ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೩೪
ಮನಮಂಥನ

ಗುರಿಯು ಅದಲ್ಲ. ಅದನ್ನು ಅರಿತು ಅವ ಮೌನಿಯಾಗಿ ಎಲ್ಲವನ್ನೂ, ತನ್ನ ಗುರುತ್ವವನ್ನೂ ಮರೆತು, ಎತ್ತಲೋ ನಡೆದ. ಆಗ ಅವ ಖಿನ್ನತೆಯ ಅತ್ಯುಗ್ರ ಶಿಖರವನ್ನು ಮುಟ್ಟಿದ್ದ ಎನ್ನಬಹುದು.

ಇಂತಹ ಪ್ರದರ್ಶನಗಳನ್ನು, ಹಾಗೂ ದರ್ಶನಗಳನ್ನು ಸಂತೆಯು ಕೂಡುವಲ್ಲಿ ಆಗಾಗ್ಗೆ ಈಗಲೂ ಕಾಣುತ್ತೇವೆ.

ಅಂದರೆ ಗರಿಮ ಸಿದ್ಧಿಯು ಇಂದೂ ನಿದರ್ಶಿಸಲ್ಪಡುತ್ತದೆ, ಒಂದು ರೀತಿಯಲ್ಲಿ.

ಲಘಿಮ :- ಹತ್ತಿಯ ಕಣಕ್ಕಿಂತಲೂ ಹಗುರವಾಗುವಿಕೆ, ಬೀಸಿದ ಹಗೂರ ಗಾಳಿಯ ಮೇಲೆ ತೇಲಿ ಹೋಗುವಿಕೆ. Taking the path of least resistance. ಸುತ್ತಮುತ್ತಲೂ ಪರಿಸರದ ಬಾಳನ್ನು ಕರೆದು ನೋಡಿದರೆ, ಬಹಳಷ್ಟು ಮಂದಿ ಈ ನಿಯಮದಂತೆ ಬಾಳ ನಡೆಸುವುದನ್ನು ಪ್ರತ್ಯಕ್ಷ ಕಾಣುತ್ತೇವೆ. ಇದು 'ಸಂಯಮ'ದಿಂದ ಸಾಧಿಸಿದ ಸಿದ್ಧಿಯಲ್ಲ. ಮೌಡ್ಯದಿಂದ, ಆಳ ಮನಸ್ಸಿನ ಹೇಡಿತನದಿಂದ, ಭಯದಿಂದ, ಪ್ರಚೋದಿತವಾದ ನಡವಳಿಕೆ. ಇಂತಹ ಲೌಕಿಕರಲ್ಲಿ ಲಘಿಮಾ ತೆರನ ನಡವಳಿಕೆಯು, ಅವರುಗಳ ಮನಸ್ಸಿನ ಅಸ್ಥಿರತ್ವದಿಂದ, ಹಾಗೂ ಚಂಚಲತೆಯು ಲೌಕಿಕ ಆಸೆಗಳೊಡನೆ ಬೆಸಗೊಂಡಿರುವುದರಿಂದ.

ಆದರೆ, ಮನಸ್ಸನ್ನು ಸ್ವಪ್ರಯತ್ನದಿಂದ ತುಳಿದು ಹಳ್ಳಕ್ಕೆ ಹಾಕಿ, ನಂತರ ಎದ್ದು, ಎಚ್ಚರದಿಂದ, ಸಂಯಮದ ಪರಿಣಾಮವಾಗಿ, ಸ್ಟೇಚ್ಛೆಯಿಂದ ಲಘಿಮವನ್ನು ಪಡೆಯಬಹುದು.

Over taking the path of greatest resistance; in the phenomenal world ; ಎಂದನ್ನಬಹುದು.

ಪ್ರಾಪ್ತಿ :- ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ ಇದ್ದಲ್ಲಿಂದಲೇ ಮುಟ್ಟುವಂತಹ ಅಂದರೆ ಅರಿಯುವಂತಹ ಶಕ್ತಿ, ದೂರದರ್ಶಕ ಯಂತ್ರಗಳ, ಕಾಲ ಕಾಲಕ್ಕೂ ಆಗುವ ಪ್ರಗತಿಯಿಂದ, ಹೆಚ್ಚು ಹೆಚ್ಚಾಗಿ ವಿವರಗಳನ್ನು ಕಾಣುವುದು ಸಾಧ್ಯವಾಗುತ್ತಿದೆ.

ಮನಸ್ಸೆಂಬ ಶಕ್ತಿಯ ಒಂದು ಹಿರಿಯ ಅಂಶವನ್ನು ಸ್ವಾಧೀನಪಡಿಸಿಕೊಂಡರೆ, ಅದು ಕೂಡ ದೂರಸ್ಪರ್ಶಕ ಯಂತ್ರವಾಗಲು ಸಾಧ್ಯ. ತೋಳ್ ಬಲದಿಂದ ಕಲ್ಲನ್ನೆಸೆದರೆ ನೂರುಗಜ ದೂರ ಹೋಗಬಹುದು. ಆದರೆ ಫಿರಂಗಿಯ ಯಂತ್ರದ ರಚನೆಯಿಂದ, ನೂರಾರು, ಮೈಲಿಗಳ ದೂರ ಗುಂಡನ್ನು ಎಸೆಯಬಹುದು. 'ಸಂಯಮ'ವನ್ನು ಸಾಧಿಸಿದವನ ತೋಳ್ಬಲವು, ಫಿರಂಗಿ ಯಂತ್ರಕ್ಕಿಂತಲೂ ಲಕ್ಷಾಂತರ