ಮಾತ್ರ ಸ್ವಯಂ ಪ್ರಕಾಶಮಾನವಾದುದು
ಏಕ ಸಮಯೇಚ ಉಭಯಾನ್ ಅವಧಾರಣು
ಒಂದೇ ಕಾಲದಲ್ಲಿ ಚಿತ್ತವು ತನ್ನ ಸ್ವರೂಪವನ್ನೂ ವಸ್ತುವನ್ನೂ ಕೂಡ ಗ್ರಹಿಸಲಸಾಧ್ಯ. ಆದಕಾರಣ ಚಿತ್ತವು ಸ್ವಪ್ರಕಾಶವಾದದ್ದಲ್ಲ. ಆದರೆ ದೃಶ್ಯವಾಗಬಹುದು.ಪುರುಷನ ಸ್ವಯಂ ಪ್ರಕಾಶದಿಂದ ಪ್ರಚೋದಿತವಾದಾಗ,
ಚಿತ್ತಾಸ್ತರ ದೃಶ್ಯ ಬುದ್ಧಿ ಬುದ್ಧತ್ ಅತಿ ಪ್ರಸಂಗ ; ಸ್ಮೃತಿ ಸಂಕರಷ್ಟ
ಮನಸ್ಸು ಸ್ವಯಂ ಪ್ರಕಾಶವಲ್ಲದಿದ್ದರೂ, ಬೇರೊಂದು ಮನಸ್ಸಿನಿಂದ ಪ್ರಕಾಶಗೊಳ್ಳಬಹುದು ಎಂದು ಅನ್ನಬಹುದು. ಆದರೆ ಈ ವಾದವು ಅತಿಪ್ರಸಂಗ ಬೇರೊಂದು ಮನಸ್ಸನ್ನು ಪ್ರಚೋದಿಸಲು, ಮತ್ತೊಂದು ಮನಸ್ಸು ಅಗತ್ಯ. ಈ ತೆರನಾಗಿ ಇದಕ್ಕೆ ಆದಿಯಾದ ಮನಸ್ಸು ಯಾವುದು ಎಂದು ತಿಳಿಯಲಸಾಧ್ಯ. 'ಪುರುಷ'ನ ಪ್ರಚೋದನೆಯು ಎಲ್ಲ ಮನಸ್ಸುಗಳಿಗೂ ಆಧಾರ ಭೂತವಾದುದು ಎಂಬುದು ಖಚಿತವಾಗುತ್ತದೆ.
ಅಲ್ಲದೆ ಪ್ರತಿಯೊಂದು ಮನಸ್ಸಿನ ಸ್ಮರಣೆಗಳು ಕೂಡಿಕೊಂಡು, ಇನ್ನೊಂದು ಮನಸ್ಸನ್ನು ಪ್ರಚೋದಿಸುವಾಗ, ಭ್ರಮಣೆ ಮತ್ತು ಗೊಂದಲಗಳೂ ಉಂಟಾಗುತ್ತವೆ.
ಚಿತೇ ಅಪ್ರತಿ ಸಂಕ್ರಮಾಯಾಃ ತದಾ ಕಾರಾಪತ್ತೆ ಸ್ವಬುದ್ಧಿ ಸಂವೇದನಂ
ಚಿತ್ತವು ಅಥವಾ ಮನಸ್ಸು ವೃತ್ತಿಗಳಿಂದ ಬಾಧಿಸಲ್ಪಡದಿದ್ದಾಗ, ಚಿತ್ತದಲ್ಲಿರುವ 'ಪುರುಷ'ನ ಅರಿವು ಉಂಟಾಗುತ್ತದೆ. 'ಪುರುಷ'ನಲ್ಲಿ ಎರಡು ತೆರನ ಅಂಶಗಳಿವೆ. ಒಂದು, ನಿತ್ಯೋದಿತ ; ಶಾಶ್ವತವಾಗಿರುವುದು. ಎರಡು, ಅಭಿವ್ಯಂಗ್ಯ, ಈ ಅಂಶವು ಮನಸ್ಸನ್ನು ವ್ಯಾವಹಾರಿಕವಾಗಿಯೂ ಹಾಗೂ ಪಾರಮಾರ್ಥಿಕವಾಗಿಯೂ, ಪ್ರಚೋದಿಸುತ್ತದೆ. ಪಾರಮಾರ್ಥಿಕವಾಗಿ ನಡೆಯತೊಡಗಿದರೆ, ಮನಸ್ಸು, ಹಸನಾದಾಗ 'ಪುರುಷ'ನನ್ನು ಅರಿಯುತ್ತದೆ.
ದೃಷ್ಟ ದೃಶ್ಯ ಪರಕಂ ಚಿತ್ತಂ ಸರ್ವಾರ್ಥಂ
ಮನಸ್ಸನ್ನು ಪ್ರಚೋದಿಸಿ ನಡೆಸುವ ಪುರುಷ : ಮತ್ತು ಮನಸ್ಸಿನಿಂದ ಬಾಹ್ಯ ಲೋಕದ ವಿಷಯಗಳನ್ನು ತಿಳಿದುಕೊಳ್ಳುವ ರೀತಿ ; ಇವೆರಡೂ ಯೋಗ ಅಥವಾ ಒಟ್ಟು ಗೂಡಿದರೆ ಸರ್ವ ವಿಷಯಗಳನ್ನೂ ತಿಳಿದುಕೊಳ್ಳಬಹುದು. ಆಗ ಬಾಹ್ಯ ಲೋಕದ ಭೋಗಗಳ ನಶ್ವರತ್ವವೂ, 'ಪುರುಷ'ನ ಅರಿವಿನ ಶಾಶ್ವತತ್ತ್ವವೂ, ಸ್ಪಷ್ಟವಾಗಿ ತಿಳಿಯುತ್ತದೆ. ಶಾಶ್ವತವಾದುದರತ್ತ ಸುಲಭವಾಗಿ ಮನಸ್ಸು ಹರಿಯತೊಡಗುತ್ತದೆ.
ತತ್ ಅಸಂಖ್ಯೆಯ ವಾಸನಾಭಿ ಚಿತ್ರಮಪಿ ಪರಾರ್ಥಂ ಸಂಹತ್ಯೆ ಕಾರಿತ್ವಾತ್