೨೭
ಶೀಲಾಳ ಶ್ವಾಸಕೋಶಗಳು ಬೆಲೂನಿನಂತೆ ಉಬ್ಬಿ ಕಾಟವನ್ನು ಏಕೆ ಕೊಡುತ್ತದೆ? ನಿಜವಾಗಿ ಶ್ವಾಸಕೋಶಗಳು ಬೆಲೂನ್ ಆಗಿರುವುದಿಲ್ಲ. ಆದರೂ ಆದಂತೆ ಭ್ರಮೆಯನ್ನು ಹುಟ್ಟಿಸುವುದೇಕೆ? ಇಂದಿನ ವಿಜ್ಞಾನದ ಹಂತದಲ್ಲಿ, ಇದನ್ನು ಖಂಡತವಾಗಿ ಹೇಳಲು ಸಾಧ್ಯವಿಲ್ಲ. ಸುಂದರವಾಗಿರುವ, ಹೀಗೆ ಇರಲೇಬೇಕು ಎನಿಸುವ ಹಲವಾರು ಊಹೆಗಳಿಗೇನೂ ಕೊರತೆಯಿಲ್ಲ. ಕತೆ ಬರೆಯಬಲ್ಲವರೆಲ್ಲರೂ ಊಹೆಯನ್ನು ಕಟ್ಟಬಲ್ಲರು. ದಿಟವಾದ ಕಾರಣವು ದೇವರಿಗೇ ಗೊತ್ತು! ದೇವರನ್ನು ದೃಢವಾಗಿ ನಂಬಿದವರಲ್ಲಿ ಕೆಲವರಾದರೂ ಆತಂಕದ ಬೇನೆಯಿಂದ ಸ್ವಾಭಾವಿಕವಾಗಿ ಪಾರಾಗುತ್ತಾರೆ. ಇಷ್ಟನ್ನು ಮಾತ್ರ ಅನುಭವದಿಂದ ಹೇಳಬಹುದು.
೪. ಬಾವಿ ಕಟ್ಟೆಯ ಸೈತಾನ್
ಆಕೆಯ ಮುಖವನ್ನು ನೋಡಿದಾಗ ನನಗೆ ಗಾಬರಿಯಾಯಿತು. ದೆವ್ವವನ್ನು ಕಣ್ಣಾರ ಕಂಡವರ ಕಣ್ಣುಗಳಂತೆ ಆಕೆಯ ಕಣ್ಣುಗಳು ಗೆಡ್ಡೆಗಣ್ಣಾಗಿದ್ದುವು. ಪ್ರಯಾಸದಿಂದ ಆಕೆಯು ಉಸಿರನ್ನು ಎಳೆದುಕೊಳ್ಳುವಾಗ ವಕ್ರವಕ್ರವಾದ ಕರ್ಕಶ ಶಬ್ದಗಳು ಹೊರಹೊಮ್ಮುತ್ತಿದ್ದುವು. ಸುಮಾರು ಐದೂಮುಕ್ಕಾಲು ಅಡಿ ಎತ್ತರವಿರುವ, ಬುರುಕಿ ಹಾಕಿಕೊಂಡಿರುವ ಹೆಂಗಸು ಈ ರೀತಿ ಕರ್ಕಶ ಶಬ್ದಗಳನ್ನು ಮಾಡಿದರೆ ಯಾರೂ ಹೆದರಬೇಕಾದದ್ದೇ. ಮಧ್ಯೆ ಮಧ್ಯೆ ಉಸಿರನ್ನು ಎಳೆದು ಕೊಳ್ಳುವಾಗ, ತಟ್ಟಂತ ನಿಲ್ಲಸಿಬಿಟ್ಟು, ನಂತರ ನಾಯಿ ಕೆಮ್ಮಿನಂತೆ ಶಬ್ದ ಮಾಡುತ್ತ ದೊಡ್ಡ ಉಸಿರನ್ನು ಪ್ರಯಾಸದಿಂದ ಎಳೆದುಕೊಳ್ಳುತ್ತಿದ್ದಳು. 'ಯಾಕಮ್ಮಾ, ಹೀಗೆ ಉಸಿರಾಡುತ್ತಿ' ಎಂದು ಕೇಳಿದಾಗ 'ಯಾರೋ ಬಂದು ಕತ್ತನ್ನು ಅದುಮಿದ ಹಾಗೆ ಆಗುತ್ತೆ. ಆದ್ದರಿಂದ ಹೀಗೆ' ಎಂದಳು. 'ಇಲ್ಲಿ ಯಾರೂ ಇಲ್ಲವಲ್ಲಮ್ಮ : ಯಾರೂ ಬಂದಿಲ್ಲವಲ್ಲ' ಎಂದೆ. 'ಅದು ನನಗೂ ಗೊತ್ತು; ಆದರೆ ಹಾಗೆ ಆಗುತ್ತೆ ; ಯಾವಾಗ ಆಗುತ್ತೆ ಎನ್ನುವುದು ತಿಳಿಯದು. ಆದ್ದರಿಂದ ಭಯವೂ ಹೆಚ್ಚಾಗಿದೆ.' ಎಂದು ಆಕೆ ಹೇಳಿದಳು.
ಆತಂಕವು ಅತಿಯಾಗಿ ತೀವ್ರ ತಳಮಳದ ಹಂತವನ್ನು ಮುಟ್ಟಿದೆ ಎನ್ನುವುದು ಸ್ಪಷ್ಟವಾಯಿತು. ಸಮಾಧಾನವನ್ನು ಮೆದು ಮಾತುಗಳಿಂದ ಮಾಡುತ್ತ 'ಈ ಇಂಜಕ್ಷನ್ನಿನಿಂದ ಖಂಡಿತವಾಗಿ ಶಮನವಾಗುತ್ತೆ' ಎಂದು ಒತ್ತಾಯಪೂರ್ವಕವಾಗಿ ಧೈರ್ಯ ಹೇಳುತ್ತಾ, ಚಿಕಿತ್ಸೆಯನ್ನು ನಡೆಸಿದೆ. ಇನ್ಸಕ್ಷನ್ ಕೊಟ್ಟ ಮೂರು ನಾಲ್ಕು ನಿಮಿಷಗಳಲ್ಲಿ ಆಕೆಯ ಮುಖವು ನೋಡುವಂತಾಯಿತು. “ಉಸ್ಸಪ್ಪ ! ಈಗ ಸರಾಗವಾಗಿ ಉಸಿರು ಬಿಡಬಹುದಪ್ಪಾ ! ಸದ್ಯಕ್ಕೆ ಬದುಕಿದೆ' ಎಂದು ನಿಟ್ಟುಸಿರನ್ನು