ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೪೧

ಸಳಮಳ ಕುದಿಸಿ ಅನ್ನವನ್ನು ಮಾಡಿದ ಮೇಲೆ ಉಣ್ಣಲು ಸುಲಭ.

ಆದರೆ ಕೆಲವು ಮಕ್ಕಳೂ ಅಕ್ಕಿಯನ್ನು, ಸೀಮೆಸುಣ್ಣವನ್ನೂ, ಗಾರೆಯನ್ನೂ ತಿನ್ನಲಾರಂಭಿಸುತ್ತವೆ. ಅಂತಹ ಮಕ್ಕಳಲ್ಲಿ ಕಬ್ಬಿಣದ ಅಂಶವು ಕಡಮೆಯಾಗಿರುತ್ತದೆ.

ಆದುದರಿಂದ ಮಕ್ಕಳು ಹಾಗೆ ಮಾಡುತ್ತವೆ. ಬೆಳೆದವರಲ್ಲಿಯೂ ಕೂಡ, ಕೆಲವರಿಗೆ ಅಕ್ಕಿಯನ್ನು ಮುಕ್ಕುವ ಚಪಲವು ಉಂಟಾಗುತ್ತದೆ. ಬಯಕೆಯು ಉಂಟಾದವರಲ್ಲಿ ಚಪಲವು ವಿಚಿತ್ರವಾಗುತ್ತದೆ. ಕಬ್ಬಿಣದ ಅಂಶವು ಇವರಲ್ಲಿ ಕಡಿಮೆಯಾಗಿರುವುದರಿಂದ, ಮತ್ತು ಇತರ ಕಾರಣಗಳಿಂದಲೂ ಹಾಗೆ ಮಾಡುತ್ತಾರೆ.

{gap}}ಅದರಂತೆಯೇ ಮನಸ್ಸಿನಲ್ಲಿ ಯಾವುದೋ ಲೋಪವಿರುವುದರಿಂದ, ಚಪಲಚಿತ್ತರಾಗುತ್ತಾರೆ. ನಡವಳಿಕೆಯು ಕೂಡ ಅಸ್ತವ್ಯಸ್ತವಾಗಿರುತ್ತದೆ. ಆಗ ಮನಸ್ಸು ತಳಮಳಗೊಂಡು, ಸಳಮಳಮಾಡಿ, ತಪಿಸಿದರೆ, ಕುದಿಯತೊಡಗಿದರೆ, ಮನಸ್ಸು ಚಪಲತೆಯನ್ನು ಕಳೆದುಕೊಂಡು, ಹಸನಾಗುತ್ತದೆ. ಮನಸ್ಸು ಆಗ ವಿಹಿತವಾದ ನಿರ್ಣಯವನ್ನು ಮಾಡಿ, ಇಷ್ಟಾರ್ಥವನ್ನು ಪಡೆಯಲು ಸುಲಭವಾಗುತ್ತದೆ.

ಸಮಾಧಿ - ಧಾರಣ, ಎಂದರೆ ಮನಸ್ಸನ್ನು ಒಂದು ವಿಷಯದಲ್ಲಿ ನಿರಂತರ ಮನನದಿಂದ ನಿಲ್ಲಿಸುವುದು. ನಂತರ ಧ್ಯಾನ, ಎಂದರೆ ಮತ್ತೆ ಯಾವ ವಿಷಯಗಳೂ ಮನಸ್ಸಿಗೆ ಬಾರದಂತೆ ಸಾಧಿಸುವುದು. ಇವೆರಡನ್ನೂ ದೃಢವಾಗಿಸಿದರೆ, ಸಮಾಧಿಯ ಸ್ಥಿತಿಯನ್ನು ಮನಸ್ಸು ಪಡೆಯುತ್ತದೆ. ಆಗ ಬಾಹ್ಯ ಪ್ರಪಂಚದ ಸೆಳೆತ ಬಹಳಷ್ಟು ಕ್ಷೀಣಿಸುತ್ತದೆ. ಅಂತರಂಗದಲ್ಲಿರಬಹುದಾದ, ಅಥವ ಇರಲೇಬೇಕಾದ, ಅರಿವು ಉಂಟಾಗತೊಡಗುತ್ತದೆ. ಇಂತಹ ಅಲೌಕಿಕ ಅರಿವು ಬ್ರಹ್ಮಾಂಡದ ಅರಿವು ಹಂತಹಂತವಾಗಿ ಅಭಿವೃದ್ಧಿಯಾಗುತ್ತದೆ. ಹಾಗೂ ಹೆಚ್ಚು ಹೆಚ್ಚು ಕಾಲ ಇರತೊಡಗುತ್ತದೆ. ಸಮಾಧಿ ಸ್ಥಿತಿಯನ್ನು ಮನಸ್ಸಿನಲ್ಲಿ, ಮನಸ್ಸಿನ ಮೂಲಕವೇ ಸಾಧಿಸಿಕೊಂಡರೆ, ಮನಸ್ಸಿನ ಆಟ ಅವತಾರಗಳೆಲ್ಲಾ ನಿರೋಧಿಸಲ್ಪಟ್ಟಾಗ, ಲಭಿಸುವ ಸಿದ್ಧಿಗಳನ್ನು ಮೊದಲ ಮೂರು ಪಾದಗಳ ವಿವರಣೆಯಲ್ಲಿ ತಿಳಿಸಲಾಗಿದೆ. ಇದೇ ಯೋಗ ಫಲಗಳು.

ಪೂರ್ವಜನ್ಮದಲ್ಲಿ ಸಾಧಿಸಿಕೊಂಡ, ಯಾವ ಹಂತದ ಅಥವಾ ಕಾಲ ಪರಿಮಿತಿಯ ಸಮಾಧಿಯು ಮುಂದಿನ ಜನ್ಮಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತವೆ. ಹೀಗಂದಾಗ ಪುನರ್ಜನ್ಮವು ಇದ್ದೇ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅನಂತರವೇ ಪತಂಜಲಿ ಮಹರ್ಷಿಗಳ ಯೋಗ ವಿಚಾರ ಸರಣಿಯನ್ನು ಅರ್ಥಮಾಡಿಕೊಳ್ಳಬಹುದು.

ಜನ್ಮ : ಪುನರ್‌ಜನ್ಮ ; ಇವುಗಳ ವಿಶ್ಲೇಷಣೆಯು ಇಲ್ಲಿ ಅಪ್ರಕೃತ. ಆದರೆ