು, ಅತಿ ವಿರಳವಾದರೂ, ದೊರೆತಿವೆ. ಸಂಯಮಿಗೂ ಇದು ಸಾಧ್ಯ ಎಂದು ನಂಬಬಹುದು. ಆದರೆ ಯೋಗ ಸಾಧನೆಯಿಂದ ಮೈತ್ರಿಯನ್ನು ಬಲಪಡಿಸಿಕೊಂಡ, ವೈರತ್ವವನ್ನು ನಿರ್ಮೂಲ ಮಾಡಿಕೊಂಡ, ಸಂಯಮಿಯನ್ನು, ಹುಲಿ ಸಿಂಹ ಇತ್ಯಾದಿ ಸ್ವಾಭಾವಿಕವಾಗಿ ಕ್ರೂರಿಗಳಾದ ಪ್ರಾಣಿಗಳು, ಹಿಂಸಿಸಹೋಗುವುದಿಲ್ಲ. ಬದಲು ಅಂತಹವರ ಬಳಿ ಸಾಧುವಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಸಂಯಮಿಯ ಅಮೋಘ ಬಲದ ಸಹಜ ಅರಿವಿನಿಂದ ವನ್ಯ ಮೃಗಗಳು, ಸಾಧುವಾಗುತ್ತವೆಯೋ? ಏನೋ? ಯಾರು ಬಲ್ಲರು?

ಪ್ರವೃತ್ತಿ ಆಲೋಕ ನ್ಯಾಸಾತ್ ಸೂಕ್ಷ್ಮ ವ್ಯವಹಿತ ವಿಪಕೃಷ್ಟ ಜ್ಞಾನ

ಅಣುಗಳಂತೆ ಸೂಕ್ಷ್ಮವಾದ ; ಭೂಗರ್ಭದಲ್ಲಿದ್ದು ಅಗೋಚರವಾದ ; ಬಹಳ ದೂರದಲ್ಲಿ ಎಲ್ಲಿಯೋ ಅವ್ಯಕ್ತವಾಗಿರುವ, ವಸ್ತುಗಳ ಜ್ಞಾನವನ್ನು

  • ಸಂಯಮಿ'ಯು ಪಡೆಯುತ್ತಾನೆ ; ಸಂಯಮವನ್ನು ಅವುಗಳತ್ತ ಕ್ರೋಡೀಕರಿಸಿದಾಗ,

ಅತಿ ದೂರದಲ್ಲಿರುವ ಚಂದ್ರನನ್ನು, ದೂರದರ್ಶಕ ಯಂತ್ರದಿಂದ, ಹತ್ತಿರ ಬರುವಂತೆ ಮಾಡಿಕೊಂಡು ಸೂಕ್ಷ್ಮ ವಿವರಗಳನ್ನು ತಿಳಿಯುತ್ತೇವೆ. ಅತಿ ಸೂಕ್ಷ್ಮವಾದ ವಸ್ತುಗಳನ್ನು ಮೈಕ್ರೋಸ್ಕೋಪ್ ನೆರವಿನಿಂದ ಬಲು ದೊಡ್ಡದಾಗಿ ಕಾಣುವಂತೆ ಮಾಡುತ್ತೇವೆ. ಇವೆರಡು ಸಾಧನೆಗಳಿಗೂ ಬೆಳಕು ಮೂಲವಾದುದು. ಅಂತೆಯೇ ಬಲು ದೂರದಲ್ಲಾದ ಶಬ್ದಗಳನ್ನು ರೇಡಿಯೋ ಸಾಧನದ ಮೂಲಕ ಸ್ಪಷ್ಟವಾಗಿ ಕೇಳುತ್ತೇವೆ. ಅತಿ ಸೂಕ್ಷ್ಮವಾದ ಶಬ್ದವನ್ನು ಆಂಪ್ಲಿಫೈಯರ್ ಸಾಧನದಿಂದ ಲಕ್ಷಣವಾಗಿ ಕೇಳುತ್ತೇವೆ. ಶಬ್ದ ಬೆಳಕು ಇತ್ಯಾದಿಗಳಂತೆ ಎಲ್ಲಿಯೋ ಉತ್ಪಾದಿಸಿದ ವಿದ್ಯುತ್ ಶಕ್ತಿಯನ್ನು ಮತ್ತೆಲ್ಲೋ ದೂರದಲ್ಲಿ ಬಳಸುತ್ತೇವೆ.

ಈ ತೆರನ ಶಕ್ತಿಗಳಿಗಿಂತ, ಮನಸ್ಸು ಎಂಬುದು ವಿಭಿನ್ನವಾದುದು, ಪ್ರತ್ಯೇಕವಾದ ಶಕ್ತಿ. ಇದನ್ನೂ ಮನಸ್ಸಿನ ಸಾಧನೆಯಿಂದ, 'ಸಂಯಮ'ದಿಂದ, ಬಳಸಿ, ಸೂಕ್ಷ್ಮವಾದುವುಗಳನ್ನು ತಿಳಿಯಬಹುದು. ಅಗೋಚರವಾದುದನ್ನು ಅರಿಯಬಹುದು ; ಅವ್ಯಕ್ತವಾಗಿರುವುದನ್ನು ಕಾಣಬಹುದು. ವೈಜ್ಞಾನಿಕವಾಗಿ