ಪಟ್ಟು ಅಧಿಕವಾಗಬಹುದು. ವಿಜ್ಞಾನದ ಇಂದಿನ ಹಂತದಲ್ಲಿ ಇದೊಂದು ಊಹೆ. ದಿಟ. ಆದರೆ ಇಂದಿನ ಊಹೆಯು ಮಾನವನ ಚರಿತ್ರೆಯಲ್ಲಿ, ನಾಳೆ ಅಥವಾ ನಾಡಿದ್ದು, ವೈಜ್ಞಾನಿಕ ಸಿದ್ಧಾಂತವಾಗುತ್ತದೆ. ಸಾಕಷ್ಟು ನಿದರ್ಶನಗಳಿಗಿರುವ ಈ ಸತ್ಯವನ್ನು. ವಿಶಾಲಗೊಳಿಸಿದರೆ, 'ಪ್ರಾಪ್ತಿ'ಯ ಅಸಾಧುವಲ್ಲ ಎಂದನಿಸುತ್ತದೆ.
ಪ್ರಾಕಾಮ್ಯ:- ಇಚ್ಛಿಸಿದುದು ನಡೆಯುವುದು. ಸಂಯಮವನ್ನು ಅಷ್ಟಾಂಗಯೋಗಸಾಧನೆಯಿಂದ ಲಭಿಸಿಕೊಂಡವನು ಇಚ್ಚಿಸುವುದಾದರೂ ಏನನ್ನು? ಸ್ವಾರ್ಥಕ್ಕಾಗಿ ಏನನ್ನೂ ಇಚ್ಛಿಸಲಾರ. ಪರಾರ್ಥಕ್ಕಾಗಿ, ಸರ್ವ ಜೀವ ಹಿತಕ್ಕಾಗಿ ಯಾವುದನ್ನಾದರೂ ಬಯಸಬಹುದು. ಅಂತಹ ಪರಿಸ್ಥಿತಿಯಲ್ಲಿ ಬಯಸಿದುದು ನಡೆದು ಹೋಗುತ್ತದೆ. ಕಾವ್ಯವು ಸ್ವಾರ್ಥವಾಗಿರದೆ, ಪರಿಸರವನ್ನೆಲ್ಲಾ ಮುತ್ತಿಕೊಂಡು ಪ್ರಪಂಚಕ್ಕೆ ಅನ್ವಯಿಸಿದಾಗ ಪ್ರಾಕಾಮ್ಯವಾಗಿ, ಸಿದ್ಧಿಯನ್ನು ಸುಲಭವಾಗಿ ಪಡೆಯುತ್ತದೆ.
ಅಸ್ತಾವಸ್ಥೆಯಲ್ಲಿದ್ದ ರೋಗಿಯೊಬ್ಬರನ್ನು ಬೆಳಗಿನ ಝಾಮ ಆರರ ವೇಳೆಗೆ ನೋಡಲು ಹೋಗಿದ್ದೆ. ರೋಗಿಯನ್ನು ಗುಣಪಡಿಸುತ್ತೇನೆ ಎಂಬ ಭರವಸೆಯು ಸ್ವಲ್ಪವೂ ಇರಲಿಲ್ಲ. ಅವನು ಕಾಲಗತಿ ಹೊಂದಿದರೂ, ಅವನ ಮನೆಯವರಿಗೆ ತುಸು ಸಮಾಧಾನವಾಗುತ್ತದೆ ಎಂಬ ಆಸೆಯಿಂದ, ಅಲ್ಲಿಗೆ ಹೋಗಿದ್ದೆ. ಪ್ರದರ್ಶನಕ್ಕಾಗಿ ಚಿಕಿತ್ಸೆಯನ್ನೂ ಮಾಡಿ ಹೊರಬರುತ್ತಿದ್ದೆ. ರೋಗಿಯ ಮನೆಯ ಗೇಟನ್ನು ತಲುಪಿದಾಗ, ಬೈರಾಗಿಯೊಬ್ಬನು ಭಿಕ್ಷೆಯನ್ನು ಬೇಡಲು ಅಲ್ಲಿಗೆ ಬಂದಿದ್ದ. ಕಳುಹಿಸಿಕೊಡಲು ನನ್ನೊಂದಿಗೆ ಬಂದಿದ್ದ ರೋಗಿಯ ತಂದೆಯು ಬೈರಾಗಿಯನ್ನು ಹೀನಾಮಾನವಾಗಿ ಬೈದ, ಸಂಕಟವನ್ನು ಪರಿಹರಿಸಿಕೊಳ್ಳಲು ಆ ನತದೃಷ್ಟ ತಂದೆಗೆ ರೇಗುವುದೊಂದೇ ಸಾಧನವಾಗಿತ್ತು. ಸಂಸ್ಕೃತಿಯ ಒತ್ತಡದಿಂದಾಗಿ ನನ್ನನ್ನು ಬೈಯುವಂತಿರಲಿಲ್ಲ.
ಬೈರಾಗಿಯು, ತನ್ನ ಕಳೆಗುಂದಿದ ಮುಖವನ್ನೂ, ಕೆಂಪೇರಿ ಅಡರುತಿದ್ದ ರೋಗಿಯ ತಂದೆಯ ಮುಖವನ್ನೂ ಅರೆಕ್ಷಣ ನೋಡಿದ. ನನ್ನತ್ತ ದೃಷ್ಟಿಯನ್ನು ಅಂಬಿನಂತೆ ಹರಿಸಿ, 'ಜೈ ಭಗವತೀ' ಎಂದು ಹೇಳಿದ. ನಂತರ ಮುನ್ನಡೆದ. 'ಬೇಟಾ, ಚಿಂತಾಕರಾನಕೋ' ಎಂದು ನನಗೆ ಹೇಳಿದ. ಹೊರಟು ಹೋದ.
ಆ ರೋಗಿಯು ಬದುಕಿಕೊಂಡ. ಖಂಡಿತವಾಗಿ ಸಾಯುತ್ತಾನೆ ಎಂದು ವೈಜ್ಞಾನಿಕವಾಗಿ, ವಿಚಾರಪೂರ್ವಕ, ನಿರ್ಧರಿಸಿದ್ದ ನನಗೆ ಅತ್ಯಾಶ್ಚರ್ಯವಾಯಿತು. ಪ್ರಾಯಶಃ ಆ ಬೈರಾಗಿಯು 'ಪ್ರಾಕಾಮ್ಯ'ವನ್ನು ಈ ರೀತಿ ಬಳಸಿದ್ದನೋ ಎಂಬ ಸಂದೇಹವುಂಟಾಯಿತು. ಮೊದ ಮೊದಲು ಆನಂತರ ಹಾಗೇ ಆಗಿರಬೇಕು. ಎಂದು ಮನಸ್ಸಿನಾಳದಲ್ಲಿ ನನಗೆ ದೃಢವಾಯಿತು. ವಯಸ್ಸೂ ಮುಪ್ಪಾಗುತ್ತಿತ್ತು.