ಅರಿವು, ಪ್ರಾತಿಭ ಎನ್ನಲ್ಪಡುತ್ತಿತ್ತು.
ಬ್ರಹ್ಮರಂಧ್ರಕ್ಕೆ ಮೇಲೆ (ಬ್ರಹ್ಮರಂಧ್ರವು ಎಲ್ಲಿದೆಯೋ ಈಗ ನಮಗೆ ವೈಜ್ಞಾನಿಕವಾಗಿ ತಿಳಿಯದು).
ಸಹಸ್ರಾರಕ್ಕೆ ಕೆಳಗೆ (ಸಹಸ್ರಾರದ ಸ್ಥಾನವು ಆನಂದದ ಕೇಂದ್ರಗಳು, ಎನ್ನಬಹುದು). ಇರುವ ಪ್ರದೇಶವು ಚಿತ್ತದ ಸಾತ್ವಿಕ ಭಾಗ . ೨. ಬ್ರಹ್ಮರಂಧ್ರದ ಪ್ರಾಂತ್ಯದ ಭಾಗವು ಚಿತ್ರದ ರಾಜಸ ಭಾಗ
೩. ಬ್ರಹ್ಮರಂಧ್ರದ ಕೆಳಗೆ ಇರುವ ಚಿತ್ತದ ಭಾಗವು ತಮೋಗುಣದಿಂದ ಕೂಡಿದ್ದು.
ಅಲ್ಲದೆ
ಶುದ್ಧ ಸತ್ವಭಾಗವಾದ ಪ್ರಭೆಗೆ ಪ್ರಜ್ಞೆಯೆಂದೂ, ಜ್ಞಾನವೆಂದೂ,
ರಾಜಸ ಭಾಗದ ಪ್ರಭೆಗೆ ಮನಸ್ಸೆಂದೂ
ತಾಮಸ ಭಾಗದ ಪ್ರತಿಭೆಗೆ ಅಹಂಕಾರವೆಂದೂ,
ಇವುಗಳೆಲ್ಲದರ ಒಕ್ಕೂಟಕ್ಕೆ ಅಂತಃಕರಣವೆಂದೂ, ಚಿತ್ತವೆಂದೂ ಹೇಳುತ್ತಿದ್ದರು.
ಇವುಗಳಲ್ಲಿ ಜ್ಞಾತೃವೆಂಬ ಕರಣಕ್ಕೆ ತ್ರಿಕಾಲ ಜ್ಞಾನವೂ, (ಜ್ಞಾತೃ 80; Experiencer)
ಬುದ್ಧಿಗೆ ವರ್ತಮಾನ ಕಾಲವೂ,
ಮನಸ್ಸಿಗೆ ಭವಿಷ್ಯತ್ ಕಾಲ ಜ್ಞಾನವೂ,
ಚಿತ್ತಕ್ಕೆ ಭೂತಕಾಲ ಜ್ಞಾನವು,
ಅಹಂಕಾರಕ್ಕೆ ಅಜ್ಞಾನವು.
ಈ ರೀತಿಯಾಗಿ ಅಂತಃಕರಣಗಳಿಗೆ ಪ್ರತ್ಯೇಕ ಪ್ರತ್ಯೇಕ ಜ್ಞಾನಗಳಿರುತ್ತವೆ, ಎನ್ನುತ್ತಿದ್ದರು. ಮನೋ, ಬುದ್ಧಿ, ಅಹಂಕಾರ, ಚಿತ್ತಗಳು, ಇವುಗಳು ಪ್ರಪಂಚಾನು ವರ್ತನೆಯಲ್ಲಿರುವುದರಿಂದ ಅಂತಃಕರಣ ರೂಪವಾಗಿರುತ್ತದೆ. ಇದೆಲ್ಲವನ್ನೂ ಅರಿಯುವ ಜ್ಞಾತೃವು, ಅಂತಃಕರಣವಾದರೂ, ವಿಷಯಗಳಲ್ಲಿ ಅನುವರ್ತಿಸುವುದಿಲ್ಲವಾದ್ದರಿಂದ, ಲೌಕಿಕಕ್ಕೆ ಕೇವಲ 'ಸಾಕ್ಷಿ' ಯಾಗಿರುತ್ತಾನೆ.
ಚಿತ್ರಭೆಯಲ್ಲಿ ಸಂಯಮವನ್ನು ಮಾಡುವುದರಿಂದ, ಇತರ ಯೋಗ ಸಾಧನಗಳನ್ನು ಆಚರಿಸದಿದ್ದರೂ, ಚಿತ್ತವೃತ್ತಿಯನ್ನು ನಿರೋಧಿಸಿ, ಕೈವಲ್ಯ ಪದವಿಯನ್ನು ಪಡೆಯಬಹುದು. ಕೇವಲ ಪ್ರತಿಭೆಯಿಂದ ಯೋಗದ ಫಲವನ್ನು ಪಡೆಯಬಹುದಾದ್ದರಿಂದ, ಇಂತಹ ಪ್ರತಿಭೆಯನ್ನು ತಾರಕ - ಜ್ಞಾನ, ಎಂದರು.