ಇಕ್ಕೆಲೆಗಳಲ್ಲೂ ಕೆಲವು ನರಕೇಂದ್ರಗಳಿವೆ. Hunger : Thirst ; & Satiety centres ಎಂದು ಕರೆಯುತ್ತಾರೆ. Satiety centre ಅನ್ನು ಯಾವುದೇ ವಿಧಾನದಿಂದಾಗಲೀ ಪ್ರಚೋದಿಸಿದರೆ, ದೇಹಕ್ಕೆ ಆಹಾರದ ಅಗತ್ಯವಿದ್ದರೂ, ಹಸಿವೇ ಆಗುವುದಿಲ್ಲ. ಇದರ ಪರಿಣಾಮದಿಂದಾಗಿ ದೇಹವು ಕೃಶವಾಗುತ್ತದೆ. Anorexia nervosa ತೆರನ ರೋಗಗಳಲ್ಲಿ, ಕ್ಷುತ್ ಪಿಪಾಸೆಗಳ ನಿವಾರಣೆಯು ಆದಂತೆಯೇ ಆಗುತ್ತದೆ. ಕೆಲವು ಮಾನಸಿಕ ಬೇನೆಗಳಲ್ಲಿಯೂ ಹೀಗೇ ಆಗುತ್ತದೆ. ದೇಹವು ತತ್ಕಾರಣ ಕೃಶವಾಗುತ್ತದೆ. ಮೆದುಳಿನ ಬುಡದ ಈ ಪ್ರದೇಶವನ್ನು ಕಂಠರೂಪ ಎನ್ನುವುದು ಅಸಾಧ್ಯ ಊಹೆ. ನಾಲ್ಕನೆಯ ವೆಂಟ್ರಿಕಲ್ ಎಂಬ ಇನ್ನೊಂದು ಕೂಪಕ್ಕೆ ಸಂಪರ್ಕವನ್ನು ಕಲ್ಪಿಸುವ Cerebral aqueduct ಎನ್ನುವ ಕಂಠವೂ ಇದೆ. ಆದರೆ ಹೀಗೆ ಸಮನ್ವಯಿಸಿ ಸಮರ್ಥನೆಯನ್ನು ಮಾಡುವುದು, ಮನಸ್ಸಿನ ಶೈಶವಾವಸ್ಥೆಯ ಮೋಹಕವಾದ ಆಟ ಮಾತ್ರ !
ಕೂರ್ಮನಾಡಿಯು ಕಂಠದ ಕೆಳಭಾಗದಲ್ಲಿದೆಯಂತೆ. 'ಸಂಯಮ'ವನ್ನು ಈ ಪ್ರದೇಶದಲ್ಲಿ ಮಾಡಿದರೆ ದೇಹದ ಎಲ್ಲ ಭಾಗಗಳಲ್ಲಿಯೂ ಧೈರ್ಯವು ಉಂಟಾಗುವುದಂತೆ. ಥೈರಾಯ್ಡ್ ಪ್ರದೇಶಕ್ಕೆ ಕೂರ್ಮನಾಡಿ ಎಂದನ್ನುವುದೂ ಮೋಹಕವಾದ ಶೈಶವಾವಸ್ಥೆಯ ಮನಸ್ಸಿನ ಚೇಷ್ಟೆ ! ಎನಿಸುತ್ತದೆ.
ಮೆದುಳಿನಲ್ಲಿ ಪ್ರಕಾಶಾತ್ಮವಾದ, ಸುಷುಮ್ನಾಂತದಲ್ಲಿರುವ ಸಹಸ್ರಾರವೆಂಬಲ್ಲಿ ಸಂಯಮವನ್ನು ಮಾಡಿದರೆ, ಲೌಕಿಕವಾಗಿ ಅಗೋಚರವಾದ, ಸಿದ್ಧ ಪುರುಷರು, ವಿದೇಹಿಗಳು, ಪ್ರಕೃತಿಲಯರು, ಇಂತಹವರ ದರ್ಶನವಾಗುವುದಂತೆ, ಕಾಲ; ದೇಶದ ಅಡೆ ತಡೆಗಳು ಆಗ ಇರುವುದಿಲ್ಲವಂತೆ.
ವೈಜ್ಞಾನಿಕ ಸಮರ್ಥನೆಯು ಇಂದು ಸಾಧ್ಯವಿಲ್ಲ. ಆದರೆ ಮನೋಶಕ್ತಿಯು ತೀವ್ರವಾದಾಗ ಯಾವ ಸಿದ್ಧಿಗಳಾದರೂ ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.
ಪ್ರತಿಭಾತ್ ವಾ ಸರ್ವಂ
ಪ್ರತಿಭೆಯನ್ನು ಉದ್ದೇಶಿಸಿ ಸಂಯಮವನ್ನು ಮಾಡಿದರೆ ಸಕಲ ಜ್ಞಾನವೂ ಲಭಿಸುತ್ತದೆ. ಪ್ರತಿಭೆ ಎಂದರೆ ನಮ್ಮ ಇಂದಿನ ಭಾಷೆಯಲ್ಲಿ Intuition ಎಂಬ ಅರ್ಥ ಬರುತ್ತದೆ. ಆದರೆ ಪತಂಜಲಿಗಳ ಕಾಲದಲ್ಲಿ, ಪ್ರತಿಭೆಯ ಮೂರು ತೆರನ ವಿಧಗಳನ್ನು ವಿವರಿಸುತ್ತಿದ್ದರು.
೧. ಚಿತ್ತದ ಸತ್ವ ಭಾಗದಲ್ಲಿ ಉದ್ಭವಿಸುವ ಚಿತ್ತದಪ್ರಭೆ. ಚಿತ್ರಭೆ. ಬುದ್ಧಿಯ ಕಾರಣವಿಲ್ಲದೆ ತತ್‌ಕ್ಷಣದಲ್ಲಿ ಹುಟ್ಟುವ ಜ್ಞಾನವು ಅಥವಾ