ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೩೩

ಉಸಿರಾಟವು ನಿಷ್ಕರ್ಷಿಸುತ್ತಿತ್ತು. ಪ್ರಾಣ ಎಂದರೆ ಉಸಿರು ಎನ್ನುವಂತಾಯಿತು. ಅಷ್ಟು ಮುಖ್ಯ ಉಸಿರಾಟ,

ತಾಯಿ ಗರ್ಭದಲ್ಲಿ ಸಂಪೂರ್ಣ ರಕ್ಷಣೆಯನ್ನು ಮಗುವು ಪಡೆದಿರುತ್ತದೆ. ಸ್ವಂತ ಹೊಣೆಯ ಲವಲೇಶಾಂಶವೂ ಅದಕ್ಕಿರುವುದಿಲ್ಲ. ಆದರೂ ಅದರ ದೇಹದಲ್ಲಿ ರಕ್ತ ಸಂಚಾರವಾಗುತ್ತಿರುತ್ತದೆ. ಮಾಂಸಖಂಡಗಳೂ, ಮೂಳೆಗಳೂ ಬೆಳೆಯುತ್ತಿರುತ್ತವೆ. ಅಂದರೆ ಆಹಾರದ ಸರಬರಾಜೂ ಆಗುತ್ತಿರುತ್ತದೆ. ಆದರೆ ಪ್ರಾಣಕ್ಕೆ ಅತಿ ಮುಖ್ಯವಾದ ಉಸಿರಾಟವು ಇರುವುದೇ ಇಲ್ಲ. ಗರ್ಭದಲ್ಲಿನ ಮಗುವಿನ ಶ್ವಾಸಕೋಶಗಳು ಮೊಗ್ಗಿನಂತೆ ಮುದುರಿಕೊಂಡಿರುತ್ತವೆ. ತಾಯ ಉಸಿರಾಟದಿಂದ, ಮಗುವು ಅಗತ್ಯ ವಸ್ತುಗಳನ್ನು ರಕ್ತದ ಮೂಲಕ ಪಡೆಯುತ್ತದೆ.

ಗರ್ಭದಿಂದ ಹೊರಗೆ ಬಂದ ಕ್ಷಣದಲ್ಲಿ ತಾಯ ಆಸರೆಯು ತಪ್ಪಿತು. ಆಗ ಮಗುವು ಅಳುತ್ತದೆ. ಅಳುವಾಗ ಆ ತನಕ ಮುದುಡಿಕೊಂಡಿದ್ದ ಶ್ವಾಸಕೋಶಗಳು ತೆರೆಯಲ್ಪಡುತ್ತವೆ. ಅತ್ತಾಗ ಎಳೆದುಕೊಂಡ ಉಸಿರು, ಶ್ವಾಸಕೋಶಗಳ ಮೂಲೆ ಮೂಲೆಗಳನ್ನೂ ಬಿಡಿಸಿ ಅರಳಿಸಿ, ಮುಂದೆ ಶ್ವಾಸಕಾರ್ಯವನ್ನು ಅಣಿಯಾಗಿ ಮಾಡುವಂತೆ ಸಿದ್ಧಪಡಿಸುತ್ತದೆ.

ಸಂಪೂರ್ಣವಾಗಿ ಸುರಕ್ಷಿತವಾದ ಗರ್ಭದಲ್ಲಿರುವಾಗ ಯಾವ ಆತಂಕವೂ ಇರಲಗತ್ಯವಿಲ್ಲ. ಆದರೆ ಹೊರ ಪ್ರಪಂಚಕ್ಕೆ ಇಳಿದ ಕ್ಷಣ, ಶ್ವಾಸಕಾರ್ಯವು ಆರಂಭವಾಯಿತು. ಉಸಿರಾಡುವ ಹೊಣೆಯು ನನ್ನ ಮೇಲೆ ಬಿತ್ತು, ಎಂದು ಹುಟ್ಟಿದ ಮಗುವಿಗೆ ಆತಂಕವು ಉಂಟಾಗುತ್ತದೆ ಎನ್ನುವುದು ಊಹಾಪೋಹ. ಏಕೆಂದರೆ ಆತಂಕವನ್ನು ಅನುಭವಿಸುವ ಹಂತಕ್ಕೆ ಅದರ ಮನಸ್ಸು ಅರಳಿರುವುದೇ ಇಲ್ಲ. ಈ ಕಾರಣದಿಂದಲೇ ಜವಾಬ್ದಾರಿ, ಹೊಣೆ, ನಾನು, ನನ್ನದು ಎನ್ನುವ ಕಲ್ಪನೆಯು ಹುಟ್ಟಿರುವುದಿಲ್ಲ.

ಆದರೆ ಅದರ ಮೆದುಳು ಬೆಳೆದಿರುತ್ತದೆ. ದೇಹದ ವಿಧವಿಧ ಅಂಗಗಳಿಗೆ ನಿಕಟ ಸಂಪರ್ಕವನ್ನು ಅಣಿಮಾಡುವಷ್ಟು ಬೆಳೆದಿರುತ್ತದೆ. ಮೆದುಳು ಎಂದಾಗ ಎರಡು ಮುಖ್ಯ ಭಾಗಗಳನ್ನು ಗಮನಿಸಬೇಕು. ಒಂದು : ಪುರಾತನವಾದ ಮೆದುಳಿನ ಬುಡ. ದೇಹದ ಅಗತ್ಯ ಕಾರ್ಯಗಳನ್ನು ನಿಯಂತ್ರಿಸುವ ಮೆದುಳು ಕೇಂದ್ರಗಳೆಲ್ಲವೂ ಇಲ್ಲಿಯೇ ಇರುವುದು. ಇನ್ನೊಂದು ; ಮೆದುಳಿನ ಕಾರ್ಟೆಕ್ಸ್ ವಿಚಾರ ಶಕ್ತಿಗೂ, ಸ್ಮರಣೆಗೂ ಮೀಸಲಾದುದು ಈ ಭಾಗ, ಮೆದುಳಿನ ಬುಡವು ಹುಟ್ಟಿದ ಮಗುವಿನಲ್ಲಿ ಸಾಕಷ್ಟು ಬೆಳೆದಿರುತ್ತದೆ. ಆದರೆ ಮೆದುಳಿನ ಕಾರ್ಟೆಕ್ಸ್ ಭಾಗವು ಅಷ್ಟಾಗಿ ಬೆಳೆದಿರುವುದಿಲ್ಲ. ಮಗುವು ಬೆಳೆದಂತೆಲ್ಲ, ಅದರ ಜ್ಞಾನ