ಮನಮಂಥನ
ದೀರ್ಘವಾಗಿ ಬಿಟ್ಟಳು.
ನಂತರ ವಿಚಾರಿಸಿದಾಗ ಕಳೆದ ಒಂದೆರಡು ವರ್ಷಗಳಿಂದಲೂ, ಆಗಿಂದಾಗ್ಗೆ, ಈ ರೀತಿ ಕತ್ತು ಅದುಮಿದಂತಾಗುತ್ತಿತ್ತೆಂದೂ, ಆದರೆ ಒಂದೆರಡು ತಿಂಗಳುಗಳಿಂದ ವಿಪರೀತಕ್ಕಿಟ್ಟುಕೊಂಡಿದೆಯೆಂದೂ, ಅವಳ ಗಂಡನಿಂದ ಗೊತ್ತಾಯಿತು. ಹಲವಾರು ಹೆಣ್ಣು ವೈದ್ಯರುಗಳಿಂದ ಪೂರ್ಣ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಳು. ಆ ವರದಿಗಳನ್ನೆಲ್ಲಾ ತಂದೂ ಇದ್ದಳು.
ದೇಹದ ಯಾವುದೊಂದು ಬೇನೆಯಿಂದಲೂ ಉಂಟಾದುದಲ್ಲ. ಈ ಆತಂಕ, ಎನ್ನುವುದು ಸ್ಪಷ್ಟವಾಯಿತು. ಮನೋವೈದ್ಯರ ಬಳಿಗೆ ಹೋಗಿ ಸಲಹೆಯನ್ನು ಪಡೆಯಿರಿ ಎಂದು ಆಕೆಯ ಮನೆ ವೈದ್ಯರು ಹೇಳಿದ್ದರು. ಆದರೆ ಮನೆಯವರು ಯಾರೂ ಒಪ್ಪಲಿಲ್ಲ. 'ಹುಚ್ಚಾಸ್ಪತ್ರೆಗೆ ಹೋಗುವಂತಹ ಕಾಯಿಲೆ ನನಗೇನಿದೆ? ಗಂಟಲಿನಲ್ಲಿ ಏನೋ ಇದೆ. ಇವರಾರಿಗೂ ಗೊತ್ತಾಗುತ್ತಿಲ್ಲ' ಎಂದು ಅವಳ ನಂಬಿಕೆ.
'ಯಾವ ಇಂಜಕ್ಷನ್ ಕೊಟ್ಟಿರಿ ? ಎರಡು ನಿಮಿಷಗಳಲ್ಲಿ ಎಲ್ಲವೂ ಸರಿ ಹೋಯಿತು, ಸದ್ಯಕ್ಕಾದರೂ' ಎಂದು ಕೇಳಿದಳು. ಇದರಿಂದ ಗುಣವಾಗುತ್ತೆ ಎಂದು ಒತ್ತಿ ಹೇಳಿದುದರಿಂದ ಗುಣಕಂಡಿತ್ತೇ ವಿನಹಾ, ಚುಚ್ಚಿದ ಯಃಕಶ್ಚಿತ್ ಮದ್ದಿನಿಂದಲ್ಲ ಎನ್ನುವುದು ನನಗೆ ಗೊತ್ತು, ಆದರೆ ಅದನ್ನು ಹೇಳುವಂತಿಲ್ಲ. ಆಕೆಯಲ್ಲಿ ಹುಟ್ಟಿದ ನಂಬಿಕೆಯನ್ನು ಬೆಳೆಸಿದರೆ ಅವಳಿಗೂ ಒಳ್ಳೆಯದು, ನನಗೂ ಕ್ಷೇಮ. ಆದರೆ ಈ ಪ್ರಯೋಗ, ಫಲಿತಾಂಶಗಳಿಂದ, ಕತ್ತು ಹಿಸುಕಿದಂತಾಗುತ್ತಿದ್ದುದು ಮನಸ್ಸಿನ ತೀವ್ರ ತಳಮಳದಿಂದಲೇ ಎನ್ನುವುದು ಖಂಡಿತವಾಯಿತು. ಹಾಗೂ ನಾನು ಮಾತನಾಡಿದ ಧಾಟಿಯು ಆಕೆಯ ಮನಸ್ಸಿಗೆ ಆಪ್ಯಾಯಮಾನವಾಗಿದೆ, ಅದರಿಂದ ಅವಳ ಮನಸ್ಸಿಗೆ ಸಮಾಧಾನವಾಗಿದೆ. ಆತಂಕವು ತಾತ್ಕಾಲಿಕವಾಗಿಯಾದರೂ ಶಮನವಾಗಿದೆ ಎನ್ನುವುದೂ ಸ್ಪಷ್ಟವಾಯಿತು.
ಹಳ್ಳಿಯ ಕಡೆಯ ಹೆಣ್ಣು ಆಕೆ. ಕಟ್ಟುನಿಟ್ಟು ಘೋಷಾವನ್ನು ಆಚರಿಸುವ ಶ್ರೀಮಂತ ಮುಸಲ್ಮಾನ್ ಮನೆಯಾಕೆ, ಹೊರಲೋಕದ ನಾಗರಿಕ ಪ್ರಪಂಚವು ಆಕೆಯನ್ನು ಸೋಕಿರಲೇ ಇಲ್ಲ. ಅಂದ ಮೇಲೆ ನಾಗರಿಕರ ಆತಂಕಕ್ಕೆ ಕಾರಣವಾಗುವ ವಿಷಯಗಳನ್ನು ವಿಚಾರಿಸುವ ಅಗತ್ಯವಿರಲಿಲ್ಲ. ಹಳೆಯ ಕಾಲದ ಮೂಢ ನಂಬಿಕೆಗಳೇನಾದರೂ ಕಾಡುತ್ತಿರಬಹುದೇ ? ಎಂದು ಅನ್ನಿಸಿತು, ಹಳ್ಳಿಯ ಕಡೆಯವರು ದೆವ್ವ ಪಿಶಾಚಿಗಳಲ್ಲಿ ಹೆಚ್ಚು ನಂಬುತ್ತಾರೆ. ಅಂತಹುದೇನಾದರೂ ಈಕೆಯನ್ನು ಕಾಡುತ್ತಿದೆಯೇ ? ನೋಡೋಣ ಒಂದು ಪಟ್ಟು ; ಅಡೇಟಿನ