ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೪೭

'ಪುರುಷ' ಎನ್ನುವ ಪರಮಶಕ್ತಿಯು ಮನಸ್ಸನ್ನು ನಡೆಸುತ್ತದೆ. ಮನಸ್ಸಾದರೋ ಬಾಹ್ಯ ಪ್ರಪಂಚದ ಸಂಪರ್ಕವನ್ನು ಹೊಂದಿ ಭೋಗ್ಯ ಕಾವ್ಯಗಳನ್ನು ಅನುಭವಿಸಲು ಉತ್ಸುಕವಾಗಿರುತ್ತದೆ. ಇಂತಹ ಮನಸ್ಸುಗಳು ಅಸಂಖ್ಯಾತವೂ, ಸ್ಮರಣಾರೂಪಿಯಾದ ವಾಸನೆಗಳಿಂದಲೂ, ಚಿತ್ರಿಸಲ್ಪಡುತ್ತವೆ. ಆದರೂ ಮನಸ್ಸಿನ ಅಂತರಾಳದಲ್ಲಿ, ತೋರ ಮನಸ್ಸಿನ ಗಮನಕ್ಕೆ ಬರದೆ, ಬಹಳಷ್ಟು ಕಾರ್ಯಗಳು ನಡೆಯುತ್ತವೆ. ಇವೆಲ್ಲವೂ, ಮನಸ್ಸಿನ ಪ್ರಭುವಾದ, 'ಪುರುಷನ'ನ ಪ್ರಚೋದನೆಯಿಂದ ಸಾಧ್ಯವಾಗಿದೆ. ಹೀಗಾಗಿ ಭೋಗ ಕಾಮ್ಯಗಳಿಂದ ವಿಮುಕ್ತಿಯನ್ನು ಪುರುಷನು ಹೊಂದಿರುತ್ತಾನೆ. ಮನಸ್ಸಿನಲ್ಲಿರುವ ಪ್ರವೃತ್ತಿಗಳೆರಡು ; ನಿತ್ಯೋದಿತ ಮತ್ತು ಅಭಿವ್ಯಂಗ್ಯ ಎನ್ನುವುದರ ವಿವರಣೆಯಿದು.

ವಿಶೇಷ ದರ್ಶಿನ ಆತ್ಮಭಾವ ಭಾವನಾವಿ ನಿವೃತ್ತಿ:

'ಪುರುಷ'ನ ಅರಿವು ಮೂಡಿದ ನಂತರ, ಪುರುಷ ಮತ್ತು ಚಿತ್ತ ಇವುಗಳ ವ್ಯತ್ಯಾಸವನ್ನು ತಿಳಿಯುವ ಆಸೆಯು ನಿವೃತ್ತಿಯಾಗುತ್ತದೆ. ಅನಂತರ ಯಾವ ಆಸೆಯೂ ಉಂಟಾಗುವುದಿಲ್ಲ.

ತದಾಹಿ ವಿವೇಕ ನಿಮ್ಮ ಕೈವಲ್ಯ ಪ್ರಾರಂ ಚಿತ್ತಂ

ಮೇಲೆ ಹೇಳಿದ ಸ್ಥಿತಿಯು ಉಂಟಾದಾಗ, ವಿವೇಕ (Discrimination) ಸ್ಪುಟವಾಗಿ ಮನಸ್ಸು, ಅಥವಾ ಚಿತ್ತವೇ ಎಲ್ಲವೂ ಎಂಬ ಭ್ರಾಂತಿಯು ಹೋಗಿ, ಕೈವಲ್ಯ ಸ್ಥಿತಿಯ ಹೊಸಿಲನ್ನು ದಾಟುತ್ತಾನೆ.

ತತ್ ಛಿದ್ರೇಕು ಪ್ರತ್ಯಯಾಂತರಾಣಿ ಸಂಸ್ಕಾರೇಭ್ಯ:

ಹಾಗಾದರೂ, ಸ್ಮರಣ ಸಂಸ್ಕಾರಗಳಿಂದ, ನನಗೆ ಕೈವಲ್ಯ ಪದವಿಯು ಲಭಿಸಿದೆ ಎಂಬ ಲೌಕಿಕವಾದ ಅಭಿಮಾನವು ತುಸು ಕಾಣಿಸಿಕೊಳ್ಳಬಹುದು.

ಹಾನ ಮೇಷ ಕ್ಷೇತವತ್ ಉಕ್ತಂ

ಇಂತಹ ಲೌಕಿಕ ಅಭಿಮಾನವನ್ನು, ಇತರ ಕೇಶಗಳನ್ನು ಜ್ಞಾನಾರ್ಜನೆಯಿಂದ ತ್ಯಜಿಸಿದ ಹಾಗೆ, ವಿವೇಕಜ್ಞಾನದಿಂದ ನಿವೃತ್ತಿಗೊಳಿಸಬೇಕು.

ಪ್ರಸಂಖ್ಯಾನೇಪಿ ಅಕುಸಿದಸ್ಯ ಸರ್ವಥಾ ವಿವೇಕ ಖ್ಯಾತೇ

ಧರ್ಮ ಮೇಘ: ಸಮಾಧಿ:

ಪ್ರಸಂಖ್ಯಾನ ಎಂದರೆ (Illumination) 'ಪುರುಷ'ನ ಅರಿವಿನಿಂದ ಉಂಟಾಗುವ ಪರಮೋತ್ತಮ ವಿವೇಕ, ಯಾವ ಆಸೆಯನ್ನೂ ಹೊಂದದ ಇಂತಹವರಲ್ಲಿ, ವಿವೇಕದಿಂದಾಗಿ ಸಮಾಧಿಯು ದೊರಕುತ್ತದೆ. ಈ ತೆರನ ಸಮಾಧಿಯನ್ನು 'ಧರ್ಮ ಮೇಘ' ಎನ್ನುತ್ತಾರೆ. ಮೋಡಗಳು ಮಳೆಯನ್ನು