ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ ೪೪೯ ಹೆಸರಿಸಿದ್ದರು. ಕ್ಷಣ ಕ್ಷಣವೂ ಆಗುವ ಮನಸ್ಸಿನ ಕ್ರಮವಾದ ಪರಿವರ್ತನೆಯನ್ನು, ಪರಿಣಾಮವಾದ ಮೇಲೆ ಗ್ರಹಿಸಲು, ಅಥವಾ ತಿಳಿಯಲು ಸಾಧ್ಯ. ದೈನಂದಿನ ಲೋಕಾನುಭವವು ಇದಕ್ಕೆ ಸಾಕ್ಷಿ. ಪುರುಷಾರ್ಥ ಶೂನ್ಯಾನಾಂ ಗುಣಾನಾಂ ಪ್ರತಿ ಪ್ರಸವ ಕೈವಲ್ಯಂ ಸ್ವರೂಪ ಪ್ರತಿಷ್ಠಾ ವಾ ಚಿತಿ ಶಕ್ತಿ: ಇತಿ ಪುರುಷಾರ್ಥವೆಂಬುದು, ತ್ರಿಗುಣಗಳು ಶೂನ್ಯವಾದಾಗ ಲಭಿಸುವ ಅರಿವು. ಇದರಿಂದ ಕೈವಲ್ಯವು, ಅಂದರೆ, ಆದಿ ಮೂಲವಾದ ಸ್ವ ಸ್ವರೂಪವು, ಸಾಕ್ಷಾತ್ ಆಗುತ್ತ ಲಭಿಸುತ್ತದೆ. ಚಿತಿಶಕ್ತಿ ಅಥವಾ ಮನಸ್ಸೆಂಬ ಶಕ್ತಿಯನ್ನು, ವಿವೇಕ ಜ್ಞಾನದ ಮೂಲಕ ಬಳಸುವುದರಿಂದ, ಶಾಶ್ವತವಾದ, ತ್ರಿಗುಣಾತೀತವಾದ, ಕೈವಲ ಸ್ಥಿತಿಯನ್ನು ಲಭಿಸಿಕೊಳ್ಳಬಹುದು. ಕೈವಲ್ಯವೇ ಪುರುಷಾರ್ಥದ ಹೆಗ್ಗುರಿ. ಓಂ ಶಾಂತಿ, ಶಾಂತಿ, ಶಾಂತಿಃ