ತಾರಕಯೋಗ, ರಾಜಯೋಗ, ಎಂದೂ ಈ ವಿಧಾನವನ್ನು ಹೆಸರಿಸಿದರು.
ಪ್ರತಿಭೆಯನ್ನು ಸಂಯಮದಿಂದ ಪಡೆಯುವುದು, ಗಾಯತ್ರೀ ಜಪದ
ಧೈಯ ಆದುದರಿಂದಲೇ ಆ ಜಪದಲ್ಲಿ ಧೀಯೋ ಯೋನಃ ಪ್ರಚೋದಯಾತ್'
ಎನ್ನುವರು.
ಸತ್-ಪೂರ್ಣ ಪ್ರತಿಭೆಯಿಂದ, ಪ್ರಸಿದ್ಧ ವಿಜ್ಞಾನಿಗಳು, ಮಾನವನ ಜ್ಞಾನ ಭಂಡಾರವನ್ನು ಹಿರಿದಾಗಿಸಿದರು. ರಾಜಸ-ಪೂರ್ಣ ಪ್ರತಿಭೆಯಿಂದ, ಚಕ್ರವರ್ತಿಗಳು, ರಾಜ ಮಹಾರಾಜರುಗಳು, ಜನನಾಯಕರೂ ಪ್ರಸಿದ್ಧರಾದರು ತಾಮಸಪೂರ್ಣ ಪ್ರತಿಭೆಯಿಂದ, ಸಮಾಜವನ್ನೇ ಬೆದರಿಸಿ ಕೊಳ್ಳೆ ಹೊಡೆಯುವ ದರೋಡೆಕಾರರು; ರಾಷ್ಟ್ರದ ಏಕಸ್ವಾಮ್ಯಾಭಿಲಾಷಿಗಳು, ಕುಪ್ರಸಿದ್ಧ ಕಳ್ಳರು, ಇಷ್ಟಾರ್ಥವನ್ನು ಕೆಲ ಕಾಲ ಪಡೆದರು.
ಅಂದರೆ, ಒಳ್ಳೆಯದಕ್ಕೆ, ಸಮಾಜದ ಹಿತಕ್ಕೆ, ಮಾನವ ಸುಖಕ್ಕಾಗಿಯೇ ಪ್ರತಿಭೆಯನ್ನು ಬಳಸಕೊಳ್ಳಬೇಕಾಗಿಲ್ಲ. ಸ್ವಾರ್ಥಕ್ಕೂ, ಪರಪೀಡನೆಗೂ, ಪ್ರತಿಭೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಯೋಗ ಸಾಧನೆಯ ಫಲಿತಾಂಶವನ್ನು ಸತ್ ಪ್ರತಿಭೆಯಿಂದ, ಅದೊಂದೇ ಮಾರ್ಗದಿಂದ, ಪಡೆಯಬಹುದು. ಭೋಗ ಸಾಧನೆಯ ಸುಖ-ದುಃಖ, ಫಲವನ್ನೂ ತಾಮಸ ಪ್ರತಿಭೆಯಿಂದ, ಅನುಭವಿಸಲೂಬಹುದು.
Intuition ಎಂಬ ಪದವು ಇವೆಲ್ಲ ಪರಿಣಾಮಗಳನ್ನು ಸೂಚಿಸ ಬಹುದಾದರೂ ವ್ಯಾವಹಾರಿಕವಾಗಿ, ಇಂದು, ಸತ್ವಗುಣ ಪ್ರಧಾನವಾದ ಪ್ರತಿಭೆ ಎಂಬ ಅರ್ಥವನ್ನು ನೀಡುತ್ತದೆ.
ಸಂಯಮದಿಂದ ಫಲಿಸುವ ವಿಧ ವಿಧವಾದ ಸಿದ್ಧಿಗಳನ್ನು ಈ ತನಕ
ತಿಳಿಸಲಾಯಿತು. ಈಗ ಅಂತಹ ಸಿದ್ಧಿಗಳ ಗುಣ ದೋಷಗಳನ್ನು
ವಿವರಿಸಲಾಗುವುದು.
ತೇ ಸಮಾ ಉಪಸರ್ಗೌ ವೃತ್ತಾನೆ ಸಿದ್ಧಯಃ
ಈ ತನಕ ವಿವರಿಸಲ್ಪಟ್ಟ ಸಿದ್ಧಿಗಳು, ಸಮಾಧಿಯ ಅಭಿವೃದ್ಧಿಯಲ್ಲಿ ವಿಘ್ನಗಳು. ಸಮಾಧಿ ಸ್ಥಿತಿಯು ಇಲ್ಲದಾಗ, ಫಲಗಳನ್ನು ತಾತ್ಕಾಲಿಕವಾಗಿ, ಲೌಕಿಕವಾಗಿ, ನೀಡುತ್ತವೆ. ತಾತ್ಕಾಲಿಕವಾಗಿ ತುಸು ಸಮಾಧಾನ, ಮತ್ತು ಸಂತೋಷಗಳನ್ನೂ ಉಂಟುಮಾಡುತ್ತವೆ.