ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೪೪

ಮನಮಂಥನ

Hereditary characters ಎಂಬುವು ದೇಹದ ವಿಷಯದಲ್ಲಿ ಸಾಮಾನ್ಯ ಅನುಭವದಿಂದಲೂ ಹಾಗೂ ವೈಜ್ಞಾನಿಕವಾಗಿಯೂ ಸಮರ್ಥನೀಯವಾಗಿವೆ. Memory is the deified from of hereditary characteristics o ಥಾಮಸ್ ಮ್ಯಾನ್‌ ಹೇಳಿದ್ದಾನೆ. ಮನಸ್ಸು ಎಂಬ ಶಕ್ತಿಯ ವಿಚಾರವು ಇಂದಿನ್ನೂ ನಮಗೆ ವಿಶದವಾಗಿ ತಿಳಿದಿಲ್ಲ. ದೇಹವು ಇಲ್ಲವಾದಾಗ, ಮನಸೂ ಶೂನ್ಯವಾಗುತ್ತದೆಯೇ? ಅಥವಾ ಇನ್ನೊಂದು ತರಹ ಶಕ್ತಿಯಾಗಿ ಪರಿವರ್ತನೆಯನ್ನು ಹೊಂದುತ್ತದೆಯೇ? ಯಾರೂ ತಿಳಿದಿಲ್ಲ. ಪುನರ್ಜನ್ಮವನ್ನು ನಂಬಿದವರು, ಸತ್ತವರ ಮನಸ್ಸು ಅಥವಾ ಅದರ ಮುಖ್ಯಾಂಶವೊಂದು ಉಳಿದಿರುತ್ತದೆ. ಆದರೆ ಅದಕ್ಕೆ ದೇಹವಿಲ್ಲದಿದುದರಿಂದ, ಇತರ ಲೌಕಿಕರ ಕಣ್ಣಿಗೆ ಕಾಣುವುದಿಲ್ಲ. ಇನ್ನೊಂದು ದೇಹವು, ಯಾವ ಪ್ರಾಣಿಯದೇ ಆಗಲಿ ದೊರೆತರೆ, ಅದರಲ್ಲಿ ಪ್ರತಿಷ್ಠಿತವಾಗಿ, ಆ ದೇಹದೊಂದಿಗೆ ಜನಿಸುತ್ತದೆ. ಇದನ್ನು ನಂಬುವುದಾದರೆ, ಹಿಂದಿನ ಜನ್ಮದ ಕರ್ಮಫಲಗಳು ಅಥವಾ ಸ್ಮರಣೆಗಳು, ಅಂತಹ ಮನಸ್ಸಿನಲ್ಲಿ ಉಳಿದಿರುವುದು ಸಮರ್ಥನೀಯ. ಈ ದೃಷ್ಟಿಯಿಂದ ನೋಡಿದರೆ ಮೇಲೆ ಉಲ್ಲೇಖಿಸಿರುವ ಸೂತ್ರಗಳು ಅರ್ಥಗರ್ಭಿತವಾಗಿರುತ್ತವೆ.

ತೇ ವ್ಯಕ್ತ ಸೂಕ್ಷ್ಮ ಗುಣಾತ್ಮಾನ:

ತೇ, ಎಂದರೆ ಭೂತ, ವರ್ತಮಾನ, ಭವಿಷ್ಯ :-ವ್ಯಕ್ತವಾದುವು, ಮತ್ತು ಅವ್ಯಕ್ತವಾದುವು, ಅನುಭವಿಸಿದುದು, ಹಾಗೂ ಅತಿ ಸೂಕ್ಷ್ಮವಾಗಿದ್ದು ಇನ್ನೂ ಅನುಭವಕ್ಕೆ ಬಾರದೆ ಇರುವುವು, ಇವೆಲ್ಲವೂ ಸತ್ವ, ರಜಸ್, ತಮೋಗುಣಗಳ ವಿಧ ವಿಧವಾದ ಸಮ್ಮಿಶ್ರಣದ ಫಲಗಳು. ಮೂರೂ ಈ ಗುಣಗಳ ಮೊದಲ ಅವಸ್ಥೆಯು 'ಮಹತ್' ತತ್ತ್ವ ಎಂದು ಸಾಂಖ್ಯಕಾರಕರೂ, ಚಿತ್ರ ಎಂದು ಯೋಗವಾದಿಗಳೂ ಹೆಸರಿಸುತ್ತಾರೆ.

ಪರಿಣಾಮೈಕತ್ವಾದ್ ವಸ್ತು ತತ್ತ್ವಂ

ಮೂರು ಗುಣಗಳ ಪರಿಣಾಮದ ಐಕ್ಯದಿಂದ, ವಸ್ತುವು ಒಂದು ಎಂಬ ಭಾವನೆಯು ಮೂಡುತ್ತದೆ.

ವಸ್ತು ಸಾಮ್ಯ ಚಿತ್ತ ಭೇದಾತ್‌ ತಯೋ ವಿಭಕ್ತ ಪಂಥಾ

ಭೇದ ಭೇದವಾದ ಮನಸ್ಸುಗಳಿರುವುದರಿಂದ, ವಸ್ತುವು ಒಂದೇ ಆಗಿದ್ದರೂ, ಅದು ವಿಧವಿಧವಾಗಿ ಕಾಣಿಸುತ್ತದೆ ; ಅಥವಾ ಗ್ರಹಿಸಲ್ಪಡುತ್ತದೆ. ಸ್ತ್ರೀಯು ಒಬ್ಬಳೇ ಆಗಿದ್ದರೂ, ಪ್ರಿಯನ ಮನಸ್ಸಿನಲ್ಲಿ ಆಹ್ಲಾದವನ್ನುಂಟುಮಾಡಿ, ಸವತಿಯ ಮನಸ್ಸಿನಲ್ಲಿ ಮತ್ಸರವನ್ನು ಮಾಡಿ, ಸಂನ್ಯಾಸಿಯ ಮನಸ್ಸಿನಲ್ಲಿ ಯಾವ ಪರಿಣಾಮವನ್ನೂ