ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೪೫

ಹೂಡದೆ ವಿಧವಿಧ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತಾಳೆ. ವಸ್ತುವು ಒಂದೇ ಆಗಿದ್ದರೂ, ನೋಡಿದವರ ಮನಸ್ಸು ವಿಧವಿಧವಾಗಿರುವುದರಿಂದ, ವಿಭಿನ್ನವಾದ ಪರಿಣಾಮಗಳು ಅವರುಗಳ ಮನಸ್ಸಿನಲ್ಲಿ ಉಂಟಾಗುತ್ತದೆ.

ತತ್ ಉಪರಾಗಾ ಪ್ರೇಕ್ಷಿತ್ವಾಡ್ ಚಿತ್ತಸ್ಯ ವಸ್ತು ಜ್ಞಾತ, ಅಜಾತಂ

ಯಾವುದಾದರೂ ವಸ್ತುವನ್ನು ನೋಡಿದರೆ, ಅದರ ರೂಪವನ್ನು ಮನಸ್ಸು ಆ ಕ್ಷಣಾವಧಿಯಲ್ಲಿ ಹೊಂದುತ್ತದೆ. ಮನಸ್ಸೆಂಬ ಶಕ್ತಿಯು ಸರ್ವಾಂತರ್ಯಾಮಿ ಯಾಗಿದೆ. ಅಂದರೆ ಪ್ರಪಂಚವೆಲ್ಲಾ ಮನಸ್ಸಿಗೆ ವ್ಯಕ್ತವಾಗಬೇಕು. ಆದರೆ ನೋಡಿದುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಗ್ರಹಿಸುತ್ತೇವೆ. ಏಕೆಂದರೆ ನೋಡುವುದರ ಜತೆಗೆ, ಉಪರಾಗ ಎಂದರೆ ಎಂತದಾದರೂ ತುಸು ಆಸಕ್ತಿ ಅಥವಾ ರಾಗ ಪ್ರಚೋದನೆಯನ್ನು ಮಾಡಬೇಕು, ಆಗ ಗ್ರಹಿಸಲು ಸಾಧ್ಯ. ಆಸಕ್ತಿಯು ಉಂಟಾಗಬೇಕಾದರೆ, ಮನಸ್ಸನ್ನು ತತ್ಕಾಲಾವಧಿಯಲ್ಲಿ, ಮತ್ತೊಂದು ಮನಸ್ಸಿನಲ್ಲಿ ಅಡಗಿರುವ ಶಕ್ತಿಯು ಪ್ರಚೋದಿಸಬೇಕು. Perception ಅಥವಾ ಗ್ರಹಿಸುವಿಕೆಗೆ, ಇತ್ತ ಇಂದ್ರಿಯಗಳು ಮತ್ತು ಇಂದ್ರಿಯಾರ್ಥಭ್ಯಗಳು ಇರಬೇಕು. ಮತ್ತೊಂದು ಕಡೆ ಮನಸ್ಸನ್ನು ಆಸಕ್ತಿ ವಹಿಸುವಂತೆ ಪ್ರಚೋದಿಸುವ ಶಕ್ತಿಯು ಇರಬೇಕು. ಹಾಗಾದಾಗ ಇವೆರಡರ ಮಧ್ಯದಲ್ಲಿರುವ ಮನಸ್ಸು ಕಂಡುದನ್ನು ಗ್ರಹಿಸುತ್ತದೆ. ಕಂಡುದು Conscious mind ಇಗೆ ವ್ಯಕ್ತವಾಗುತ್ತದೆ. ಹಾಗೆ ಪ್ರಚೋದನೆಯಾಗದಿದ್ದರೆ, ಮನಸ್ಸು, ಅಜ್ಞಾತಂ, ಗ್ರಹಿಸುವುದಿಲ್ಲ.

ಸದಾ ಜ್ಞಾತಾ ಚಿತ್ತ ವೃತ್ತಯಃ ತತ್ ಪ್ರಭೋ: ಪುರುಷಸ್ಯಾ ಪರಿಣಾಮಿತ್ವಾತ್

ತತ್ ಪ್ರಭೋ, ಮನಸ್ಸಿನಲ್ಲಿ ಹುದುಗಿದ್ದುಕೊಂಡು, ಪ್ರಭುವಿನಂತೆ ಮನಸ್ಸನ್ನು ನಡೆಸುವ ಶಕ್ತಿಯು, ಸದಾ ಜ್ಞಾತಾಃ ಎಲ್ಲವನ್ನೂ ಎಲ್ಲ ಕಾಲದಲ್ಲೂ ಅರಿತಿರುತ್ತದೆ. ಚಿತ್ತವೃತ್ತಿಗಳ ಪರಿಣಾಮದಿಂದ ಆಗುವ ಗ್ರಹಿಸುವಿಕೆಯು ಆ ಶಕ್ತಿಯಿಂದಲೇ. ಆ ಶಕ್ತಿಯನ್ನು 'ಪುರುಷ' ಎಂದು ಹೆಸರಿಸಿದ್ದರು. 'ಪುರುಷ'ನು ಚಿತ್ತವೃತ್ತಿಗಳಿಗೆ ಪ್ರಚೋದಕನಾಗಿದ್ದರೂ, ಚಿತ್ತವೃತ್ತಗಳಿಗೆ ಸಾಕ್ಷಿಯಾಗಿದ್ದರೂ, ಅವುಗಳಿಂದ ಯಾವ ಸೋಂಕನ್ನೂ ಪಡೆಯುವುದಿಲ್ಲ. ಮೆದುಳಿನಲ್ಲಿರುವ ಆನಂದದ ಕೇಂದ್ರಗಳ ಪ್ರಚೋದನೆಯಿಂದ, ಇದು ಸಾಧ್ಯವಾಗುತ್ತದೆ ಎಂದು ಊಹಿಸಬಹುದು.

ನ ತತ್ ಸ್ವಾಭಾಸಂ ದೃಶ್ಯತಾಪ್

ಮನಸ್ಸು ಎಂಬುದನ್ನು ಗ್ರಹಿಸಬಹುದು. ಆದರೆ ಮನಸ್ಸನ್ನು ಪ್ರಚೋದಿಸುವ 'ಪುರುಷ' ಎಂಬುದು ಮನಸ್ಸಿನ ಎಲ್ಲ ಪರಿವರ್ತನೆಗಳಿಗೆ ಸಾಕ್ಷಿಯಾಗಿರುತ್ತದೆ. ಕಾಣುತ್ತದೆ. ಆದಕಾರಣ ಮನಸ್ಸು, ಸ್ವಯಂಪ್ರಕಾಶಮಾನವಾದುದಲ್ಲ. 'ಪುರುಷ'