ಇದು ಸಾಧ್ಯ ಎನ್ನಬೇಕು. 'ಸಂಯಮ'ವನ್ನು ಸಾಧಿಸುವುದು ಮಾತ್ರ ಕಠಿಣ.
ಭುವನ ಜ್ಞಾನಂ ಸೂರ್ಯೋ ಸಂಯಮಾತ್ ಚಂದ್ರ ತಾರಾ ವ್ಯೂಹ ಜ್ಞಾನಂ ಧ್ರುವೇ ತತ್ ಗತಿ ಜ್ಞಾನಂ
ಸೂರ್ಯನಲ್ಲಿ, ಚಂದ್ರನಲ್ಲಿ, ಧ್ರುವ ನಕ್ಷತ್ರದಲ್ಲಿ, 'ಸಂಯಮ'ವನ್ನು ಮಗ್ನ ಮಾಡಿದರೆ ಭೂಲೋಕ ಇತ್ಯಾದಿ ಹದಿನಾಲ್ಕೂ ಲೋಕಗಳ ಜ್ಞಾನವನ್ನು ; ನಕ್ಷತ್ರ ಸಮೂಹಗಳ ಜ್ಞಾನವನ್ನೂ ; ಗ್ರಹಗಳ ಮತ್ತು ನಕ್ಷತ್ರಗಳ ಸಂಚಾರದ ರೀತಿಯ ಜ್ಞಾನವನ್ನೂ ಪಡೆಯಬಹುದು.
ಮನಸ್ಸು ಎಂಬುದು ಒಂದು ತೆರನ ಶಕ್ತಿ ಭೌತಶಾಸ್ತ್ರದ ನಿಯಮಗಳಿಗೆ ಹೊರತಾದುದು. ಈ ಶಕ್ತಿಯನ್ನು ಕ್ರೋಡೀಕರಿಸಿ, 'ಸಂಯಮ'ವನ್ನು ಸಾಧಿಸಿದರೆ, ಮನಸ್ಸಿನ ಅಂಶವೊಂದು ಜಿಗಿದು, ಬೆಳಕಿನ ವೇಗಕ್ಕಿಂತ ಬಹಳ ಹೆಚ್ಚಾಗಿ ರಭಸದಿಂದ ದೌಡುತ್ತದೆ. ಆಗ, ಸೂರ್ಯ, ಚಂದ್ರ, ನಕ್ಷತ್ರಗಳ ಅರಿವು, ಸುಲಭವಾಗಿ ಉಂಟಾಗುತ್ತದೆ. ವೈಜ್ಞಾನಿಕವಾಗಿ ಇದು ಸಮರ್ಥನೀಯ.
ನಾಭಿ ಚಕ್ರೇ ಕಾಯ ವ್ಯೂಹ ಜ್ಞಾನಂ ಕಂಠ ಕೂಪೇ ಕ್ಷುತ್ ಪಿಪಾಸ ನಿವೃತ್ತಿ: ಕೂರ್ಮ ನಾಡ್ಯಾಂ ಸೈರ್ಯಂ ಮೂರ್ಧ ಜ್ಯೋತಿಷಿ ಸಿದ್ಧ ದರ್ಶನ
ದೇಹದ ಹಲವು ಭಾಗಗಳಲ್ಲಿ 'ಸಂಯಮ'ವನ್ನು ಕೇಂದ್ರೀಕರಿಸಿದರೆ, ಆಯಾ ದೇಹಭಾಗಗಳ ಕಾರ್ಯಕ್ರಮಗಳ ಮೇಲೆ ಸಂಪೂರ್ಣ ಹತೋಟಿಯನ್ನು ಪಡೆಯಲಾಗುವುದು.
ನಾಭಿ ಚಕ್ರದಲ್ಲಿ :-ಮಣಿಪುರವೆಂದೂ ಇನ್ನೊಂದು ಹೆಸರು ; - ಇದರಲ್ಲಿ ಧಾರಣ, ಧ್ಯಾನ, ಸಮಾಧಿಗಳ ಒಕ್ಕೂಟವನ್ನು ಅಂದರೆ ಸಂಯಮವನ್ನು ಸಾಧಿಸಿದರೆ, ಆಗ ಉದರದಲ್ಲಿರುವ ಸಮಸ್ತ ಅಂಗಗಳ ಸ್ವರೂಪವು ಮತ್ತು ಕಾರ್ಯಕ್ರಮಗಳೂ ತಿಳಿಯಲ್ಪಡುತ್ತವೆ. ದೇಹಕಾರ್ಯ ಶಾಸ್ತ್ರದ ಪ್ರಕಾರ ಇದು ಸಾಧ್ಯ.
ಕಂಠ ಕೂಪದಲ್ಲಿ ಸಂಯಮವನ್ನು ಮಾಡಿದರೆ ಹಲವು ಬಾಯಾರಿಕೆಗಳು ನಿವಾರಣೆಯಾಗುವುದು. ಕಂಠಕೂಪ, ಎಂದರೆ ಗಂಟಲಿನ ತಳ ಎನ್ನಬೇಕು. ವೈಜ್ಞಾನಿಕವಾಗಿ ಇದು ಅಸಮರ್ಥನೀಯ. ಇಂದಿನ ಜ್ಞಾನದ ಹಂತದಲ್ಲಿ.
ಆದರೆ ಮೆದುಳಿನ ಬುಡದಲ್ಲಿ ಹೈಪೊಥೆಲಾಮಸ್ ಎನ್ನುವ ಭಾಗದಲ್ಲಿ Third ventricle ಎಂಬ ಸೆರಿಬೊ ಸ್ಟೈನಲ್ ದ್ರವವು ಕೂಡುವ ಕೂಪದ, ಬಳಿ,