ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೩೩

ಇಚ್ಛಿಸಿದಾಗ ಸಾಧಿಸಬಹುದು. ಇದನ್ನೂ ಒಪ್ಪಬೇಕು. ಅಥವಾ ಒಪ್ಪಬಹುದು. ಮಹಾತ್ಮರು, ಯೇಸು, ಪ್ರವಾದಿ ಮಹಮದ್ ಇತಹವರು ತಮ್ಮ ಪ್ರಭಾವವನ್ನು ಅತ್ಯಂತ ವಿಶಾಲವಾಗಿ ಬೀರಿದರು. ಇದೂ ಮಹಿಮೆಯ ಸಣ್ಣ ನಿದರ್ಶನ. 'ಸಣ್ಣ' ಎನ್ನುವುದು ಅಲೌಕಿಕ ದೃಷ್ಟಿಯಿಂದ, ಲೌಕಿಕ ದೃಷ್ಟಿಯಿಂದ ಇಂತಹ ಮಹಿಮಾ ಪ್ರಭಾವವು, ಬಲು ದೊಡ್ಡದು.

ಗರಿಮ:- ಅತ್ಯಂತ ಭಾರವಾಗುವಿಕೆ. ಕೊಲ್ಲುವ ಶತ್ರುವಿಗೂ ಬರಬಾರದಂತಹ ಅತೀವ ದುಃಖವು ವ್ಯಕ್ತಿಗೆ ಬಡಿದಾಗ, ಅವ ನಡೆಯಲೂ ಆರ. ಅವನ ದೇಹವು ಅವನಿಗೆ ಅಷ್ಟು ಭಾರವಾಗಿರುತ್ತದೆ. ಲೌಕಿಕ ಅನುಭವವು ಹೀಗಾದಲ್ಲಿ ; ಅಲೌಕಿಕ ಅನುಭವವು 'ಗರಿಮ'ವನ್ನು ಸಾಧಿಸುವುದು ಸಹಜ.

ಮೋಡಿಹಾಕುವ ಉಪಾಸಕರನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಕೋಳಿಯ ಮೊಟ್ಟೆಯನ್ನು ಮಂತ್ರಿಸಿ ಮಂಡಲದಲ್ಲಿಟ್ಟು, ಇದನ್ನು ಯಾರಾದರೂ ಬಂದು ಜಜ್ಜಿ ಒಡೆದರೆ, ಅವರಿಗೆ ವೀಳೆಯವನ್ನು ಕೊಟ್ಟು ನನ್ನ ಸೋಲನ್ನು ಒಪ್ಪಿಕೊಳ್ಳುವೆ, ಎಂದು ಮೋಡಿಯವ ಸವಾಲು ಹಾಕುತ್ತಾನೆ. ಆ ಕಾಲದಲ್ಲಿ ಮೋಡಿ ಹಾಕುವ ಧಾಂಡಿಗನ ಮುಖವನ್ನು ನೋಡಿದರೆ, ಸಾಮಾನ್ಯರಿಗೆ ಭಯವಾಗುತ್ತದೆ. ಸುತ್ತುಗಟ್ಟಿಕೊಂಡಿರುವ ನೂರಾರು ಮಂದಿಯಲ್ಲಿ, ಒಬ್ಬ ಚಿಂದಿ ಬಟ್ಟೆಯನ್ನುಟ್ಟ ಸೆಣಕಲ, ಐದಾರು ನಿಮಿಷಗಳಲ್ಲಿ, ಯಾರೂ ಬಾರದಿರುವುದನ್ನು ಕಂಡು, ಮುಂದೆ ಬಂದು ಕ್ಷಣಾರ್ಧದಲ್ಲಿ, ಅನಾಯಾಸವಾಗಿ, ಮುಷ್ಟಿಯಿಂದ, ಮೊಟ್ಟೆಯನ್ನು ಒಡೆಯುತ್ತಾನೆ. ನಂತರ ಉಪಾಸಕನತ್ತ ಕರುಣಾದೃಷ್ಟಿಯನ್ನು ಬೀರಿ, ವೀಳೆಯನ್ನು, ಹಾಗೂ ಜಯದ ಸಂಕೇತವನ್ನೂ ಲಕ್ಷಿಸದೆ ಸುತ್ತುವರಿದ ಮಂದಿಯಲ್ಲಿ ಹೇಳ ಹೆಸರಿಲ್ಲದೆ ಮಾಯವಾಗುತ್ತಾನೆ.


ಇದನ್ನು ಕಂಡ ಉಪಾಸಕನು ಜಜ್ಜಿದ ಮೊಟ್ಟೆಯ ಮುಂದೆ, ಅವಿಮನಸ್ಕನಾಗಿ ಕೂರುತ್ತಾನೆ. ಅವನ ಭಕ್ತರು ಎಷ್ಟು ಶ್ರಮಪಟ್ಟರೂ, ಹಾಗೆ ಕುಳಿತ ಗುರುವನ್ನು ಎತ್ತಲಾರರು. ಸ್ವಲ್ಪ ಕಾಲಾನಂತರ ಉಪಾಸಕನು ನಿಟ್ಟುಸಿರು ಬಿಟ್ಟು, ಕಣ್ಣಿಗೆ ಕಾಣಿಸದ ಯಾವುದನ್ನೋ ದಿಟ್ಟಿಸಿ ನೋಡುತ್ತಾ, ತಾನೇತಾನಾಗಿ ಏಳುತ್ತಾನೆ. ಕೈ ಮುಗಿಯುತ್ತಾನೆ. ತಲೆ ಬಾಗಿಸುತ್ತಾನೆ. ಮೌನವಾಗಿ ಪ್ರದರ್ಶನದ ತಾವಿನಿಂದ ಹೊರಬೀಳುತ್ತಾನೆ.

ಎಂಟೂ ಭಕ್ತರು ಎಬ್ಬಿಸಿ ನಿಲಿಸಲಾರದ ಭಾರವು ಮೋಡಿಹಾಕುವ ಹಾಗೂ ಸೋಲನ್ನೊಪ್ಪಿದ, ಉಪಾಸಕನಿಗೆ, ಹೇಗೆ ಬಿದ್ದಿತು?

ಪ್ರಾಯಶಃ ಅವ ಆ ಸ್ಥಿತಿಯಲ್ಲಿ 'ಗರಿಮ ಸಿದ್ಧಿಯನ್ನು ಪಡೆದಿದ್ದ. ಬಾಳ