ಶೋತೇಂದ್ರಿಯ ಮತ್ತು ಆಕಾಶ ಇವುಗಳ ಸಂಬಂಧದ ಮೇಲೆ ಸಂಯಮವನ್ನು ಮಾಡಿದರೆ ಬಲು ದೂರದಲ್ಲಿ ಹುಟ್ಟಿದ ಶಬ್ದವೂ ಕೇಳಿಸುತ್ತದೆ.
ಕಾಯ ಆಕಾಶಯೋಃ ಸಂಬಂಧ ಸಂಯಮಾತ್ ಲಘುತೂಲ ಸಮಾಪತ್ತೇಶ್ಚ
ಆಕಾಶಗಮನಂ
ದೇಹ ಮತ್ತು ಆಕಾಶ ಇವುಗಳ ಸಂಬಂಧವನ್ನುದ್ದೇಶಿಸಿ ಸಂಯಮವನ್ನು ಮಾಡಿದರೆ ಶರೀರವು ಲಘುವಾಗಿ ಆಕಾಶ ಮಾರ್ಗದಲ್ಲಿ ಸಾಗಬಹುದು.
ಬಹಿರ್ ಅಕಲ್ಪಿತಾ ವೃತ್ತಿರ್ ಮಹಾವಿದೇಹಾ ತತಃ ಪ್ರಕಾಶಾವರಣ ಕ್ಷಯ
ಪರಕಾಯ ಪ್ರವೇಶವನ್ನು ಮಾಡಲಿಚ್ಛಿಸದೆ, ಚಿತ್ತವು ಸಂಯಮದಿಂದ, ದೇಹಾಹಂಕಾರವಿಲ್ಲದ 'ಮಹಾವಿದೇಹ' ಎನ್ನಲ್ಪಡುತ್ತದೆ.
ಈ ಐದೂ ಸಿದ್ಧಿಗಳು ಇಂದಿನ ಮನಃಶಾಸ್ತ್ರದ ರೀತಿಯಾಗಿ ಅರ್ಥವಾಗುವುದಿಲ್ಲ. ಸುಂದರವಾಗಿ ಕಾಣುವ ಊಹೆಗಳಿಗೆ ಸಾಕಾದಷ್ಟು ಅವಕಾಶಗಳಿವೆ. ಕಟ್ಟುಕತೆಗಳಾಗಬಹುದು, ಅಂತಹ ಊಹೆಗಳು. ಆದ ಕಾರಣ ಮೂಡಿಬಂದ ಊಹೆಗಳನ್ನು ಇಲ್ಲಿ ಪ್ರಚರಿಸುವುದಿಲ್ಲ.
ಸಮಾಧಿಯನ್ನು ಸಾಧಿಸಲು ವಿವಿಧ ಮಾರ್ಗಗಳನ್ನು ಬೋಧಿಸುವ ಮೊದಲು ಪಂಚಭೂತ ಜಯವನ್ನು ಸಾಧಿಸಬೇಕು.
ಸ್ಕೂಲ ಸ್ವರೂಪ ಸೂಕ್ಷ್ಮ ಅನ್ವಯಾರ್ಥವತ್ವ ಸಂಯಮಾತ್ ಭೂತಜಯಃ
ಸ್ಕೂಲ, ಸ್ಥಿರ, ಸೂಕ್ಷ್ಮ, ಎಲ್ಲೆಲ್ಲೂ ಹರಡಿರುವ ಹಾಗೂ ಫಲದಾಯಕ ಈ ಐದೂ ತೆರನ ಪಂಚಭೂತಗಳಲ್ಲಿ ಸಂಯಮವನ್ನು ಮಾಡುವುದರಿಂದ. ಭೂತಗಳ ಮೇಲೆ ಪೂರ್ಣ ಹತೋಟಿಯನ್ನು ಪಡೆಯಬಹುದು.
ಪೃಥಿವಿ, ಅಪ್, ತೇಜಸ್, ವಾಯು, ಆಕಾಶಗಳು, ಪಂಚಭೂತಗಳು; ಆ ಕಾಲದ ಭಾಷೆಯಲ್ಲಿ.
ತತೋ ಅಣಿಮಾದಿ ಪ್ರಾದುರ್ಭಾವಃ ಕಾಯ ಸಂಪದ್ಧರ್ಮಾನ್ ಅಭಿಗಾತತ್ವ
ಭೂತಜಯದಿಂದ ಅಣಿಮಾದಿ ಅಷ್ಟ ಸಿದ್ಧಿಗಳು; ರೂಪಲಾವಣ್ಯಾದಿ ದೇಹ ಸಂಪತ್ತು ; ದೇಹರೂಪಾದಿಗಳು ಶಾಶ್ವತವೂ, ಲಭಿಸುತ್ತದೆ.
ಅಷ್ಟಸಿದ್ಧಿಗಳೆಂದರೆ :- ೧. ಅಣಿಮಾ, ಸೂಕ್ಷ್ಮವಾಗುವಿಕೆ. ೨. ಮಹಿಮ ದೊಡ್ಡದಾಗುವಿಕೆ. ೩. ಗರಿಮ, ಬಹಳ ಭಾರವಾಗುವುದು. ೪. ಲಘಿಮ, ಅತಿ ಹಗುರವಾಗುವುದು. ೫. ಪ್ರಾಪ್ತಿ, ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ ಮುಟ್ಟುವಂತಹ ಶಕ್ತಿ. ೬. ಪ್ರಾಕಾಮ್ಯ, ನೆನಸಿದದು ಆಗುವುದು. ೭. ಈಶತ್ವ ಮಹಿಮಾವಂತನಾಗುವುದು. ೮. ವಶಿತ್ವ ಚರಾಚರ ಪ್ರಪಂಚವನ್ನು