ವೈಜ್ಞಾನಿಕವಾಗಿ ಪುನರ್‌ಜನ್ಮವನ್ನು ಸಿದ್ಧಾಂತ ಮಾಡಬಹುದು, ಎಂದು ಮಾತ್ರ ಹೇಳಿದರೆ ಸಾಕು.
ಜಾತ್ಯಂತರ ಪರಿಣಾಮ: ಪ್ರಕೃತಿ ಅಪರಾತ್
ಜನ್ಮ ಒಂದರಲ್ಲೇ, ಪೂರ್ವಾಂತರ ಜನ್ಮಗಳ ಪರಿಣಾಮಗಳು ಪೂರ್ಣವಾಗಿ ಮುಗಿದುಹೋಗುವುದರಿಂದ, ಮನಸ್ಸು ಹೊಸ ಅರಿವು ಮತ್ತು ಧೈಯಗಳನ್ನು Metamorphosis ಆದಂತೆ ಪಡೆಯಲು ಸಾಧ್ಯ. ಜಿಪುಣಾಗ್ರೇಸರನಾದ, ಕಾಸಿನ ಮೇಲಿನ ಕಿಲುಬನ್ನು ಪುನುಗು ಎಂದು ಶೇಖರಿಸುವವನು, ಯಾವುದೋ ಒಂದು ಘಟನೆಯಿಂದ, ಧನಕನಕಾದಿಗಳನ್ನೆಲ್ಲ ಸರ್ವರಿಗೂ ದಾನ ಮಾಡಿ, ಪುರಂದರದಾಸನಾದುದು ಈ ಸೂತ್ರಕ್ಕೆ ಸಾಕ್ಷಿ. ಜೀವನದ ಅಗತ್ಯ ಮೌಲ್ಯಗಳು ಎಂದು ದೃಢವಾಗಿ ನಂಬಿದ್ದವನು, ಹಠಾತ್ತನೆ, ಅಂತಹ ಮೌಲ್ಯಗಳನ್ನು ತೃಣೀಕರಿಸಿ, ತೀವ್ರ ವಿರುದ್ಧವಾದ ಮೌಲ್ಯಗಳನ್ನು ಕಾಯಾ ವಾಚಾ ಮನಸಾ ಸ್ವೀಕರಿಸುವುದನ್ನು ಇಂದಿನ ಜೀವನದಲ್ಲಿಯೂ ಕಾಣುತ್ತೇವೆ. ದೇಶಾದ್ಯಂತ ಸುಪ್ರಸಿದ್ಧನಾದ ವಿಜ್ಞಾನಿಯು, ನವ್ಯ ದೃಷ್ಟಿಯೊಂದನ್ನು ಪಡೆದು, ಮೌಡ್ಯ ಎಂದು ಅನ್ನಿಸಿಕೊಳ್ಳುವಂತೆ, ನಡೆದುಕೊಳ್ಳುತ್ತಾನೆ. ಸಹೋದ್ಯೋಗಿಗಳಿಗೆ ಅಚ್ಚರಿ ತಂದರೂ, ಹೀಗಾಗುವುದು ಪೂರ್ವಜನ್ಮಗಳ ಪರಿಣಾಮವು ಮುಗಿದುಹೋದದ್ದರಿಂದ ಅದೂ ಈ ಜನ್ಮದ ಒಂದು ಹಂತದಲ್ಲಿ.
ಮನಸ್ಸಿನ ರೂಢಿಗತವಾದ ಗುರಿ ಮತ್ತು ಆಚರಣೆಗಳು ಒಂದು ಜಾತಿಯವು. ಹಠಾತ್ತನೆ ವಿರುದ್ಧವಾದ ಗುರಿ ಮತ್ತು ಆಚರಣೆಗಳನ್ನು ನಂಬತೊಡಗಿದಾಗ ಬೇರೆ ಜಾತಿಯೇ ಆರಂಭವಾದಂತಾಯಿತು. ಈಗಿನ ಕಾಲದಲ್ಲಿ 'ಜಾತಿ' ಎನ್ನುವ ಅರ್ಥಕ್ಕೂ ಪತಂಜಲಿಗಳ ಕಾಲದ ಜಾತಿ ಎಂಬ ಪದದ ಅರ್ಥಕ್ಕೂ ಅರ್ಥಾರ್ಥಕ ಸಂಬಂಧವಿಲ್ಲ ಎನ್ನುವುದನ್ನು ಮರೆಯಬಾರದು.
ನಿಮಿತ್ತಂ ಅಪ್ರಯೋಜಕಂ ಪ್ರಕೃತೀನಾಂ ವರಣ ಭೇದನ್ನು ತತಃ ಕ್ಷೇತ್ರಿಕವತ್
ಒಂದೇ ಜನ್ಮದಲ್ಲಿ ಒಂದು ಹಂತದಲ್ಲಿ ಜಾತ್ಯಂತರವಾಗುವುದು, ಹಿಂದಿನ ಜನ್ಮಗಳ ಕರ್ಮಗಳಿಂದ ಮಾತ್ರವಲ್ಲ, ಕರ್ಮಗಳು ಬಂಧಿತವಾದ, ಎಲ್ಲೆಗಳು, ಅಡ್ಡಿ ತೊಡಕುಗಳೂ ಇರುವ ಮಾರ್ಗದಲ್ಲಿ ಮಾತ್ರ ಪರಿಣಾಮವನ್ನು ಬೀರುತ್ತವೆ. ಆದರೆ 'ಸಂಯಮ'ದಿಂದಾಗಿ, ಅಡ್ಡಿ ತೊಡಕುಗಳನ್ನು ಕಿತ್ತೊಗೆದು, ಇನ್ನೊಂದು ವಿಹಿತ ಮಾರ್ಗದಲ್ಲಿ ನಡೆಯುವಂತೆ ಮಾಡಬಹುದು.
ನಿರ್ಮಣ ಚಿತ್ತಾನಿ ಅಸ್ಮಿತಾ ಮಾಡ್ತಾತ್
'ಸಂಯಮ'ದಿಂದಾಗಿ ಮನಸ್ಸನ್ನು ಸ್ಥಿರಗೊಳಿಸಿದ ಮೇಲೆ, ಪೂರ್ವ ಜನ್ಮಗಳ