ಎಚ್ಚರಿಕೆಯನ್ನು ಈ ರೀತಿ ಕೊಟ್ಟ ಮೇಲೆ, ಮಹರ್ಷಿಗಳು, ಮಾನವ ಮನಸ್ಸಿನ ಅಂತರಾಳವನ್ನು ಸಾಕ್ಷಾತ್ ಕಂಡು, ಮಾನವ ಸ್ವಭಾವವನ್ನು ಅರಿತು ಮುಂದೆ ನುಡಿಯುತ್ತಾರೆ.
ಬಂಧಕಾರಣ ಶೈಥಿಲ್ಯಾತ್ ಪ್ರಚಾರ ಸಂವೇದನಾಚ್ಯ, ಚಿತ್ತಸ್ಯಪರ ಶರೀರಾವೇಶ:
ಪರಕಾಯ ಪ್ರವೇಶ ಎನ್ನುವುದರ ವಿವರಣೆ, ಇದು.
ದೇಹದೊಡನೆ ಇರುವ ಬಂಧನವನ್ನು ಕಳೆದುಕೊಂಡಿರುವುದರಿಂದಲೂ,
ಹಾಗೂ ತನ್ನ ಮತ್ತು ಇತರರ ದೇಹಗಳ ಪ್ರಾಣ ನಾಡಿಗಳನ್ನು ಸ್ಪಷ್ಟವಾಗಿ
ಅರಿತಿರುವುದರಿಂದಲೂ, ಚಿತ್ತವು ಇತರ ದೇಹಗಳಲ್ಲಿ ಪ್ರವೇಶಿಸಲು ಸಾಧ್ಯ.
ಜೀವಂತ ದೇಹಗಳಲ್ಲಿಯಾದರೂ ಪ್ರವೇಶಿಸಬಹುದು, ನಿಧನವಾದ
ಕಳೇಬರಗಳಲ್ಲಿಯೂ ಪ್ರವೇಶಿಸಬಹುದು, ಹೀಗನ್ನುತ್ತದೆ ಸೂತ್ರ
ಪ್ರಾಣ ನಾಡಿಗಳೂ ಅಂದರೆ ಯಾವುವು? ವೈಜ್ಞಾನಿಕವಾಗಿ ತಿಳಿದಿಲ್ಲ ಇಂದು. ಚಿತ್ತವಾಹನಾಡಿಯ ಮೂಲಕ ಚಿತ್ತವು ದೇಹದಿಂದ ಹೋಗಿ, ಇನ್ನು ಯಾವುದಾದರೂ ದೇಹವನ್ನು ಪ್ರವೇಶಿಸಿ, ಸ್ವಲ್ಪಕಾಲ ಆ ದೇಹದ ಮೂಲಕ ಇಚ್ಛಾನುವರ್ತಿಯಾಗುತ್ತದೆ. ಆನಂತರ ಸ್ವದೇಹಕ್ಕೆ ಹಿಂತಿರುತ್ತದೆಯಂತೆ. ಚಿತ್ತವಾಹನಾಡಿಯ ಯಾವ ಸ್ವರೂಪದ್ದು? ಎಲ್ಲಿದೆ? ಯಾರಿಗೂ ಇಂದು ವೈಜ್ಞಾನಿಕವಾಗಿ ತಿಳಿಯದು.
ಆನಂದದ ಕೇಂದ್ರಗಳು ಮತ್ತು ಅವುಗಳಿಂದ ಯಾವ ಯಾವ ಮಾರ್ಗಗಳಲ್ಲಿ ಮನಸ್ಸಿನ ಯಾವ ಅಂಶಗಳು ಅಥವಾ ಶಕ್ತಿ ರೂಪಗಳು ಸರಿಯುತ್ತವೆ ಎಂಬುದು ಮುಂದೆ ಕಂಡು ಹಿಡಿಯಲ್ಪಟ್ಟರೆ, ಆನಂತರ ಪರಕಾಯ ಪ್ರವೇಶವು ಅರ್ಥವಾಗಬಹುದು.
ಉದಾನ ಜಯಾಜ್ ಜಲ ಪಂಕ ಕಂಟಕಾದಿಷ್ಟಸಂಗಂ ಉತ್ಕ್ರಾಂತಿಷ್ಟ
ಉದಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ, ನೀರು, ಕೆಸರು, ಮುಳ್ಳುಗಳ ಮೇಲೆ ಸುಲಭವಾಗಿ ನಡೆಯಬಹುದಂತೆ.
ಸಮಾನ ಜಯಾಡ್ ಪ್ರಜ್ವಲನ'
ಸಮಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ ಮಹಾತೇಜಸ್ಸಿನಂತಹ ಕಾಂತಿಯು ಉಂಟಾಗುವುದಂತೆ.
ಪ್ರೋತ್ರಾಕಾಶಯೋಃ ಸಂಬಂಧ ಸಂಯಮಾದ್ ದಿವ್ಯಂ ಶ್ರೋತ್ರಂ